ಬಿಟ್ಟೋದ ಗಂಡನನ್ನ ಜೊತೆಯಾಗಿರುವಂತೆ ಮಾಡ್ತೀನಿ ಎಂದು 7 ಲಕ್ಷ ಪಡೆದು ಎಸ್ಕೇಪ್!

Public TV
1 Min Read
rs 500

ಬೆಂಗಳೂರು: ಬಿಟ್ಟು ಹೋದ ಗಂಡನನ್ನು ಜೊತೆಯಾಗಿರುವಂತೆ ಮಾಡುತ್ತೇನೆ ಎಂದು ಮಹಿಳೆಯೊಬ್ಬರಿಗೆ ವಂಚಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಫಾತಿಮಾ ಎಂಬ ಮಹಿಳೆಗೆ ಹಜರತ್ ನೂರ್ ಮೊಹಮ್ಮದ್ ಎಂಬಾತ ವಂಚಿಸಿರುವುದು ಬಯಲಾಗಿದೆ. ಈತ ಫಾತಿಮಾ ಹೆಸರಲ್ಲಿ ಲಕ್ಷ ಲಕ್ಷ ಲೋನ್ ಮಾಡಿಸಿ ಹಣ ಪಡೆದು ಸಿನಿಮೀಯ ಶೈಲಿಯಲ್ಲಿ ವಂಚನೆ ಮಾಡಿದ್ದಾನೆ. ಇದನ್ನೂ ಓದಿ: ಬಸ್ ಅಪಘಾತ ತಡೆಗೆ ಟೆಕ್ನಾಲಜಿ ಮೊರೆ ಹೊದ BMTC – ಏನಿದು ಅಡಾಸ್ ಸಿಸ್ಟಮ್‌?

ನೀರಾವರಿ ಇಲಾಖೆಯಲ್ಲಿ ಎಫ್‍ಡಿಎ ಅಧಿಕಾರಿಯಾಗಿರೋ ಫಾತಿಮಾ ಪತಿ ಬಿಟ್ಟೋಗಿದ್ದು, ಮೂರು ವರ್ಷದ ಮಗುವಿನ ಕೈಗೆ ಗಾಯದ ಸಮಸ್ಯೆಯಿತ್ತು. ಪಕ್ಕದ ಮನೆಯರ ಮಾತು ಕೇಳಿ ನಾಗಮಂಗಲದಲ್ಲಿರೋ ಹಜರತ್ ನೂರ್ ಸಂಪರ್ಕ ಮಾಡಿ ಔಷಧಿ ಕೊಡಿಸಿದ್ರು. ಕಾಕತಾಳಿಯ ಎಂಬಂತೆ ಮಗುವಿಗೆ ಕೈ ಒಂದು ವಾರದಲ್ಲಿ ಸರಿಹೋಗಿತ್ತು. ಇದರಿಂದ ಹಜರತ್ ನನ್ನ ಸಂಪೂರ್ಣ ನಂಬಿದ್ದ ಫಾತಿಮಾ, ಪತಿಯನ್ನ ತನ್ನ ಜೊತೆಗಿರುವಂತೆ ಮಾಡಿ ಎಂದು ಕೇಳಿಕೊಂಡಿದ್ದಳು.

VIDHANASOUDHA POLICE STATION

ಗಂಡ ನಿನ್ನ ಜೊತೆಗೇ ಇರುವಂತೆ ಮಾಡ್ತೀನಿ ಅಂತ ಹಜರತ್ ನೂರ್ ಒಂದು ಲಕ್ಷ ಹಣ ಪಡೆದಿದ್ದ. ಆ ಬಳಿಕ ವೈಯಕ್ತಿಕ ಸಮಸ್ಯೆಯಿದೆ ಎಂದು ಲೋನ್ ಮಾಡಿಸಿ ಏಳು ಲಕ್ಷ ಪಡೆದಿದ್ದ. ಪ್ರತಿ ತಿಂಗಳು ಇಂತಿಷ್ಟು ಹಣ ಕಟ್ಟುತ್ತೇನೆ ಅಂತೇಳಿ ಹಣ ಕೈಗೆ ಬಂದ ತಕ್ಷಣ ಎಸ್ಕೇಪ್ ಆಗಿದ್ದಾನೆ. ಸದ್ಯ ವಂಚನೆ ಕೇಸ್‍ನಲ್ಲಿ ಶಿರಾ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ (Vidhanasoudha Police Station) ಪ್ರಕರಣ ದಾಖಲಾಗಿದೆ.

Share This Article