ಅಂತ್ಯಸಂಸ್ಕಾರಕ್ಕೆ ಗುಬ್ಬಿ ಶಾಸಕ ಬರಬೇಕು – ಡೆತ್‌ನೋಟ್ ಬರೆದಿಟ್ಟು ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

Advertisements

ನೆಲಮಂಗಲ: ಕೆರೆಗೆ ಹಾರಿ ವ್ಯಕ್ತಿಯೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಹೊರವಲಯ ನೆಲಮಂಗಲ (Nelamangala) ತಾಲೂಕಿನ ಸೋಂಪುರ ಹೋಬಳಿಯ ದೇವರಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisements

ಮೃತ ವ್ಯಕ್ತಿಯನ್ನು ತುಮಕೂರು (Tumkur) ಜಿಲ್ಲೆಯ ಗುಬ್ಬಿ (Gubbi) ಪಟ್ಟಣದ ನಿವಾಸಿ ಜಯಪ್ರಕಾಶ್ (39) ಎಂದು ಗುರುತಿಸಲಾಗಿದೆ. ಗ್ರಾನೆಟ್ ಕೆಲಸ ನಿರ್ವಹಿಸುತ್ತಾ ಜೀವನ ಸಾಗಿಸುತ್ತಿದ್ದ ಜಯಪ್ರಕಾಶ್ ಜೀವನ ನಿರ್ವಹಣೆಗಾಗಿ ಸಣ್ಣ ಪುಟ್ಟ ಸಾಲ ಮಾಡಿಕೊಂಡಿದ್ದ. ಜೊತೆಗೆ ಗೋಮಾಳದಲ್ಲಿ ಜಮೀನು ಸಾಗುವಳಿ ಮಾಡಿಕೊಂಡು ಬಂದಿದ್ದು, ಸಾಗುವಳಿ ಚೀಟಿ ಸಹ ನೀಡಲಾಗಿತ್ತು. ಆದರೆ ಅದರ ಪಾಣಿ ಇನ್ನು ಆತನ ಹೆಸರಿಗೆ ಬಂದಿರಲಿಲ್ಲ. ಈ ಬಗ್ಗೆ ತೀವ್ರವಾಗಿ ನೊಂದಿದ್ದ ಜಯಪ್ರಕಾಶ್ ವಿಸ್ತೃತವಾದ ಡೆತ್ ನೋಟ್ ಬರೆದಿಟ್ಟು ತಮ್ಮ ಮನೆದೇವರಾದ ದೇವರ ಹೊಸಹಳ್ಳಿಯ ವೀರಭದ್ರ ಸ್ವಾಮಿಯ ಗ್ರಾಮದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಜನಾರ್ದನ್‌ ರೆಡ್ಡಿಗೆ ಬಿಗ್‌ ರಿಲೀಫ್‌ – ಒಂದೇ ದಿನ 4 ಪ್ರಕರಣಗಳಿಂದ ಮುಕ್ತಿ

Advertisements

ಡೆತ್‌ ನೋಟ್‌ನಲ್ಲಿ ನನ್ನ ಅಂತ್ಯಸಂಸ್ಕಾರಕ್ಕೆ ಗುಬ್ಬಿ ಶಾಸಕ ವಾಸು ಬರಬೇಕು ಹಾಗೂ ನನ್ನ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಬರೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಡಾಬಸ್ಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೃತದೇಹವನ್ನು ಹೊರ ತೆಗೆಯುವಲ್ಲಿ ತುಮಕೂರು ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಹರಸಾಹಸಪಟ್ಟರು. ಡಾಬಸ್ ಪೇಟೆಯ ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ಮೃತ ದೇಹವನ್ನು ಸಾಗಿಸಿದ್ದಾರೆ. ಸ್ಥಳಕ್ಕೆ ಡಾಬಸ್ ಪೇಟೆ ಠಾಣೆಯ ಇನ್ಸ್‌ಪೆಕ್ಟರ್ ರವಿ.ಎಸ್, ಆರಕ್ಷಕ ಉಪ ನಿರೀಕ್ಷಕರಾದ ಮಂಗಳಮ್ಮ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಸಂಚು ನಡೆಸ್ತಿದೆ- ಸಂಸತ್‍ನಲ್ಲಿಯೂ ಕ್ಯಾತೆ ತೆಗೆದ ಎನ್‍ಸಿಪಿ ಸಂಸದೆ

Live Tv

Advertisements
Exit mobile version