ಅಯೋಧ್ಯೆ ನದಿಯಲ್ಲಿ ಪತ್ನಿಗೆ ಕಿಸ್‌ ಮಾಡಿದ ಪತಿಯನ್ನೇ ಥಳಿಸಿದ ಸಾರ್ವಜನಿಕರು… Video Viral

Public TV
1 Min Read
Ayodhya River

ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ಸರಯೂ ನದಿಯಲ್ಲಿ ಸ್ನಾನ ಮಾಡುವಾಗ ತನ್ನ ಪತ್ನಿಗೆ ಮುತ್ತು ಕೊಟ್ಟ ಪತಿಯನ್ನೇ ಸಾರ್ವಜನಿಕರು ನಿಂದಿಸಿ ಥಳಿಸಿದ್ದಾರೆ. ಘಟನೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುರುಷನನ್ನು ಆತನ ಹೆಂಡತಿಯಿಂದ ಪಕ್ಕಕ್ಕೆ ಎಳೆದೊಯ್ದು ಸುತ್ತಮುತ್ತಲಿನ ಹಲವರು ಪುರುಷರು ಥಳಿಸಿರುವ ದೃಶ್ಯ ವೀಡಿಯೋದಲ್ಲಿದೆ. ಅಯೋಧ್ಯೆಯಲ್ಲಿ ಇಂತಹ ಅಸಹ್ಯವನ್ನು ಸಹಿಸುವುದಿಲ್ಲ ಎಂದು ಒಬ್ಬ ವ್ಯಕ್ತಿ ಹೇಳುತ್ತಿರುವುದು ವೀಡಿಯೋದಲ್ಲಿದೆ. ಇದನ್ನೂ ಓದಿ: ಜೆಪಿ ನಡ್ಡಾ ನಿವಾಸಕ್ಕೆ ಬೆಂಕಿ ಹಚ್ಚಲು ಯತ್ನಿಸಿದ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಥಳಿತದ ಸಂದರ್ಭದಲ್ಲಿ ತನ್ನ ಪತಿಯನ್ನು ರಕ್ಷಿಸಲು ಪತ್ನಿ ಮುಂದಾಗಿ, ವಿಫಲಳಾಗಿದ್ದಾಳೆ. ನಂತರ ಅಲ್ಲಿದ್ದ ಜನರು ಆ ದಂಪತಿಯನ್ನು ನದಿಯಿಂದ ಹೊರಗೆ ಕಳುಹಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಯೋಧ್ಯಾ ಪೊಲೀಸರು ತಿಳಿಸಿದ್ದಾರೆ.

ʻಸರಯೂʼ ಗಂಗೆಯ ಏಳು ಉಪನದಿಗಳಲ್ಲಿ ಒಂದಾಗಿದೆ. ಇದನ್ನು ಹಿಂದೂಗಳು ಪವಿತ್ರವೆಂದು ಪರಿಗಣಿಸುತ್ತಾರೆ. ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯು ಸರಯೂ ನದಿಯ ದಡದಲ್ಲಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *