ಕಾರವಾರ: ಸಮುದ್ರದಲ್ಲಿ (Sea) ಈಜಲು ತೆರಳಿದ್ದ ಪ್ರವಾಸಿಗನೊಬ್ಬ ಮುಳುಗಿ ಸಾವಿಗೀಡಾದ ಘಟನೆ ಕುಮಟಾದ (Kumta) ಬಾಡದಲ್ಲಿ ನಡೆದಿದೆ. ಮತ್ತೊಂದು ಕಡೆ ಮುರ್ಡೇಶ್ವರದಲ್ಲಿ (Murdeshwar) ಸಮುದ್ರದಲ್ಲಿ ಮುಳುಗುತ್ತಿದ್ದ ಮೂರು ಜನ ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಮೃತನನ್ನು ಶಿವಮೊಗ್ಗ (Shivamogga) ಮೂಲದ ಪ್ರಶಾಂತ್ ಗುಪ್ತ ಎಂದು ಗುರುತಿಸಲಾಗಿದೆ. ಮೃತ ಪ್ರಶಾಂತ್ 11 ಜನರೊಂದಿಗೆ ಕುಮಟಾಕ್ಕೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸಮುದ್ರಕ್ಕೆ ಈಜಲು ಹೋಗಿದ್ದಾಗ ಈ ಘಟನೆ ನಡೆದಿದೆ. ಈ ಸಂಬಂಧ ಕುಮಟಾ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಾಘ್ ಬಕ್ರಿ ಚಹಾ ಕಂಪನಿ ಮಾಲೀಕ ಮೆದುಳು ರಕ್ತಸ್ರಾವದಿಂದ ಸಾವು
Advertisement
Advertisement
ಇನ್ನೊಂದೆಡೆ ಮುರ್ಡೇಶ್ವರದಲ್ಲಿ ಬಾಗಲಕೋಟೆಯಿಂದ ಬಂದಿದ್ದ ಮೂವರು ಪ್ರವಾಸಿಗರು ಅಲೆಯ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಈ ವೇಳೆ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬಸವನಗೌಡ ಪಾಟೀಲ್ (22), ಶರಣು ಇಂಚಲ್ (21), ರವಿಚಂದ್ರನ್(22) ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದಾರೆ. ಶಶಿ, ಪಾಂಡು, ರಾಮಚಂದ್ರ ಅವರು ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆ ನೀಡಿದ ಲೈಫ್ ಗಾರ್ಡ್ ಸಿಬ್ಬಂದಿಯಾಗಿದ್ದಾರೆ.
Advertisement
Advertisement
ದಸರಾ ರಜೆ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಸಮುದ್ರಕ್ಕೆ ಇಳಿಯದಂತೆ ಲೈಫ್ ಗಾರ್ಡ್ ಸಿಬ್ಬಂದಿ ಎಚ್ಚರಿಕೆ ನೀಡಿದರೂ ಪ್ರವಾಸಿಗರು ಸಮುದ್ರಕ್ಕೆ ಇಳಿದು ತೊಂದರೆಗೆ ಸಿಲುಕುತ್ತಿದ್ದಾರೆ. ಇದನ್ನೂ ಓದಿ: ಉತ್ತರಕನ್ನಡದಲ್ಲಿ ಡೆಂಗ್ಯೂಗೆ ಇನ್ನೊಬ್ಬ ವ್ಯಕ್ತಿ ಬಲಿ- ಸಾವಿನ ಸಂಖ್ಯೆ 2ಕ್ಕೆ ಏರಿಕೆ
Web Stories