ಮುಂಬೈ: ಚಿನ್ನದ ಕಿವಿಯೋಲೆಯನ್ನು (Gold Earring) ಕೊಟ್ಟಿಲ್ಲವೆಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಲಸೋಪಾರಾದಲ್ಲಿ ಪತ್ನಿಯನ್ನೇ (Wife) ಕೊಂದು ಪತಿಯೊಬ್ಬ (Husband) ಪರಾರಿಯಾಗಿದ್ದಾರೆ,
32 ವರ್ಷದ ವ್ಯಕ್ತಿಯನ್ನು ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಇತ್ತೀಚೆಗೆ ಆತ ತನ್ನ ತಾಯಿಯ ಅಂತ್ಯಸಂಸ್ಕಾರದ ನಂತರದ ವಿಧಿವಿಧಾನಗಳನ್ನು ಮಾಡಲು ಹಣ ಕಡಿಮೆ ಇರುವುದರಿಂದ ಪತ್ನಿ ಬಳಿ ತನ್ನ ಚಿನ್ನದ ಕಿವಿಯೋಲೆಗಳನ್ನು ನೀಡಲು ಒತ್ತಾಯಿಸಿದ್ದಾನೆ. ಅದರೆ ಚಿನ್ನದ ಕಿವಿಯೋಲೆಯನ್ನು ನೀಡಲು ಆಕೆ ನಿರಾಕರಿಸಿದ್ದಾಳೆ. ಇದನ್ನೂ ಓದಿ: ಬೇರೆಯವಳು ಕಾಲ್ ಪಿಕ್ ಮಾಡಿದ್ದಕ್ಕೆ ಬಾಯ್‍ಫ್ರೆಂಡ್ ಮನೆಗೆ ಬೆಂಕಿ ಇಟ್ಲು
Advertisement
Advertisement
ಇದರಿಂದ ಕೋಪಗೊಂಡ ಪತಿ ನ.19ರಂದು ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿ ಮಹಾರಾಷ್ಟç ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಈ ವೇಳೆ ಆರೋಪಿ ವಾರಣಾಸಿಗೆ ಪರಾರಿಯಾಗುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಮೀರಾ ಭಯಂದರ್ ವಸಾಯಿ ವಿರಾರ್ (ಎಂಬಿವಿವಿ) ಪೊಲೀಸರ ತಂಡವು ಲಲಿತ್‌ಪುರಕ್ಕೆ ಧಾವಿಸಿ ರೈಲಿನಲ್ಲಿ ಬಂಧಿಸಿದೆ. ಇದನ್ನೂ ಓದಿ: ಪತ್ನಿಯನ್ನು ಕೊಂದು ಆಕೆಯ ಶವವನ್ನು ತುಂಡರಿಸಿ ವಿಕೃತಿ ಮೆರೆದ ಪತಿ