ಬೆಂಗಳೂರು: ಪೊಲೀಸ್ ಪೇದೆಯೊಬ್ಬರ ಐಡಿ ಕಾರ್ಡ್ ಕದ್ದು ಲೋನ್ ಪಡೆದಿರೋ ಘಟನೆ ಬೆಂಗಳೂರಿನ ವೈಟ್ ಫೀಲ್ಡ್‍ನಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಪೊಲೀಸ್ ಠಾಣೆಯ ಪೇದೆ ಸೋಮಶೇಖರ್ ಅವರ ಐಡಿ ಕಾರ್ಡ್ ಕದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಜಾಜ್ ಫೈನಾನ್ಸ್ ಕಂಪನಿಯಿಂದ 53,570 ರೂ ಮೊತ್ತದ ಲೋನ್ ಪಡೆಯಲಾಗಿದೆ. ಮಾರ್ಚ್‍ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲೋನ್ ಪಡೆದಿದ್ದು, ಕಳೆದ ಶುಕ್ರವಾರ ಪೊಲೀಸ್ ಪೇದೆಗೆ ಫೈನಾನ್ಸ್ ಕಂಪನಿಯಿಂದ ಲೋನ್ ಹಣ ಪಾವತಿ ಮಾಡುವಂತೆ ಕರೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
Advertisement
ಫೈನಾನ್ಸ್ ಕಂಪನಿ ಲೋನ್ ನೀಡುವುದಕ್ಕೆ ಮುಂಚೆ ದಾಖಲಾತಿಗಳ ಪರಿಶೀಲನೆ ನಡೆಸದೆ ಲೋನ್ ಮಂಜೂರಾತಿ ಮಾಡಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಬಳಸಿ ಲೋನ್ ಪಡೆಯಲಾಗಿದೆ. ಹೀಗಾಗಿ ಸೋಮಶೇಖರ್ ಅವರು ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.
Advertisement
ಫೈನಾನ್ಸ್ ಕಂಪನಿ ಹಾಗೂ ಲೋನ್ ಪಡೆದ ವ್ಯಕ್ತಿ ವಿರುದ್ಧ ವೈಟ್ ಫಿಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv