ಬೆಂಗಳೂರು: ಕೇಸರಿ ಶಾಲು ಹಾಕಿಕೊಂಡು ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕಲಾಸಿಪಾಳ್ಯ ಪೊಲೀಸರು (Kalasipalya) ಬಂಧಿಸಿದ್ದಾರೆ.
ಸುರೇಂದ್ರ ಕುಮಾರ್ ಎಂಬುವವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದ ತಬ್ರೇಜ್, ಇಮ್ರಾನ್, ಅಜೀಜ್ ಮೂವರು ಬಂಧಿತ ಆರೋಪಿಗಳು. ಈ ಕುರಿತು ಹಲ್ಲೆಗೊಳಗಾದ ಸುರೇಂದ್ರ ಕುಮಾರ್ ಕಲಾಸಿಪಾಳ್ಯ ಪೊಲೀಸ್ (Kalasipalya Police) ಠಾಣೆಯಲ್ಲಿ ಅನ್ಯಕೋಮಿನ ಯುವಕರ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೂ ಓದಿ:ತಿಮರೋಡಿ ಮನೆಯಿಂದ ಸಿಸಿಟಿವಿ ಹಾರ್ಡ್ ಡಿಸ್ಕ್, ಚಿನ್ನಯ್ಯ ಬಳಸುತ್ತಿದ್ದ ಮೊಬೈಲ್ ವಶ
ದೂರಿನಲ್ಲಿ ನಾನು ಲೋಡಿಂಗ್ ಮಾಡಿಸುವ ಕೆಲಸ ಮಾಡುತ್ತಿದ್ದೆ. ನಮ್ಮ ಹುಡುಗ ಕೇಸರಿ ಶಾಲು ಹಾಕಿಕೊಂಡು ಕೆಲಸ ಮಾಡುತ್ತಿದ್ದ. ಈ ವೇಳೆ ಅಪರಿಚಿತ ಯುವಕನೋರ್ವ ಬಂದು ಕೇಸರಿ ಶಾಲು ಯಾಕೆ ಹಾಕ್ಕೊಂಡಿದ್ದೀಯಾ? ಇಲ್ಲಿ ಇದೆಲ್ಲಾ ಹಾಕಬಾರದು. ಅದಕ್ಕೆ ನಾನು ಹೋಗಿ ಕೇಳಿದ್ದಕ್ಕೆ, ಅವನಿಗೆ ಶಾಲು ತೆಗೆಯೋಕೆ ಹೇಳಿ ಎಂದ. ಹಮಾಲಿ ಕೆಲಸ ಮಾಡುವ ಹುಡುಗ, ಅವನು ಕೇಸರಿ ಶಾಲು ಹಾಕಿಕೊಂಡರೆ ನಿಮಗೇನು ಸಮಸ್ಯೆ ಎಂದು ನಾನು ಕೇಳಿದೆ. ಅದೇ ಸಮಯದಲ್ಲಿ ಇನ್ನಿಬ್ಬರು ಯುವಕರು ಬಂದರು. ನಾನು ಆಫೀಸ್ ಒಳಗೆ ಬರುತ್ತಿದ್ದಂತೆ ಆ ಹುಡಗನಿಗೆ ಮುಖದ ಮೇಲೆ 3-4 ಏಟು ಹೊಡೆದರು. ಆಗ ಕೇಳಿದ್ದಕ್ಕೆ ನನ್ನನ್ನು ಎಳೆದಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೂರಿನನ್ವಯ ಕಲಾಸಿಪಾಳ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಇದನ್ನೂ ಓದಿ:ಮೈಸೂರು ದಸರಾ – ಮೊದಲ ತಂಡದ ಭೀಮನಿಗಿಂತ ಸುಗ್ರೀವನೇ ಬಲಶಾಲಿ