8 ವರ್ಷ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಯುವಕ ಅರೆಸ್ಟ್

Public TV
2 Min Read
arrested new

ಮುಂಬೈ: 8 ವರ್ಷಗಳ ಕಾಲ ಭಾರತದಲ್ಲಿ (India) ಅಕ್ರಮವಾಗಿ ನೆಲೆಸಿದ್ದ 22 ವರ್ಷದ ಪಾಕಿಸ್ತಾನದ (Pakistan) ಯುವಕನನ್ನು (Man) ಪುಣೆ (Pune) ಪೊಲೀಸರು ಬಂಧಿಸಿದ್ದಾರೆ.

ಯುವಕ ನಕಲಿ ದಾಖಲೆಗಳನ್ನು ಬಳಸಿಕೊಂಡು 8 ವರ್ಷಗಳ ಕಾಲ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದಾನೆ ಎಂಬ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಆತನನ್ನು ಭವಾನಿ ಪೇಠ್‌ನಲ್ಲಿ ನೆಲೆಸಿರುವ ಮಹಮ್ಮದ್ ಅಮನ್ ಅನ್ಸಾರಿ (22) ಎಂದು ಗುರುತಿಸಲಾಗಿದೆ. ಯುವಕ 2015 ರಿಂದ ಭಾರತದಲ್ಲಿ ನೆಲೆಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

police jeep 1

ವರದಿಗಳ ಪ್ರಕಾರ ಯುವಕ ಭಾರತ ಹಾಗೂ ಪಾಕಿಸ್ತಾನದ ದಂಪತಿಗೆ ಜನಿಸಿದ್ದಾನೆ. ಆತನ ತಾಯಿ ಭಾರತ ಮೂಲದವಳಾಗಿದ್ದು, ತಂದೆ ಪಾಕಿಸ್ತಾನದವರು. ದಂಪತಿ ಬೇರ್ಪಟ್ಟ ಬಳಿಕ ಮಹಿಳೆ ತನ್ನ ಮಗನನ್ನು ಭಾರತಕ್ಕೆ ಕರೆತಂದಿದ್ದು, 2015ರಿಂದ ತನ್ನ ತಾಯಿಯ ಕುಟುಂಬದೊಂದಿಗೆ ವಾಸವಿದ್ದಾಳೆ. ಆದರೆ ಯುವಕ ಭಾರತದಲ್ಲಿ ಅಕ್ರಮವಾಗಿ ನೆಲೆಸಲು ನಕಲಿ ದಾಖಲೆಗಳನ್ನು ಬಳಸಿದ್ದಾನೆ ಎಂದು ಆರೋಪಿಸಲಾಗಿದೆ.

ಅನ್ಸಾರಿ ಹುಟ್ಟಿದ್ದು ಪಾಕಿಸ್ತಾನದಲ್ಲಿ. ಮದುವೆಯ ಬಳಿಕ ಮಹಿಳೆ ಪಾಕಿಸ್ತಾನಕ್ಕೆ ಹೋಗಿದ್ದಳು. ಆಕೆ ಅನ್ಸಾರಿ ಸೇರಿದಂತೆ ಮೂವರು ಮಕ್ಕಳಿಗೆ ತಾಯಿಯಾಗಿದ್ದಾಳೆ. ಬಳಿಕ ಆಕೆ ಪತಿಯಿಂದ ಬೇರ್ಪಟ್ಟು ಪುತ್ರ ಅಮನ್ ಅನ್ಸಾರಿಯೊಂದಿಗೆ ದುಬೈಗೆ ತೆರಳಿದ್ದಳು.

Passport

2015 ರಲ್ಲಿ ಅನ್ಸಾರಿಯನ್ನು ಪುಣೆಗೆ ಕರೆತರಲಾಗಿದ್ದು, ಅಲ್ಲಿ ಆತ ತನ್ನ ಸಂಬಂಧಿಕರೊಂದಿಗೆ ವಾಸವಿದ್ದ. ಯುವಕ ಪುಣೆಯಲ್ಲಿ ಅಧ್ಯಯನ ಮುಗಿಸಿದ್ದು, ನಕಲಿ ಭಾರತೀಯ ದಾಖಲೆಗಳನ್ನು ಸಂಗ್ರಹಿಸಿ, ಅದನ್ನು ಬಳಸಿಕೊಂಡು ಭಾರತೀಯ ಪಾಸ್‌ಪೋರ್ಟ್ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾನೆ. ಸದ್ಯ ಯುವಕ ಪುಣೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮತ್ತೆ ಇಂಧನ ಬೆಲೆ ಏರಿಕೆ – 1 ಲೀಟರ್ ಪೆಟ್ರೋಲ್‌ಗೆ 272 ರೂ.

ಪುಣೆ ನಗರ ಪೊಲೀಸರ ವಿದೇಶಿ ನೋಂದಣಿ ಕಚೇರಿ (FRO) ಪುಣೆಯಲ್ಲಿ ವಿದೇಶಿ ಪ್ರಜೆಗಳ ಅಕ್ರಮ ಚಟುವಟಿಕೆಗಳನ್ನು ಪರಿಶೀಲಿಸುತ್ತದೆ. ಮಾರ್ಚ್ 8 ರಂದು ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಪಂಕಜ್ ಪವಾರ್ ಮತ್ತು ಇತರರನ್ನು ಒಳಗೊಂಡ ಎಫ್‌ಆರ್‌ಒ ತಂಡ ಆರೋಪಿ ಅನ್ಸಾರಿ ಪಾಕಿಸ್ತಾನಿ ಪ್ರಜೆಯಾಗಿದ್ದು 2015 ರಿಂದ ಭವಾನಿ ಪೇಠ್ ಪ್ರದೇಶದ ಚುಡಾಮನ್ ತಾಲಿಮ್ ಬಳಿ ಅಕ್ರಮವಾಗಿ ನೆಲೆಸಿದ್ದಾನೆ ಎಂಬುದನ್ನು ಪತ್ತೆಹಚ್ಚಿದೆ.

ARREST

ಅನ್ಸಾರಿ ಭಾರತದಲ್ಲಿ ಉಳಿದುಕೊಳ್ಳಲು ಯಾವುದೇ ಮಾನ್ಯ ದಾಖಲೆಗಳನ್ನು ಹೊಂದಿಲ್ಲ. ಅಲ್ಲದೆ ಆತ ನಕಲಿ ದಾಖಲೆಗಳನ್ನು ಸಲ್ಲಿಸಿ ಭಾರತೀಯ ಪಾಸ್‌ಪೋರ್ಟ್ ಪಡೆದು ಪುಣೆಯಿಂದ ದುಬೈಗೆ ವಿಮಾನದಲ್ಲಿ ಪ್ರಯಾಣಿಸಿದ್ದಾನೆ. ಆದ್ದರಿಂದ ಸಂಪೂರ್ಣ ವಿಚಾರಣೆ ನಡೆಸಿ, ಬಳಿಕ ಅನ್ಸಾರಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ), 468 (ನಕಲಿ), 471 ಮತ್ತು ವಿದೇಶಿಯರ ಕಾಯ್ದೆ 1946 ಮತ್ತು ಪಾಸ್‌ಪೋರ್ಟ್ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮಂಗಳವಾರ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೊಲೆ ಆರೋಪಿಗಳ ಜಮೀನಿಗೆ ನುಗ್ಗಿದ ಬುಲ್ಡೋಜರ್ – ಬೆಳೆಗಳು ನೆಲಸಮ

Share This Article
Leave a Comment

Leave a Reply

Your email address will not be published. Required fields are marked *