ಭೋಪಾಲ್: ಮಧ್ಯಪ್ರದೇಶದ ಜಬಲ್‍ಪುರ್ ನ ನೇತಾಜಿ ಸುಭಾಷ್ ಚಂದ್ರ ಬೋಸ್ ಆಸ್ಪತ್ರೆಯಲ್ಲಿ ರೋಗಿಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಇದಕ್ಕೆ ರೋಗಿಯನ್ನು ಎಕ್ಸ್‌ರೇ ರೂಮಿಗೆ ಬೆಡ್‍ಶೀಟ್‍ನಲ್ಲೇ ಸಿಬ್ಬಂದಿ ಎಳೆದುಕೊಂಡು ಹೋಗಿರುವುದೇ ಸಾಕ್ಷಿಯಾಗಿದೆ.
ಹೌದು. ಎಕ್ಸ್-ರೇ ರೂಂಗೆ ರೋಗಿಯನ್ನು ಸ್ಟ್ರಕ್ಚರ್ ನಲ್ಲಿ ಕರೆದೊಯ್ಯುವ ಬದಲು ಹಾಗೇ ಬೆಡ್‍ಶೀಟ್‍ನಲ್ಲಿ ದರದರನೇ ಎಳೆದುಕೊಂಡು ಹೋಗಿದ್ದಾರೆ. ಸಿಬ್ಬಂದಿ ರೋಗಿಯನ್ನು ಎಳೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಸುದ್ದಿ ಸಂಸ್ಥೆಯೊಂದು ಟ್ವೀಟ್ ಮಾಡಿದೆ.
Advertisement
Advertisement
ಈ ವಿಡಿಯೋ ನೋಡಿ ಸಾಕಷ್ಟು ಜನರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಮೂವರು ಸಿಬ್ಬಂದಿಯನ್ನು ಅಮಾನತು ಕೂಡ ಮಾಡಲಾಗಿದೆ. ವಿಡಿಯೋದಲ್ಲಿ ಆಸ್ಪತ್ರೆಯ ಸಿಬ್ಬಂದಿ ರೋಗಿಯನ್ನು ಎಕ್ಸ್ ರೇ ರೂಮಿಗೆ ಬೆಡ್‍ಶೀಟ್‍ನಲ್ಲಿ ಎಳೆದುಕೊಂಡು ಹೋಗುತ್ತಿದ್ದಾನೆ. ಈ ವೇಳೆ ಇನ್ನೂ ಕೆಲವು ರೋಗಿಗಳು ಆಸ್ಪತ್ರೆಯಲ್ಲೇ ನೆಲದ ಮೇಲೆ ಮಲಗಿರುವುದು ಕಂಡು ಬಂದಿದೆ.
Advertisement
#WATCH: Staff at Netaji Subhash Chandra Bose Medical College in Jabalpur takes a patient to X-Ray room by dragging him on a bed sheet. Dean Dr Navneet Saxena says, "3 persons have been suspended. Inquiry underway, action will be taken" #MadhyaPradesh pic.twitter.com/m5LPjyZ2ZP
— ANI (@ANI) June 29, 2019
Advertisement
ಈ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದಂತೆಯೇ ನೇತಾಜಿ ಸುಭಾಷ್ ಚಂದ್ರ ಬೋಸ್ ಮೆಡಿಕಲ್ ಕಾಲೇಜಿನ ಡೀನ್ ನವ್‍ನೀತ್ ಸಕ್ಸೆನಾ ಮೂವರನ್ನು ಸಸ್ಪೆಂಡ್ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ, ತಪ್ಪಿತಸ್ಥರು ಯಾರು ಎಂದು ಗೊತ್ತಾದರೆ, ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.