ಬೆಂಗಳೂರು: ಹುಡುಗಿಯರ ಹೆಸರಲ್ಲಿ ನಕಲಿ ಫೇಸ್‍ಬುಕ್ ಖಾತೆ ತೆರೆದು, ಚಂದದ ಬೆಡಗಿಯರ ಬಣ್ಣಬಣ್ಣದ ಫೋಟೋ ಹಾಕಿ ಲಕ್ಷಾಂತರ ರೂ. ಹಣವನ್ನು ವಂಚಿಸಿದ ಯುವಕ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ಪ್ರಖ್ಯಾತ್ ವಿನಯ್ ಬಂಧಿತ ಆರೋಪಿ. ಮೂಲತಃ ತುಮಕೂರಿನ ಶಿರಾ ಗೇಟ್ ಕೆ.ಹೆಚ್.ಬಿ ಕಾಲೋನಿ ವಾಸಿಯಾಗಿರುವ ಪ್ರಖ್ಯಾತ್ ಫೇಸ್‍ಬುಕ್‍ನಲ್ಲಿ ಫೇಕ್ ಖಾತೆ ತೆರೆದು, ಹುಡುಗಿ ಅಂತ ನಂಬಿಸಿ ವಂಚಿಸುತ್ತಿದ್ದನು. ವಿನುತ ಹಾಗೂ ವಿಜೇತ ಎಂಬ ಹುಡುಗಿಯರ ಹೆಸರಲ್ಲಿ ಖಾತೆ ತೆರೆದಿದ್ದ ಆರೋಪಿ, ಬೆಂಗಳೂರಿನ ಖಾಸಗಿ ಕಾಲೇಜ್ ವಿದ್ಯಾರ್ಥಿನಿ ಎಂದು ಪೋಸ್ಟ್ ಗಳನ್ನು ಹಾಕುತ್ತಿದ್ದ.
Advertisement
Advertisement
ಕೆಲವು ಹುಡುಗಿಯರ ಖಾಸಗಿ ಪೋಟೋ ಮತ್ತು ಮಾಹಿತಿ ಪಡೆದು ಲಕ್ಷ ಲಕ್ಷ ರೂ. ಹಣಕ್ಕೆ ಆರೋಪಿ ಬೇಡಿಕೆ ಇಡುತ್ತಿದ್ದನು. ಅಲ್ಲದೆ ಆನ್‍ಲೈನ್ ಮೂಲಕ ಹಣ ಪಡೆದು ಜನರಿಗೆ ವಂಚಿಸುತ್ತಿದ್ದನು. ಈತನಿಂದ ವಂಚನೆಗೊಳಗಾದವರು ಪೊಲೀಸರ ಮೊರೆ ಹೋಗಿದ್ದಾರೆ. ಸೈಬರ್ ಪೊಲೀಸರಿಗೆ ವಂಚನೆ ಕುರಿತು ದೂರು ಸಲ್ಲಿಸಿದ್ದು, ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಸದ್ಯ ಈ ದೂರಿನ ಆಧಾರದ ಮೇರೆಗೆ ಪ್ರಖ್ಯಾತ್‍ನನ್ನು ಸೈಬರ್ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv