ಪಾಟ್ನಾ: ಪ್ರೇಯಸಿಯನ್ನು ಭೇಟಿಯಾಗಲು ಹೋದ ಯುವಕನನ್ನು ಬಲವಂತವಾಗಿ ವಿವಾಹ ಮಾಡಿಸಿದ ಘಟನೆ ಬಿಹಾರದ ಬೇಗುಸರಾಯ್ನಲ್ಲಿ ನಡೆದಿದೆ.
Advertisement
ಆದಿತ್ಯ ಕುಮಾರ್ ತನ್ನ ಪ್ರೇಯಸಿಯನ್ನು ಹೊಲದಲ್ಲಿ ಭೇಟಿಯಾಗಲು ಹೋಗಿದ್ದನು. ಇಬ್ಬರು ಜೊತೆಯಲ್ಲಿರುವುದನ್ನು ಗಮನಿಸಿದ ಗ್ರಾಮಸ್ಥರು ಯುವಕನನ್ನು ಥಳಿಸಿ, ಅವನನ್ನು ಬಂಧನದಲ್ಲಿಟ್ಟು ಕೊಂಡಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆಯಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
Advertisement
Advertisement
ನಂತರ ಆದಿತ್ಯ ಕುಮಾರ್ಗೆ ಆತನ ಪ್ರೇಯಸಿಯೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ವಧುವಿನ ಪಾಲಕರು ಸ್ಥಳಕ್ಕೆ ಆಗಮಿಸಿ ವಿವಾಹದಲ್ಲಿ ಭಾಗಿಯಾಗಿದ್ದಾರೆ. ಯುವಕನ ಕುಟುಂಬಕ್ಕೂ ಈ ಕುರಿತು ತಿಳಿಸಲಾಗಿದೆ. ಬಿಹಾರದಲ್ಲಿ ಇಂತಹ ಬಲವಂತದ ವಿವಹಾಗಳು ಸಾಮನ್ಯವಾಗಿದೆ. ಆದರೆ ಈ ಘಟನೆಯ ಕುರಿತಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ.