ಭೋಪಾಲ್: ರಾಜಸ್ಥಾನ (Rajasthan) ಮೂಲದ ವ್ಯಕ್ತಿಯೊಬ್ಬ (32) ತನ್ನ ನಾಲ್ಕನೇ ಪತ್ನಿಗೆ ತ್ರಿವಳಿ ತಲಾಖ್ (Triple Talaq) ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಧ್ಯಪ್ರದೇಶ (Madhya Pradesh) ಇಂದೋರ್ ನಗರ ಪೊಲೀಸರು ತಿಳಿಸಿದ್ದಾರೆ.
ಮುಸ್ಲಿಂ ಮಹಿಳೆಯರ (Muslim Women) (ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆಯು ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುತ್ತದೆ. ಇಂತಹ ಪ್ರಕರಣಗಳಲ್ಲಿ ಆರೋಪಿಗೆ 3 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇದನ್ನೂ ಓದಿ: 35 ಪ್ರಯಾಣಿಕರನ್ನು ಬಿಟ್ಟು ನಿಗದಿತ ಸಮಯಕ್ಕೂ ಮೊದಲೇ ಹಾರಿತು ವಿಮಾನ
Advertisement
Advertisement
ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಸಂತ್ರಸ್ತ ಮಹಿಳೆ ಹಾಗೂ ಆರೋಪಿ ಇಮ್ರಾನ್ ಸಂರ್ಪಕಕ್ಕೆ ಬಂದು ನಂತರ ಮದುವೆಯಾಗಿದ್ದರು ಎಂದು ಸ್ಥಳೀಯ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮನೀಶಾ ಡಾಂಗಿ ಹೇಳಿದ್ದಾರೆ.
Advertisement
ಇಮ್ರಾನ್‌ಗೆ ಈಗಾಗಲೇ ಮೂವರು ಪತ್ನಿಯರಿದ್ದಾರೆ ಎಂಬುದು ನಾಲ್ಕನೇ ಪತ್ನಿಗೆ ಗೊತ್ತಾಗಿದೆ. ರಾಜಸ್ಥಾನದಲ್ಲಿ ನೆಲೆಸಿರುವ ಇಮ್ರಾನ್, ನಾಲ್ಕನೇ ಪತ್ನಿಗೆ “ತಲಾಖ್, ತಲಾಖ್, ತಲಾಖ್” ಎಂದು ಸಂದೇಶ ಕಳುಹಿಸುವ ಮೂಲಕ ಸಂಬಂಧವನ್ನು ಕೊನೆಗೊಳಿಸಲು ತಿಳಿಸಿದ್ದ. ಇದನ್ನೂ ಓದಿ: ಸಮಾಜವಾದಿ ಪಕ್ಷದ ನಾಯಕನ ಮಗಳೊಂದಿಗೆ ಓಡಿ ಹೋದ 47ರ ಬಿಜೆಪಿ ನಾಯಕ
Advertisement
ಈ ಸಂಬಂಧ ಮಹಿಳೆಯ ದೂರಿನ ಮೇರೆಗೆ ಸ್ಥಳೀಯ ಪೊಲೀಸರು ಸೋಮವಾರ ಇಮ್ರಾನ್ ವಿರುದ್ಧ ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k