ಬೆಂಗಳೂರು: ಮಗನ ರ‍್ಯಾಶ್ ಡ್ರೈವಿಂಗ್ ಫೋಟೋ ತೆಗೆದಿದ್ದಕ್ಕೆ ಪತ್ನಿ ಪೊರಕೆ ಹಿಡಿದು ರೋಡಿನಲ್ಲಿ ನಿಂತರೆ, ಇತ್ತ ಪತಿ ಫೋಟೋಶೂಟ್ ಮಾಡಿಕೋ ಎಂದು ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕ್ಷುಲ್ಲಕ ಕಾರಣಕ್ಕೆ ವೃದ್ಧ ದಂಪತಿ ಮೇಲೆ ಪತ್ನಿ ಪೊರಕೆಯಲ್ಲಿ ಹಲ್ಲೆ ಮಾಡಲು ಮುಂದಾಗಿದ್ದು, ಪತಿ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದಿದ್ದಾನೆ. ವೃದ್ಧ ದಂಪತಿ ಮೇಲಾಗಿರುವ ದೌರ್ಜನ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ವೃದ್ಧ ದಂಪತಿ ಆಗಿರುವ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಬೆನೆಟ್ ಮತ್ತು ಸುಶೀಲಾ ಅರಕೆರೆಯ ಸರಸ್ವತಿ ಪುರಂನಲ್ಲಿ ವಾಸವಾಗಿದ್ದಾರೆ. ಪಕ್ಕದ ಮನೆಯ ಮಹೇಂದ್ರ ಕಶ್ಯಪ್ ಹಾಗೂ ಭಾಗ್ಯ ದಂಪತಿ ಮಗ ಮೈನರ್ ಆಗಿದ್ದು, ನಿತ್ಯ ಮನೆ ಮುಂದೆ ರ‍್ಯಾಶ್ ಡ್ರೈವಿಂಗ್ ಮಾಡುತ್ತಿರುತ್ತಾನೆ. ಯುವಕನಿಗೆ ಬುದ್ಧಿವಾದ ಹೇಳಿದರೂ ಕಿವಿಗೆ ಹಾಕಿಕೊಳ್ಳದಕ್ಕೆ ಬೆನೆಟ್ ಫೋಟೋ ತೆಗೆದುಕೊಂಡಿದ್ದಾರೆ.
Advertisement
Advertisement
ಮಗನ ಫೋಟೋ ತೆಗೆದ ಕಾರಣಕ್ಕೆ ನಮ್ಮ ಮೇಲೆ ಮಹೇಂದ್ರ ಕಶ್ಯಾಪ್ ದಂಪತಿ ಪೋರಕೆ ಹಾಗೂ ದೊಣ್ಣೆಗಳಿಂದ ಹಲ್ಲೆಗೆ ಮುಂದಾಗಿದಲ್ಲದೇ ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದ್ದಾರೆ ಎಂದು ಬೆನೆಟ್ ಆರೋಪಿಸಿದ್ದಾರೆ.
ಬೆನೆಟ್ ತಮ್ಮ ಮೇಲಾದ ದೌರ್ಜನ್ಯದ ಸಿಸಿಟಿವಿ ದೃಶ್ಯಗಳಿಡಿದು ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಆದರೆ ಪೊಲೀಸರು ಮಾತ್ರ ದೂರು ದಾಖಲಿಸಿಕೊಂಡಿಲ್ಲ. ಹುಳಿಮಾವು ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎನ್ನುವ ಕಾರಣಕ್ಕೆ ವೃದ್ಧ ದಂಪತಿ ಕಮಿಷನರ್ ಕಚೇರಿಗೆ ಬಂದಿದ್ದಾರೆ. ಕಮಿಷನರ್ ಕಚೇರಿಯಲ್ಲೂ ಸಮರ್ಪಕವಾಗಿ ಉತ್ತರ ಸಿಕ್ಕಿದೇ ಇರುವುದರಿಂದ ವೃದ್ಧ ದಂಪತಿ ನ್ಯಾಯಕ್ಕಾಗಿ ಅಲೆದಾಡುವಂತಾಗಿದೆ.