ನವದೆಹಲಿ: ಬೋಳು ತಲೆಯಿದ್ದವರು (Bald Hair) ಕೂದಲನ್ನು (Hair) ಬೆಳೆಸಲು ಔಷಧಿಗಳ ಮೊರೆ ಹೋಗುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಜನರು ಕೂದಲ ಕಸಿ (Hair Transplant) ಮಾಡಿಸುವಲ್ಲಿಗೆ ವಾಲುತ್ತಿದ್ದಾರೆ. ಆದರೆ ಕೂದಲ ಕಸಿ ಮಾಡಿಸಿಕೊಳ್ಳಲು ಹೋದವರೊಬ್ಬರು ವೈದ್ಯರ (Doctors) ಯಡವಟ್ಟಿನಿಂದ ಜೀವವನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.
ದೆಹಲಿಯ (Delhi) ವ್ಯಕ್ತಿ ಅಥರ್ ರಶೀದ್ (30) ಕೂದಲ ಕಸಿ ಮಾಡಿಸಿಕೊಳ್ಳಲು ಕ್ಲಿನಿಕ್‌ಗೆ ಹೋಗಿದ್ದರು. ಆದರೆ ಕೂದಲ ಕಸಿ ಮಾಡಿಸಿಕೊಂಡ ಬಳಿಕ ಅವರು ತೀವ್ರವಾದ ನೋವಿನಿಂದ ಬಳಲುತ್ತಿದ್ದು, ಬಹು ಅಂಗಾಂಗ ವೈಫಲ್ಯ ಉಂಟಾಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪಾರಿವಾಳ ಹಿಡಿಯಲು ಹೋಗಿ ಹೈಟೆನ್ಷನ್ ವಯರ್ ಸ್ಪರ್ಶಿಸಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವು
ರಶೀದ್ ತಮ್ಮ ಮನೆಯಲ್ಲಿ ಒಬ್ಬರೇ ದುಡಿಯುತ್ತಿದ್ದ ವ್ಯಕ್ತಿಯಾಗಿದ್ದು, ತಮ್ಮ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಕೂದಲ ಶಸ್ತ್ರಚಿಕಿತ್ಸೆಯ ಬಳಿಕ ನನ್ನ ಮಗ ತುಂಬಾ ನೋವಿನಿಂದ ಬಳಲುತ್ತಿದ್ದ ಆತನ ಮೈಮೇಲೆ ಗುಳ್ಳೆಗಳಾಗಿದ್ದವು ಎಂದು ರಶೀದ್ ತಾಯಿ ಆಸಿಯಾ ಬೇಗಂ ತಿಳಿಸಿದ್ದಾರೆ. ಇದನ್ನೂ ಓದಿ: ಮಗಳನ್ನು ಕೋಚಿಂಗ್ ಸೆಂಟರ್‌ಗೆ ಕರೆದೊಯ್ಯುತ್ತಿದ್ದ ವ್ಯಕ್ತಿ ರಾಜಸ್ಥಾನದ ಗ್ಯಾಂಗ್‌ವಾರ್‌ಗೆ ಬಲಿ
ಘಟನೆಯ ಬಳಿಕ ರಶೀದ್ ಕುಟುಂಬದ ಸದಸ್ಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ಇಬ್ಬರು ವೈದ್ಯರು ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.