ಚಂಡೀಗಢ: ಪ್ರೀತಿಸಿದ ಯುವತಿ ಕಪಾಳಮೋಕ್ಷ ಮಾಡಿದ್ದರಿಂದ ಮನನೊಂದು ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಲೂಧಿಯಾನದಲ್ಲಿ (Ludhiana) ನಡೆದಿದೆ.
ಗುರುದೀಪ್ ಸಿಂಗ್ (30) ಮೃತ ಪ್ರಿಯಕರನಾಗಿದ್ದು, ಆರೋಪಿಯನ್ನು ರಣವಾನ್ ಗ್ರಾಮದ ರಾಜ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ. ದುಬೈನಲ್ಲಿ (Dubbai) ಕೆಲಸಮಾಡುತ್ತಿದ್ದ ನನ್ನ ಮಗ ಸುಮಾರು ಎರಡೂವರೆ ವರ್ಷಗಳ ಹಿಂದೆ ಮನೆಗೆ ಮರಳಿದ್ದನು. ಗುರ್ದೀಪ್ ಸಿಂಗ್ ವಿದೇಶದಲ್ಲಿದ್ದಾಗ ಗ್ರಾಮದಲ್ಲಿ ವಾಸಿಸುತ್ತಿದ್ದ ರಾಜ್ವಿಂದರ್ ಕೌರ್ ಜೊತೆ ರಿಲೇಷನ್ಶಿಪ್ನಲ್ಲಿದ್ದನು (Relationship). ಅಲ್ಲದೇ ಆಕೆಗೆ ಹಣವನ್ನು ಕಳುಹಿಸುತ್ತಿದ್ದನು. ಇದನ್ನೂ ಓದಿ: 68ನೇ ಸಾಲಿನ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದ ಸ್ಟಾರ್ಗಳು ಇವರೇ
ಯುವತಿ ತನ್ನ ಮಗನ ಕತ್ತು ಹಿಡಿದು ಮುಖಕ್ಕೆ ಕಪಾಳಮೋಕ್ಷ ಮಾಡುತ್ತಾ, ನನಗೆ ಯಾವುದೇ ಸಾಲವನ್ನು ನೀಡಿಲ್ಲ ಎಂದು ನಿಂದಿಸಿದ್ದಾಳೆ. ಘಟನೆ ಬಳಿಕ ನನ್ನ ಮಗ ಅಳುತ್ತಿದ್ದನು ಮತ್ತು ನನಗೆ ತುಂಬಾ ಅವಮಾನವಾಗಿದೆ, ನಾನು ಸಾಯುತ್ತೇನೆ ಎಂದು ಹೇಳಿದ್ದನು. ಅದೇ ರೀತಿ ಸಂಜೆ ವೇಳೆಗೆ ನನ್ನ ಮಗ ವಿಷ ಸೇವಿಸಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದ್ದರಿಂದ ಕೂಡಲೇ ಲುಧಿಯಾನ ಸಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಗುರುದೀಪ್ ಸಿಂಗ್ ಅವರ ತಂದೆ ನಛತಾರ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ.
ಇದೀಗ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಈ ಸಂಬಂಧ ತನಿಖೆ ನಡೆಸಲು ಆರಂಭಿಸಿದ್ದಾರೆ. ಇದನ್ನೂ ಓದಿ: ಹಿಂದೂ ಕುಟುಂಬಕ್ಕೋಸ್ಕರ ಏರಿಯಾದಲ್ಲಿ ಮುಸ್ಲಿಮರಿಂದ ದುರ್ಗಾ ಪೂಜೆ ಆಯೋಜನೆ