ಇಸ್ಲಾಮಾಬಾದ್: ಮುಸ್ಲಿಮರ ರಂಜಾನ್ (Ramzan) ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯುಳಿದಿವೆ. ಈ ಸಂದರ್ಭ ಪಾಕಿಸ್ತಾನ ಸರ್ಕಾರವು (Pakistan Government) ಇಂಧನ ಬೆಲೆ ಏರಿಕೆ ಮಾಡಿದ್ದು ಜನರ ಮೇಲೆ ಒತ್ತಡ ಹೆಚ್ಚಾಗಿದೆ.
ಅಮೆರಿಕ ಡಾಲರ್ (US Dollar) ಎದುರು ಪಾಕಿಸ್ತಾನಿ ರೂಪಾಯಿ (PKR) ದುರ್ಬಲಗೊಂಡ ಹಿನ್ನೆಲೆಯಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಹೊಸ ಬೆಲೆಗಳು ಗುರುವಾರ ಮಧ್ಯರಾತ್ರಿ 12 ಗಂಟೆಗೆ ಜಾರಿಗೆ ಬಂದಿದ್ದು ಮಾರ್ಚ್ 31ರ ವರೆಗೆ ಜಾರಿಯಲ್ಲಿರುತ್ತದೆ. ಪಾಕಿಸ್ತಾನ ಸರ್ಕಾರವು ಪೆಟ್ರೋಲ್ ಬೆಲೆಯನ್ನು ಲೀಟರಿಗೆ 5ರೂ. ಹೆಚ್ಚಳ ಮಾಡಿದ್ದು ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ (Petrol) ಬೆಲೆಯು 272 ಪಾಕಿಸ್ತಾನ ರೂ.ಗಳಾಗಿದೆ. ಅಲ್ಲದೇ ಡೀಸೆಲ್ (Diesel) ಬೆಲೆಯನ್ನು ಲೀಟರಿಗೆ 13 ರೂ. ಹೆಚ್ಚಳ ಮಾಡಲಾಗಿದ್ದು ಈಗ 280 ರೂ. ಆಗಿದೆ. ಇದನ್ನೂ ಓದಿ: UK ಸಿಲಿಕಾನ್ ವ್ಯಾಲಿ ಬ್ಯಾಂಕ್ ಘಟಕವನ್ನು 99 ರೂ.ಗೆ ಖರೀದಿದ HSBC
ಫೆಬ್ರವರಿ 28ರಂದು ಪಾಕಿಸ್ತಾನ ಸರ್ಕಾರವು ಪೆಟ್ರೋಲ್ ಬೆಲೆಯನ್ನು ಪ್ರತೀ ಲೀಟರಿಗೆ 5 ಪಾಕಿಸ್ತಾನಿ ರುಪಾಯಿ ಕಡಿಮೆ ಮಾಡಿತ್ತು. ಹೀಗಾಗಿ ಪೆಟ್ರೋಲ್ ಬೆಲೆಯು ಲೀಟರ್‌ಗೆ 267 ರೂಗೆ ಇಳಿಕೆಯಾಗಿತ್ತು. ಇದೀಗ ಮತ್ತೆ ಪಾಕಿಸ್ತಾನ ಸರ್ಕಾರವು ಬೆಲೆ ಏರಿಕೆ ಮಾಡಿದೆ. ಇದನ್ನೂ ಓದಿ: ಬಂಧನ ಕೈಬಿಟ್ಟ ಪಾಕ್ ಪೊಲೀಸರು – ಗ್ಯಾಸ್ ಮಾಸ್ಕ್ ಧರಿಸಿ ಮನೆಯಿಂದ ಹೊರಬಂದ ಇಮ್ರಾನ್ ಖಾನ್
ಜನರು ತಮ್ಮ ಜೀವನವನ್ನು ಪೂರೈಸಲು ಹೆಣಗಾಡುತ್ತಿರುವ ಸಂದರ್ಭದಲ್ಲಿ ಪೊಟ್ರೋಲ್ ದರ ಏರಿಕೆಯು ಹಣದುಬ್ಬರವನ್ನು ಮತ್ತಷ್ಟು ತಳ್ಳುವ ನಿರೀಕ್ಷೆಯಿದೆ ಮುಂದಿನ ದಿನಗಳಲ್ಲಿ ಈ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. 50 ವರ್ಷದಲ್ಲೇ ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ದರ ಭಾರೀ ಏರಿಕೆ ಕಾಣುತ್ತಿದೆ. ಇದನ್ನೂ ಓದಿ: ಪತನದ ಭೀತಿಯಲ್ಲಿ ಮತ್ತೊಂದು ಬ್ಯಾಂಕ್ – ಕ್ರೆಡಿಟ್ ಸ್ಯೂಸಿ ಸಹಾಯಕ್ಕೆ ನಿಂತ ಸ್ವಿಸ್ ಬ್ಯಾಂಕ್
ಇಲ್ಲಿಯವರೆಗೆ ಆಡಳಿತ ನಡೆಸಿದ್ದ ಪಾಕ್ ಸರ್ಕಾರಗಳು ಇಂಧನ, ವಿದ್ಯುತ್‌ಗಳನ್ನು ಸಬ್ಸಿಡಿ ದರದಲ್ಲಿ ಜನರಿಗೆ ನೀಡುತ್ತಿತ್ತು. ಸಬ್ಸಿಡಿ ದರವೇ ಹೆಚ್ಚಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಅರ್ಥವ್ಯವಸ್ಥೆ ಕುಸಿದಿದ್ದು ಆರ್ಥಿಕ ಸಹಾಯ ಮಾಡುವಂತೆ ವಿಶ್ವದ ಹಲವು ದೇಶಗಳಲ್ಲಿ ಬೇಡಿಕೊಳ್ಳುತ್ತಿದೆ. ಈ ಹಿಂದೆ ಪಾಕ್‌ಗೆ ಭೇಟಿ ನೀಡಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ನಿಯೋಗ ಕೂಡಲೇ ವಿದ್ಯುತ್ ದರ ಏರಿಸಿ, ಎಲ್ಲಾ ಸಬ್ಸಿಡಿಗಳನ್ನು ಕಡಿತಗೊಳಿಸಿ ಎಂದು ಸೂಚಿಸಿತ್ತು. ಈ ಬೆನ್ನಲ್ಲೇ ಪಾಕ್ ಸರ್ಕಾರ ಪಾಕ್ ಆಕ್ರಮಿತ ಕಾಶ್ಮೀರದ ಜನತೆಗೆ ನೀಡಿದ್ದ ಸಬ್ಸಿಡಿಯನ್ನು ಬಂದ್ ಮಾಡಿತ್ತು. ಇದನ್ನೂ ಓದಿ: ಕೂಡಲೇ ವಿದ್ಯುತ್ ದರ ಏರಿಸಿ – ಪಾಕ್‌ಗೆ ಐಎಂಎಫ್ ಶಾಕ್: PoK ಜನತೆಗೆ ನೀಡಿದ್ದ ಸಬ್ಸಿಡಿ ಬಂದ್