ರಾಂಚಿ: ಉತ್ತರಾಖಂಡದ (Uttarakhand) ಸಿಲ್ಕ್ಯಾರಾ ಸುರಂಗದಲ್ಲಿ (Tunnel) ಸಿಲುಕಿದ್ದ 41 ಕಾರ್ಮಿಕರ (Worker) ರಕ್ಷಣೆಯೇನೋ ಆಗಿದೆ. ಆದರೆ ಈ 41 ಕಾರ್ಮಿಕರನ್ನು ಸುರಂಗದಿಂದ ಸುರಕ್ಷಿತವಾಗಿ ಹೊರತರುವುದಕ್ಕೂ ಕೆಲವೇ ಗಂಟೆಗಳ ಮುನ್ನ ಕಾರ್ಮಿಕನೊಬ್ಬನ ತಂದೆ (Father) ಮೃತಪಟ್ಟ ಘಟನೆ ನಡೆದಿದೆ.
ಉತ್ತರಕಾಶಿ ಸುರಂಗದಿಂದ ರಕ್ಷಣೆಗೊಳಗಾದ ಕಾರ್ಮಿಕ ಭಕ್ತು ಅವರ ತಂದೆ ಜಾರ್ಖಂಡ್ ಮೂಲದ ಬಾಸೆಟ್ ಅಲಿಯಾಸ್ ಬರ್ಸಾ ಮುರ್ಮು (70) ಮಗನ ರಕ್ಷಣೆಗೂ ಕೆಲವೇ ಗಂಟೆಗಳ ಮುನ್ನ ಮೃತಪಟ್ಟಿದ್ದಾರೆ. ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಬಹ್ದಾ ಗ್ರಾಮದ ನಿವಾಸಿ ಬರ್ಸಾ ಮುರ್ಮು ಮಂಗಳವಾರ ಬೆಳಗ್ಗೆ 8 ಗಂಟೆಗೆ ತಮ್ಮ ಹಾಸಿಗೆಯ ಮೇಲೆ ಕುಳಿತಿದ್ದಾಗಲೇ ಕುಸಿದು ಸಾವನ್ನಪ್ಪಿದ್ದಾರೆ.
Advertisement
Advertisement
ನವೆಂಬರ್ 12 ರಂದು ತಮ್ಮ ಮಗ ಸುರಂಗದೊಳಗೆ ಸಿಲುಕಿದ್ದಾಗಿನಿಂದಲೂ ಬರ್ಸಾ ಮುರ್ಮು ಆಘಾತಕ್ಕೊಳಗಾಗಿದ್ದರು. ಭಕ್ತು ಸೇರಿದಂತೆ ಒಟ್ಟು 41 ಕಾರ್ಮಿಕರು ಸುರಂಗದಿಂದ ಹೊರಬಂದ ಕೇವಲ 12 ಗಂಟೆ ಮೊದಲು ಬರ್ಸಾ ಮುರ್ಮು ಸಾವನ್ನಪ್ಪಿರುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಜೋಧ್‌ಪುರದಿಂದ 600 ಕೆಜಿ ಪರಿಶುದ್ಧ ತುಪ್ಪ ರವಾನೆ
Advertisement
ಬರ್ಸಾ ಮುರ್ಮು ತನ್ನ ಮಗನ ರಕ್ಷಣೆಗೆ ಸಂಬಂಧಿಸಿದ ಮಾಹಿತಿಗಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ ಅವರು ತಮ್ಮ ಹಾಸಿಗೆ ಮೇಲೆ ಕುಳಿತಿದ್ದಾಗ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಇದು ಹೃದಯಾಘಾತ ಎನ್ನಲಾಗುತ್ತಿದೆಯಾದರೂ ಅವರ ವೈದ್ಯಕೀಯ ವರದಿ ಇನ್ನೂ ಬಂದಿಲ್ಲ ಎಂದು ದುಮಾರಿಯಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಸಂಜೀವನ್ ಓರಾನ್ ತಿಳಿಸಿದ್ದಾರೆ.
Advertisement
ಜಾರ್ಖಂಡ್‌ನ ಇತರ 14 ಕಾರ್ಮಿಕರೊಂದಿಗೆ ಭಕ್ತು ಸದ್ಯ ಏಮ್ಸ್ ರಿಷಿಕೇಶ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ 41 ಕಾರ್ಮಿಕರೊಂದಿಗೆ ಭಕ್ತು 17 ದಿನಗಳ ಬಳಿಕ ಸೂರ್ಯನ ಬೆಳಕು ಕಂಡರೂ ತಂದೆಯ ಸಾವಿನ ಸುದ್ದಿಯಿಂದ ಮತ್ತೆ ಕತ್ತಲೆ ಆವರಿಸಿದಂತಾಗಿದೆ. ತಾವು ಮೃತ್ಯುಂಜಯರಾಗಿ ಸುರಂಗದಿಂದ ಹೊರಬಂದರೂ ತಂದೆಯನ್ನು ಕೊನೇ ಬಾರಿ ಜೀವಂತವಾಗಿ ನೋಡಲು ಸಾಧ್ಯವಾಗದೇ ಹೋಗಿರುವುದು ದುರಂತವಾಗಿದೆ. ಇದನ್ನೂ ಓದಿ: ಚೀನಾ ನಿಗೂಢ ವೈರಸ್ ಭೀತಿ – ರಾಜ್ಯದಲ್ಲಿ ನ್ಯೂಮೋನಿಯಾ ನಿಯಂತ್ರಣಕ್ಕೆ ಕ್ರಮ