ನವದೆಹಲಿ: ಆಪಲ್ ಫೋನ್ ಮತ್ತು ವಾಚ್‍ಗಳನ್ನು ಅಕ್ರಮವಾಗಿ ಕಳ್ಳಸಾಗಾಣೆ ಮಾಡುತ್ತಿದ್ದ ಆರೋಪಿಯನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯಿಂದ 27 ಆಪಲ್ ಐ ಫೋನ್‍ಗಳು, ರೋಲೆಕ್ಸ್, ಡಿಯರ್, ಅರ್ಮಾನಿ, ಡಿಸೆಲ್ ಮತ್ತು ಟಾಮಿ ಹಿಲ್ಫಿಗರ್ (Rolex, Dior, Armani, Diesel and Tommy Hilfiger) ಸೇರಿದಂತೆ 300 ಐಷಾರಾಮಿ ಕೈಗಡಿಯಾರಗಳು ಪತ್ತೆಯಾಗಿವೆ. ಆರೋಪಿ ಸರಕುಗಳನ್ನು ಹಾಂಕಾಂಗ್‍ನಿಂದ ಕಳ್ಳಸಾಗಾಣೆ ಮಾಡಲು ಯತ್ನಿಸುತ್ತಿದ್ದನು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ವಿಮಾನ ನಿಲ್ದಾಣದಲ್ಲಿ ಅನುಮಾನದ ಮೇರೆಗೆ ಅಧಿಕಾರಿಗಳು ಆರೋಪಿಯನ್ನು ಪರಿಶೀಲನೆ ಮಾಡಿದ್ದಾರೆ. ಆಗ ಆತನ ಬಳಿ ಸುಮಾರು 20 ಲಕ್ಷ ರೂ. ಮೌಲ್ಯದ ವಾಚ್‍ಗಳು ಕಂಡು ಬಂದಿದೆ. ತಕ್ಷಣ ಅಧಿಕಾರಿಗಳು ಆತನನ್ನು ಬಂಧಿಸಿ ಈ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.