ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ (Ram Janmabhoomi ) ಕ್ಯಾಮೆರಾ ಅಳವಡಿಸಿದ ಸನ್‌ಗ್ಲಾಸ್‌ಗಳನ್ನು (Camera Sunglass )ಹಿಡಿದುಕೊಂಡು ಫೋಟೋ ಕ್ಲಿಕ್ಕಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಗುಜರಾತ್‌ನ ವಡೋದರಾದ ಜಾನಿ ಜೈಕುಮಾರ್ ಎಂದು ಗುರುತಿಸಲಾಗಿದೆ. ರಾಮಜನ್ಮಭೂಮಿ ಮಾರ್ಗದಲ್ಲಿ ಅನೇಕ ಚೆಕ್‌ಪೋಸ್ಟ್‌ಗಳ ಮೂಲಕ ಹಾದುಹೋಗುವಲ್ಲಿ ಆತ ಯಶಸ್ವಿಯಾಗಿದ್ದಾನೆ. ಸೋಮವಾರ ದೇವಾಲಯದ ಸಂಕೀರ್ಣದ ಸಿಂಗ್‌ದ್ವಾರದ ಬಳಿ ಆತ ತಲುಪಿದ್ದ ಅಲ್ಲಿ ಅವನನ್ನು ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಭದ್ರತಾ ಕಾರಣಗಳಿಗಾಗಿ ಆರೋಪಿಯು ದೇವಾಲಯದಲ್ಲಿ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿ ನಿಷೇಧಿಸಲಾಗಿದೆ. ಆರೋಪಿ ನಿಯಮವನ್ನು ಉಲ್ಲಂಘಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಕ್ಯಾಮೆರಾ ಅಳವಡಿಸಿದ್ದ ಕನ್ನಡಕದೊಂದಿಗೆ ಆರೋಪಿ ಫೋಟೋಗಳನ್ನು ತೆಗೆಯುತ್ತಿದ್ದ. ಈ ವೇಳೆ ಕ್ಯಾಮೆರಾ ಲೈಟ್ ಮಿಂಚಿದಾಗ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಕ್ಯಾಮೆರಾ ಅಳವಡಿಸಿದ್ದ ಕನ್ನಡಕದ ಬೆಲೆ 50,000 ರೂ. ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಆರೋಪಿಯನ್ನು ಬಂಧಿಸಿದ ಎಸ್‌ಎಸ್‌ಎಫ್ ಜವಾನ್ ಅನುರಾಗ್ ಬಾಜ್‌ಪೇಯ್ ಅವರಿಗೆ ಬಹುಮಾನ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.