ಹಾಂಗ್ ಕಾಂಗ್: ಇಲ್ಲಿನ ವಿಮಾನ ನಿಲ್ದಾಣದಲ್ಲಿ (Hong Kong) ಕೆಲಸ ಮಾಡುತ್ತಿದ್ದ ಸಿಬ್ಬಂದಿ, ವಿಮಾನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಅಪರೂಪದ ಘಟನೆ ನಡೆದಿದೆ.
ಮೃತರ ಹೆಸರು ತಿಳಿದುಬಂದಿಲ್ಲ. ಇವರು ಜೋರ್ಡಾನ್ ಪ್ರಜೆ. ಹಾಂಗ್ ಕಾಂಗ್‌ನಲ್ಲಿ ಕೆಲಸ ಮಾಡುತ್ತಿದ್ದ. ಟವ್ ಟ್ರಕ್ ಚಲಾಯಿಸುತ್ತಿದ್ದ ವೇಳೆ ಕೆಳಗೆ ಬಿದ್ದಿದ್ದಾನೆ. ಈ ವೇಳೆ ವಿಮಾನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಇದನ್ನೂ ಓದಿ: ಬ್ರಿಟನ್ ಮೂರನೇ ಚಾರ್ಲ್ಸ್‌ಗೆ ಕ್ಯಾನ್ಸರ್ ದೃಢ – ಶೀಘ್ರವೇ ಗುಣಮುಖರಾಗುವಂತೆ ಹಾರೈಸಿದ ಮೋದಿ
Advertisement
Advertisement
ಹಾಂಗ್ ಕಾಂಗ್‌ನ ವಿಮಾನ ನಿಲ್ದಾಣ ಪ್ರಾಧಿಕಾರವು, ಈ ವ್ಯಕ್ತಿ ಗ್ರೌಂಡ್ ಸಪೋರ್ಟ್ ಮತ್ತು ನಿರ್ವಹಣಾ ಸಂಸ್ಥೆ ಚೀನಾ ಏರ್‌ಕ್ರಾಫ್ಟ್ ಸರ್ವಿಸಸ್‌ನಲ್ಲಿ ಉದ್ಯೋಗಿ ಎಂದು ಹೇಳಿದೆ. ಟ್ರಕ್ ಚಾಲನೆ ಮಾಡುವಾಗ ಈತ ಸೀಟ್ ಬೆಲ್ಟ್ ಹಾಕಿರಲಿಲ್ಲ ಎಂದು ಶಂಕಿಸಲಾಗಿದೆ.
Advertisement
Advertisement
ನಿಲ್ದಾಣದಲ್ಲಿ ವಿಮಾನ ಹಿಂದಕ್ಕೆ ಚಲಿಸುವಂತೆ ಮಾಡಲು ಟವ್ ಟ್ರಕ್‌ನ್ನು ಬಳಸುತ್ತಾರೆ. ಈ ಟ್ರಕ್ ಮೂಲಕ ವಿಮಾನ ಹಿಂದಕ್ಕೆ ಚಲಾಯಿಸುವಂತೆ ಮಾಡುವ ಸಿಬ್ಬಂದಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ವಿಮಾನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಇದನ್ನೂ ಓದಿ: ಸ್ನೈಪರ್ ಬಳಸಿ ಅಟ್ಯಾಕ್ – ಪಾಕ್‌ನಲ್ಲಿ ಉಗ್ರರ ದಾಳಿಗೆ 10 ಮಂದಿ ಪೊಲೀಸ್ ಅಧಿಕಾರಿಗಳು ಬಲಿ