– ಸರ್.. ಗಲಾಟೆ ನಡೀತಿದೆ ಬೇಗ ಬನ್ನಿ ಅಂತಾ ಪೊಲೀಸರಿಗೆ ಸುಳ್ಳು ಕರೆ
– ಸ್ಥಳಕ್ಕೆ ದೌಡಾಯಿಸಿದ ಪೊಲೀಸರ ಬಳಿ ಮಾವನ ಮನೆಗೆ ಡ್ರಾಪ್ ಕೇಳಿದ – ಮುಂದೇನಾಯ್ತು?
ಚಿಕ್ಕಮಗಳೂರು: ಪಿತೃಪಕ್ಷದ ಊಟಕ್ಕೆ ಹೋಗಲು ವ್ಯಕ್ತಿಯೊಬ್ಬ ಪೊಲೀಸ್ ಜೀಪ್ ಕರೆಸಿಕೊಂಡಿರುವ ಘಟನೆ ಚಿಕ್ಕಮಗಳೂರಿನ (Chikkamagaluru) ಮೂಡಿಗೆರೆಯಲ್ಲಿ ನಡೆದಿದೆ.
112 ಗೆ ಫೋನ್ ಮಾಡಿದ ವ್ಯಕ್ತಿ, ‘ಸರ್… ಗಲಾಟೆ ನಡೀತಿದೆ.. ಬೇಗ ಬನ್ನಿ’ ಅಂತಾ ಮನವಿ ಮಾಡಿದ್ದ. ಸ್ಥಳಕ್ಕೆ ಬಂದ ಪೊಲೀಸರಿಗೆ ಮಾವನ ಮನೆಗೆ ಡ್ರಾಪ್ ಮಾಡುವಂತೆ ಕೇಳಿಕೊಂಡಿದ್ದಾನೆ. ಇದನ್ನೂ ಓದಿ: ಕೆರೆ ಕೋಡಿ ಕೆಲಸ ಮಾಡುವಾಗ ಮಣ್ಣು ಕುಸಿತ- ಮಣ್ಣಿನಡಿ ಸಿಲುಕಿ ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ
‘ಗಾಡಿ ಯಾವು ಇಲ್ಲ… ಮಳೆ ಬೇರೆ, ಪಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡುವಂತೆ ಪೊಲೀಸರ ಬಳಿ ವ್ಯಕ್ತಿ ಮನವಿ ಮಾಡಿದ್ದಾನೆ. ಇದರಿಂದ ಪೆಚ್ಚಾದ ಪೊಲೀಸರು, ಆ ವ್ಯಕ್ತಿಗೆ ಬೈಯ್ಯಬೇಕೋ ಅಥವಾ ನಗಬೇಕೋ ತಿಳಿಯದೇ ಸುಮ್ಮನಾದರು.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿ ಗಲಾಟೆ ನಡೆಯುತ್ತಿದೆ ಎಂದು ಅದೇ ಗ್ರಾಮದ ಅಶೋಕ್ ಎಂಬ ವ್ಯಕ್ತಿ, ಪೊಲೀಸರಿಗೆ ಫೋನ್ ಮಾಡಿದ್ದ. ಮಾವನ ಮನೆಗೆ ಊಟಕ್ಕೆ ಹೊರಟಿದ್ದ ಅಶೋಕ್‌ಗೆ ಪೊಲೀಸರು ಬುದ್ದಿಮಾತು ಹೇಳಿದ್ದಾರೆ. ಕೊನೆಗೆ ಪೊಲೀಸರು, ಲಾರಿಯೊಂದಕ್ಕೆ ಅಡ್ಡ ಹಾಕಿ ಆ ವ್ಯಕ್ತಿಯನ್ನ ಮಾವನ ಮನೆಗೆ ಕಳಿಸಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ವಿವಾದ – ಇಂದಿನಿಂದ ಟಿಟಿಡಿ ದೇವಾಲಯ ಪವಿತ್ರೋತ್ಸವ