ಲಕ್ನೋ: ಪತಿಯೊಬ್ಬ (Husband) ಪತ್ನಿಯ (Wife) ಶವವನ್ನು ತುಂಡರಿಸಿ ದೂರದ ಸ್ಥಳದಲ್ಲಿ ವಿಲೇವಾರಿ ಮಾಡಿರುವ ಪ್ರಕರಣ ಉತ್ತರಪ್ರದೇಶದ ಸೀತಾಪುರದಲ್ಲಿ ನಡೆದಿದೆ.
ಉತ್ತರಪ್ರದೇಶದ ಸೀತಾಪುರ ಜಿಲ್ಲೆಯ ರಾಮ್‌ಪುರ ಕಲಾನ್ ಪ್ರದೇಶದ ನಿವಾಸಿ ಜ್ಯೋತಿ ಅಲಿಯಾಸ್ ಸ್ನೇಹಾ ಎಂಬಾಕೆ ಮೃತ ಮಹಿಳೆಯಾಗಿದ್ದು, ಆಕೆಯ ಪತಿ ಪಂಕಜ್ ಮೌರ್ಯ ಹಾಗೂ ಆತನ ಸ್ನೇಹಿತ ದುರ್ಜನ್ ಪಾಸಿ ಬಂಧಿತ (Arrest) ವ್ಯಕ್ತಿಗಳು.
Advertisement
Advertisement
ಪಂಕಜ್ ಹತ್ತು ವರ್ಷದ ಹಿಂದೆ ಸ್ನೇಹಾಳನ್ನು ಮದುವೆಯಾಗಿದ್ದ. ಸ್ನೇಹಾ ಪ್ರತಿನಿತ್ಯ ಮದ್ಯ ಸೇವನೆ ಮಾಡುತ್ತಿದ್ದಳು. ಅಷ್ಟೇ ಅಲ್ಲದೇ ಹಲವು ದಿನಗಳಿಂದ ಆಕೆಗೆ ಬೇರೆಯವರ ಜೊತೆಗೂ ಸಂಬಂಧವಿದ್ದು, ಆಕೆ ಯಾರದ್ದೋ ಮನೆಯಲ್ಲಿ ಇರುತ್ತಿದ್ದಳು. ಇದರಿಂದಾಗಿ ಪ್ರತಿನಿತ್ಯ ಸ್ನೇಹಾ ಹಾಗೂ ಪಂಕಜ್ ಮಧ್ಯೆ ಜಗಳವಾಗುತ್ತಿತ್ತು. ಇದರಿಂದಾಗಿ ಪಂಕಜ್ ಸ್ನೇಹಾಳನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.
Advertisement
Advertisement
ಇದಾದ ಬಳಿಕ ಯೋಜನೆಯನ್ನು ರೂಪಿಸಿ ತನ್ನ ಸ್ನೇಹಿತ ದುರ್ಜನ್ ಸಹಾಯದಿಂದ ಪತ್ನಿ ಸ್ನೇಹಾಳನ್ನು ಕೊಲೆ ಮಾಡಿದ್ದಾನೆ. ಅದಾದ ಬಳಿಕ ಯಾರಿಗೂ ಗೊತ್ತಾಗದಂತೆ ಸ್ನೇಹಾಳ ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ್ದಾನೆ. ಇದನ್ನೂ ಓದಿ: ಬುದ್ಧಿವಾದ ಹೇಳಿದ್ದಕ್ಕೆ ಶಾಲೆ ಬಿಟ್ಟ ಶಾರೀಕ್- ಕುಕ್ಕರ್ ಬಾಂಬರ್ ಹಿನ್ನೆಲೆಯೇ ರೋಚಕ
ಘಟನೆಗೆ ಸಂಬಂಧಿಸಿ ಸೀತಾಪುರ ಪೊಲೀಸರು ನವೆಂಬರ್ 8 ರಂದು ಗುಲಾರಿಹಾ ಪ್ರದೇಶದಿಂದ ಸ್ನೇಹಾಳ ದೇಹದ ಭಾಗಗಳನ್ನು ವಶಪಡಿಸಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮತ್ತೆ ಧರ್ಮ ದಂಗಲ್ ಶುರು- ಕುಕ್ಕೆಯಲ್ಲಿ ಷಷ್ಠಿ ವೇಳೆ ಹಿಂದೂಯೇತರರ ವ್ಯಾಪಾರಕ್ಕೆ ನಿಷೇಧ