ಸತತ 5 ವರ್ಷದಿಂದ ಮೂವರು ಅಪ್ರಾಪ್ತ ಮಕ್ಕಳ ಮೇಲೆ ಕಾಮುಕ ಅಪ್ಪನಿಂದ ರೇಪ್!

Public TV
2 Min Read
RAPE 1

ಗಾಂಧಿನಗರ: ಪಾಪಿ ತಂದೆಯೊಬ್ಬನು ತನ್ನ ಮೂವರು ಅಪ್ರಾಪ್ತ ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿರುವ ಹೀನ ಕೃತ್ಯ ಗುಜರಾತಿನಲ್ಲಿ ನಡೆದಿದೆ.

ಗುಜರಾತಿನ ಪೋರಬಂದರ್ ನಗರದ ಪೊಲೀಸರು ಈಗ ಆರೋಪಿ ತಂದೆಯನ್ನು ಬಂಧಿಸಿದ್ದಾರೆ. ಆರೋಪಿ ತಂದೆಗೆ 40 ವರ್ಷ ವಯಸ್ಸಾಗಿದೆ. ಹಿರಿಯ ಮಗಳು ಕಮ್ಲಾಬಾಗ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?
ಆರೋಪಿಯ ಪತ್ನಿ 2008 ರಲ್ಲಿ ಮೃತಪಟ್ಟಿದ್ದಾರೆ. ಈತ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಆರೋಪಿಗೆ ಒಬ್ಬ ಗಂಡು ಮತ್ತು ನಾಲ್ವರು ಹೆಣ್ಣು ಮಕ್ಕಳಿದ್ದರು. ಹಿರಿಯ ಮಗಳಿಗೆ 16 ವರ್ಷ, ಎರಡನೇ ಮಗಳಿಗೆ 13 ಮತ್ತು ಕಿರಿಯ 10 ವರ್ಷ ವಯಸ್ಸಾಗಿದೆ. ಇವರೆಲ್ಲರೂ ಜುನಾಗಡ್ ನಲ್ಲಿ ವಸತಿ ಶಾಲೆಯಲ್ಲಿ ಇದ್ದು, ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

RAPE 2

ಶಾಲೆ ರಜೆ ಇದ್ದಾಗ ಆರೋಪಿಯೇ ಹೋಗಿ ಹಿರಿಯ ಮಗಳನ್ನು ಕರೆದುಕೊಂಡು ಬಂದು ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ. ಅದೇ ರೀತಿ ಉಳಿದ ಇಬ್ಬರು ಮಕ್ಕಳನ್ನು ರಜೆ ದಿನಗಳಲ್ಲಿ ಕರೆದುಕೊಂಡು ಬಂದು ನಿರಂತರ ಅತ್ಯಾಚಾರ ಎಸಗಿದ್ದಾನೆ. ಇದೇ ರೀತಿ ಸತತ ಐದು ವರ್ಷಗಳಿಂದ ಈ ಹೀನ ಕೃತ್ಯವನ್ನು ಮಾಡುತ್ತಿದ್ದಾನೆ ಎಂದು ಇನ್ಸ್ ಪೆಕ್ಟರ್ ಎಚ್.ಎಂ. ಪಟೇಲ್ ಹೇಳಿದ್ದಾರೆ.

ಅತ್ಯಾಚಾರ ಎಸಗಿದ್ದಲ್ಲದೇ ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಒಡ್ಡಿದ್ದಾನೆ. ಆದ್ದರಿಂದ ಐದು ವರ್ಷದಿಂದ ಈ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಇತ್ತೀಚೆಗೆ ಸೆಪ್ಟೆಂಬರ್ 3 ರಂದು ಕಿರಿಯ ಮಗಳನ್ನು ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಆಕೆ ಅಕ್ಕನಿಗೆ ತಿಳಿಸಿದ್ದಾಳೆ. ಇನ್ನೊಬ್ಬಳು ಕೂಡ ತನ್ನ ಮೇಲೆ ನಡೆದಿರುವ ಅತ್ಯಾಚಾರದ ಬಗ್ಗೆ ಹೇಳಿಕೊಂಡಿದ್ದಾಳೆ. ಕೊನೆಗೆ ಮೂವರು ಅಪ್ರಾಪ್ತರು ನಿರ್ಧಾರ ಮಾಡಿ ಕಮ್ಲಾಬಾಗ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪಟೇಲ್ ತಿಳಿಸಿದ್ದಾರೆ.

RAPE 1 1

ಸಂತ್ರಸ್ತರು ದೂರು ಕೊಟ್ಟ ಬಳಿಕ ಮೂವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಸದ್ಯಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೇಲೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *