ಮುಂಬೈ: ತಂದೆಯೇ ಮಗಳ ಮೇಲೆ ಅತ್ಯಾಚಾರವೆಸಗಿ, ಅವಳನ್ನು ಹತ್ಯೆ ಮಾಡಲು ಯತ್ನಿಸಿದ ಘಟನೆ ಮಹಾರಾಷ್ಟ್ರದ ಪುಣಾದಲ್ಲಿ ನಡೆದಿದೆ.
32 ವರ್ಷದ ವ್ಯಕ್ತಿಯೊಬ್ಬ ತನ್ನ 5 ವರ್ಷದ ಮಗಳನ್ನು ಅತ್ಯಾಚಾರ ಮಾಡಿದ್ದನು. ಇದಕ್ಕೆ ಆತನ ಪತ್ನಿ ವಿರೋಧಿಸಿದ್ದಳು. ಅಷ್ಟೇ ಅಲ್ಲದೇ ಈ ವಿಷಯಕ್ಕೆ ಪತಿ, ಪತ್ನಿ ನಡುವೆ ವಾಗ್ವಾದ ನಡೆದಿದೆ. ಇದು ಮಿತಿಮೀರಿದ್ದು, ಆತ ಕೋಪಗೊಂಡು ತನ್ನ 5 ವರ್ಷದ ಮಗಳನ್ನು ನೆಲದ ಮೇಲೆ ದೂಡಿ, ಬೆಲ್ಟ್ನಿಂದ ಅವಳ ಕತ್ತು ಹಿಸುಕಲು ಯತ್ನಿಸಿದ್ದಾನೆ. ಇದನ್ನೂ ಓದಿ: ಪೊಲೀಸರಿಗೆ ಗನ್ ತೋರಿಸಿದ್ದ ದೆಹಲಿ ಗಲಭೆಯ ಆರೋಪಿಗೆ ಅದ್ಧೂರಿ ಸ್ವಾಗತ
Advertisement
Advertisement
ಆದರೆ ಪತ್ನಿ ಮಧ್ಯಪ್ರವೇಶಿಸಿ ಬಾಲಕಿಯನ್ನು ರಕ್ಷಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆತನ ಪತ್ನಿ ಪಿಂಪ್ರಿ ಚಿಂಚ್ವಾಡ್ ಪೊಲೀಸರಿಗೆ ದೂರು ನೀಡಿದ್ದರು. ಘಟನೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ವಿಮಾನದಲ್ಲಿ ಗುಟ್ಕಾ ಕಲೆ – ಸೂಪರ್ಸ್ಟಾರ್ಗಳ ಕಾಲೆಳೆದ ನೆಟ್ಟಿಗರು