ಕೋಲಾರ: ಮನೆಯಲ್ಲಿ ತಂದೆ ತಾಯಿ ಬುದ್ಧಿವಾದ ಹೇಳಿದ ಹಿನ್ನೆಲೆ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು (Mulabagilu) ಪಟ್ಟಣದ ಕುಂಬಾರಪಾಳ್ಯದಲ್ಲಿ (Kumbarapalya) ಕಳೆದ ರಾತ್ರಿ ಈ ಘಟನೆ ನಡೆದಿದೆ. ಬೆಳದು ನಿಂತಿದ್ದ ಮಗ ಜವಾಬ್ದಾರಿ ಇಲ್ಲದೇ ಸ್ನೇಹಿತರೊಂದಿಗೆ ಸೇರಿಕೊಂಡು ಬೇಕಾಬಿಟ್ಟಿ ಜೀವನ ನಡೆಸುತ್ತಿದ್ದ. ಇದನ್ನು ಪ್ರಶ್ನೆ ಮಾಡಿದ ತಂದೆ ತಾಯಿ ಮಾತಿನಿಂದ ಬೇಸತ್ತು ನೇಣಿಗೆ ಶರಣಾಗಿದ್ದಾನೆ. ಇದನ್ನೂ ಓದಿ: ಏ.20ರಂದೇ ನಡೆಯಬೇಕಿದ್ದ ಪಹಲ್ಗಾಮ್ ದಾಳಿ 2 ದಿನ ತಡವಾಗಿದ್ದೇಕೆ? – NIA ತನಿಖೆಯಲ್ಲಿ ರೋಚಕ ಅಂಶ
ಮುಳಬಾಗಿಲು ಪಟ್ಟಣದ ಕುಂಬಾರಪಾಳ್ಯ ನಿವಾಸಿ ಗಣೇಶ್ (29) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಗಣೇಶ್ ಮದುವೆಯಾಗಿ ಒಂದು ವರ್ಷ ಕಳೆದಿತ್ತು. ಹೆಂಡತಿ ಮಕ್ಕಳನ್ನ ಚನ್ನಾಗಿ ನೋಡಿಕೋ, ಜವಾಬ್ದಾರಿಯಿಂದಿರು ಎಂದಿದ್ದ ತಂದೆ ತಾಯಿ ಮಾತಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಪಹಲ್ಗಾಮ್‌ಗೆ ಹೋಗಿದ್ರೆ ಜಮೀರ್, ಖಾದರ್ ಬಿಟ್ಟು ಸಿದ್ದರಾಮಯ್ಯಗೆ ಗುಂಡು ಹೊಡೆಯುತ್ತಿದ್ರು: ಮುತಾಲಿಕ್
ಘಟನೆ ಸಂಬಂಧ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಸಾವಿನ ಕುರಿತು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಮೋದಿ ಜೊತೆಗೆ ನಾವಿದ್ದೇವೆ, ಪಾಕ್ ವಿರುದ್ಧ ಇಂದಿರಾ ಗಾಂಧಿಯಂತೆ ಕ್ರಮ ಕೈಗೊಳ್ಳಬೇಕು: ಎಂ.ಬಿ ಪಾಟೀಲ್