ಮೈತುಂಬಾ ಪ್ಲಾಸ್ಟಿಕ್ ಬ್ಯಾಗ್ – ಇವರು ನಡೆದಾಡುವ ಡಸ್ಟ್‌ಬಿನ್‌!

Public TV
1 Min Read
odisha dustbin man

ಭುವನೇಶ್ವರ: ಒಡಿಶಾದ ಮಯೂರ್ಭಂಜ್‍ನಲ್ಲಿ ಪರಿಸರದ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವ ವ್ಯಕ್ತಿಯೊಬ್ಬರು ನಡೆದಾಡುವ ಡಸ್ಟ್‌ಬಿನ್‌ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

ಮಯೂರ್ಭಂಜ್‍ನ ಬರಿಪಾಡ ಗ್ರಾಮದ ನಿವಾಸಿ ಬಿಷ್ಣು ಭಗತ್ (36) ಅವರನ್ನು ಜನರು ನಡೆದಾಡುವ ಡಸ್ಟ್‌ಬಿನ್‌ ಎಂದೇ ಕರೆಯುತ್ತಿದ್ದಾರೆ. ಬಣ್ಣಬಣ್ಣದ ಪಾಲಿಥಿನ್ ಬ್ಯಾಗ್‍ಗಳನ್ನು ಬಟ್ಟೆಗೆ ಅಂಟಿಸಿಕೊಂಡು ಕಸದಬುಟ್ಟಿ ರೀತಿ ದಿನನಿತ್ಯ ತಮ್ಮ ಕೆಲಸಕ್ಕೆ ಹೋಗುತ್ತಿರುವ ಕಾರಣ ಜನರು ಪ್ರೀತಿಯಿಂದ ಈ ಹೆಸರನ್ನು ಇಟ್ಟಿದ್ದಾರೆ.

odisha dustbin man 1

ಪ್ಲಾಸ್ಟಿಕ್‍ನಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಆದರಿಂದ `ಪಾಲಿಥಿನ್ ಬ್ಯಾಗ್‍ಗಳನ್ನು ಬಳಸಬೇಡಿ, ಪರಿಸರವನ್ನು ಉಳಿಸಿ’ ಎಂದು ನಿತ್ಯವು ಬೇರೆ ಬೇರೆ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಪರಿಸರ ಮಾಲಿನ್ಯದ ಕುರಿತು ವಿಷ್ಣು ಭಗತ್ ಜಾಗ್ರತಿ ಮೂಡಿಸುತ್ತಿದ್ದಾರೆ.

ಯಾಕೆ ಹೀಗೆ ವಿಚಿತ್ರವಾಗಿ ಇರ್ತೀರಾ ಎಂದು ಬಿಷ್ಣು ಅವರನ್ನು ಕೇಳಿದರೆ, ನನ್ನನ್ನು ನೋಡಿ ಬಹಳಷ್ಟು ಜನ ಇವನೊಬ್ಬ ಹುಚ್ಚ, ಮೈತುಂಬಾ ಪ್ಲಾಸ್ಟಿಕ್ ಅಂಟಿಸಿಕೊಂಡು ವಿಚಿತ್ರವಾಗಿ ಇರುತ್ತಾನೆ ಅಂತಾ ನಗುತ್ತಾರೆ. ಬರೀ ಒಬ್ಬ ಮನುಷ್ಯ ಹೀಗೆ ಇದ್ದರೆ ಜನಕ್ಕೆ ನೋಡಲು ಆಗೋಲ್ಲ ಆದ್ರೆ ನಿತ್ಯವು ಮನುಷ್ಯ ಪ್ಲಾಸ್ಟಿಕ್ ಬಳಕೆಯಿಂದ ಪರಿಸರವನ್ನು ಮಾಲಿನ್ಯ ಮಾಡುತ್ತಾನೆ. ಅದರಿಂದ ಭೂಮಿ ಇನ್ನ್ಯಾವ ರೀತಿ ಕಾಣಿಸಬಹುದು ಎಂದು ಯೋಚಿಸಿ ಎಂದು ಮರು ಪ್ರಶ್ನೆ ಎಸೆಯುತ್ತಾರೆ.

ಬಿಷ್ಣು ಅವರನ್ನು ನೋಡಿ ಜನರು ಅವನೊಬ್ಬ ಮೂರ್ಖ, ಮಾಡಲು ಬೇರೇನು ಕೆಲಸವಿಲ್ಲ ಎಂದು ಮಾತಾಡುತ್ತಾರೆ. ಆದ್ರೆ ಬಿಷ್ಣು ಅವರು ಪರಿಸರದ ಮೇಲಿಟ್ಟಿರುವ ಪ್ರೀತಿ ಹಾಗೂ ಅವರು ಮಾಡುತ್ತಿರುವ ಕೆಲಸವನ್ನು ಎಲ್ಲರು ಮೆಚ್ಚಲೇಬೇಕು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article