ಹಾಸನ: ಅಮಾವಾಸ್ಯೆಯಂದು ಹುಟ್ಟಿದ ಹೆಂಗಸನ್ನು ಬಲಿ ಕೊಟ್ರೆ ನಿಧಿ ಸಿಗುತ್ತೆ ಅನ್ನೋ ಮೂಢನಂಬಿಕೆಯಲ್ಲಿ ತನ್ನ ಬಳಿ ಕೆಲಸ ಮಾಡ್ತಿದ್ದ ಡ್ರೈವರ್ ಹೆಂಡತಿ, ಮಕ್ಕಳನ್ನೇ ಅಪಹರಿಸಿದ್ದ ಭೂಪನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಮನೆಯೊಂದರಲ್ಲಿ ಕೂಡಿಟ್ಟಿದ್ದ ಆ ಕಿರಾತಕನ ಸಂಚಿನ ಬಗ್ಗೆ ಕಿಡ್ನಾಪ್ ಆಗಿದ್ದ ಮಹಿಳೆ ತನ್ನ ಗಂಡನಿಗೆ ಫೋನ್ ಮಾಡಿ, ತನ್ನ ಅಪಹರಣ ಹಾಗೂ ನಿಧಿಗಾಗಿ ಬಲಿ ಕೊಡಲು ಮಂದಾಗಿದ್ದಾನೆ ಎಂದು ತಿಳಿಸಿದ್ದಾರೆ. ಕೂಡಲೇ ಪತಿ ರಾಜೇಶ್ ಆ ಫೋನ್ ಕಾಲ್ ರೆಕಾರ್ಡ್ ಮಾಡಿ ಪೊಲೀಸರಿಗೆ ದೂರು ನೀಡಿದ್ರು.
Advertisement
ದೂರು ಸ್ವೀಕರಿಸಿದ ಪೊಲೀಸರು ಕೂಡಲೇ ಎಚ್ಚೆತ್ತು ಮೊಬೈಲ್ ಲೊಕೇಷನ್ ಆಧಾರಿಸಿ ಮಹಿಳೆ ಮತ್ತು ಮಕ್ಕಳನ್ನ ಪತ್ತೆ ಮಾಡಿದ ಪೊಲೀಸರು, ಹಾಸನ ನಗರದ ಹೊರವಲಯ ತಣ್ಣೀರುಹಳ್ಳದ ಮನೆಯಲ್ಲಿ ಬಂಧಿಸಿಟ್ಟಿದ್ದ ದಕ್ಷಿಣ ಕನ್ನಡ ಜಿಲ್ಲೆ ನೆಲ್ಯಾಡಿಯ ಅನಿಲ್‍ನನ್ನ ಬಂಧಿಸಿದ್ದಾರೆ.
Advertisement
Advertisement
ಮೊದಲೇ ದೂರು ದಾಖಲು:
ಹಾಸನದಲ್ಲಿ ನಿಧಿಗಾಗಿ ಬಲಿಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಎಸ್ಪಿ ರಾಹುಲ್ ಕುಮಾರ್ ಸ್ಪಷ್ಟನೆ ನೀಡಿದ್ದು, ನಿಧಿಗಾಗಿ ಬಲಿ ಎಂಬ ವಿಚಾರ ಸುಳ್ಳು ವದಂತಿಯಾಗಿದೆ. ಮಹಿಳೆ ಮತ್ತು ಕಾಣೆಯಾಗಿರೋ ಬಗ್ಗೆ ಈ ಮೊದಲೇ ದೂರು ದಾಖಲಾಗಿತ್ತು.
Advertisement
ನೆಲ್ಯಾಡಿ ಮೂಲದ ರಾಜೇಶ್ ತನ್ನ ಪತ್ನಿ ಮತ್ತು ಮಕ್ಕಳು ಕಾಣೆಯಾಗಿದ್ದಾರೆಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದ್ರೆ ಇದೀಗ ಬಲಿಗಾಗಿ ಅರೋಪಿ ಅನಿಲ್ ಪತ್ನಿಯನ್ನ ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಆರೋಪಿ ಹಾಗೂ ದೂರುದಾರ ಕುಟುಂಬ 10 ವರ್ಷದಿಂದ ಪರಿಚಯ ಇತ್ತು. ಮುಂದಿನ ವಿಚಾರಣೆ ಪುತ್ತೂರು ಪೊಲೀಸರು ನಡೆಸುತ್ತಾರೆ ಅಂತ ಹೇಳಿದ್ದಾರೆ.