ಗದಗ: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.
ನಗರದ ಭೂಮರಡ್ಡಿ ಸರ್ಕಲ್ ಬಳಿಯ ಸಾಲ ಓಣಿಯಲ್ಲಿ ಈ ಘಟನೆ ನಡೆದಿದೆ. ಬೆಟಗೇರಿ ನಿವಾಸಿಯಾದ ನಜೀರ್ ಹುಸೇನಸಾಬ್ ಎಂಬ ಸುಮಾರು 40 ವರ್ಷದ ವ್ಯಕ್ತಿ ಅತ್ಯಾಚಾರಕ್ಕೆ ಮುಂದಾಗಿದ್ದ ಎಂಬುದು ಸ್ಥಳೀಯರ ಆರೋಪವಾಗಿದೆ.
8 ವರ್ಷದ ಬಾಲಕಿಯ ತಾಯಿ ಬೇರೆಯವರ ಮನೆ ಕೆಲಸಕ್ಕೆಂದು ಹೋಗಿದ್ದರು. ಮಗು ತಾಯಿ ಬಳಿ ಹೋಗುತ್ತಿದ್ದ ವೇಳೆ ಕತ್ತಲಲ್ಲಿ ಮಗುವನ್ನು ಹೊತ್ತೊಯ್ದು ಅಸಭ್ಯ ವರ್ತನೆಗೆ ಮುಂದಾಗಿದ್ದ ಎನ್ನಲಾಗಿದೆ. ಇದ್ದಕ್ಕಿದ್ದ ಹಾಗೆ ಬಟ್ಟೆ ಕಳಚಿ ನಿಂತಿದ್ದು ಬಾಲಕಿ ಎದುರು ಅಸಭ್ಯ ವರ್ತನೆ ತೋರಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಗುವಿನ ಚೀರಾಟ ಕೇಳಿ ಸ್ಥಳೀಯರು ಓಡಿ ಬಂದು ಇವನನ್ನು ಹಿಡಿದು ಕಂಬಕ್ಕೆ ಕಟ್ಟಿ ನೀರು ಹಾಕಿ ಗೂಸಾ ನೀಡಿದ್ದಾರೆ.
ನೆರೆದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದು, ನಂತರ ಸ್ಥಳಕ್ಕೆ ಬಂದ ಗದಗ ನಗರ ಠಾಣೆ ಪೊಲೀಸರು ನಜೀರ್ ನನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.