ಭೋಪಾಲ್: ದೇವಾಲಯದ (Temple) ಆವರಣದೊಳಗೆ ಶಿವಲಿಂಗದ ಎದುರೇ ಅಶ್ಲೀಲ ಕೃತ್ಯದಲ್ಲಿ (Obscenity) ತೊಡಗಿದ್ದ ವ್ಯಕ್ತಿಯೊಬ್ಬನ ವೀಡಿಯೋ ಹರಿದಾಡಿತ್ತು. ವ್ಯಕ್ತಿಯ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್‌ನ (Indore) ವಿಶ್ವೇಶ್ವರ ಮಹಾದೇವ ದೇವಾಲಯದಲ್ಲಿ ನಡೆದಿದೆ. ವಾಸಿಂ ಅಲಿಯಾಸ್ ಘಂಟಿ (30) ಎಂದು ಗುರುತಿಸಲಾದ ವ್ಯಕ್ತಿ ಶುಕ್ರವಾರ ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗದ ಮುಂದೆಯೇ ತನ್ನ ಖಾಸಗಿ ಅಂಗವನ್ನು ತೋರ್ಪಡಿಸಿ ಅಶ್ಲೀಲವಾಗಿ ವರ್ತಿಸಿದ್ದ.
ದೇವಾಲಯದ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಯ ಕೃತ್ಯ ದಾಖಲಾಗಿದೆ. ಆತ ದೇವಾಲಯದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ವೀಡಿಯೋವನ್ನಾಧರಿಸಿಕೊಂಡು ಪೊಲೀಸರು ನಗರದ ಟೈರ್ ರಿಪೇರಿ ಅಂಗಡಿ ನಡೆಸುತ್ತಿದ್ದ ಆರೋಪಿ ವಾಸಿಂನನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಬಂಧಿಸಿದ್ದಾರೆ. ಇದನ್ನೂ ಓದಿ: ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್ – 3 ಲಷ್ಕರ್ ಉಗ್ರರ ಸಾವು
ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ದೇವಾಲಯದೊಳಗೆ ವ್ಯಕ್ತಿಯ ನಡವಳಿಕೆಯನ್ನು ಅತ್ಯಂತ ಹೇಯ ಕೃತ್ಯ ಎಂದಿದ್ದಾರೆ. ಹಿಂದೂ ಸಂಘಟನೆಗಳು ವ್ಯಕ್ತಿಯ ಕೃತ್ಯವನ್ನು ಖಂಡಿಸಿ ದೇವಾಲಯದ ಹೊರಗಡೆ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ ಹಾಗೂ ದೇವಾಲಯದ ಆವರಣವನ್ನು ಶುದ್ಧೀಕರಿಸಿದ್ದಾರೆ. ಇದನ್ನೂ ಓದಿ: ಓದಿದ್ದು 8ನೇ ತರಗತಿ, ಆದ್ರೆ IPS ಅಧಿಕಾರಿ ಎಂದು ಮಹಿಳೆಯರನ್ನು ನಂಬಿಸಿ ಲಕ್ಷ ಲಕ್ಷ ಹಣ ದೋಚಿದ