– ಘಟನೆಯಿಂದ ಮನನೊಂದು ಯುವತಿ ತಂದೆ ಅಸ್ವಸ್ಥ
ಹಾಸನ: ಅತ್ತೆ ಮಗಳನ್ನು ಕಿಡ್ನಾಪ್ ಮಾಡಿ ಕಾರಿನಲ್ಲೇ ತಾಳಿ ಕಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ರಾಮನಗರದಲ್ಲಿ ಬಂಧಿಸಿದ್ದಾರೆ.
ಯುವಕ ಮನು ಬಲವಂತವಾಗಿ ತನ್ನ ಅತ್ತೆ ಮಗಳಿಗೆ ತಾಳಿ ಕಟ್ಟಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯುವತಿಯ ಪೋಷಕರು ನೀಡಿದ ದೂರಿನ ಮೆರೆಗೆ ಪೊಲೀಸರು ಗಂಭೀರವಾಗಿ ತನಿಖೆ ನೆಡಸಲು ಶುರು ಮಾಡಿದ್ದರು. ಇದೀಗ ಪೊಲೀಸರು ರಾಮನಗರದಲ್ಲಿ ಯುವತಿಯನ್ನು ರಕ್ಷಿಸಿ ಯುವಕನನ್ನು ಬಂಧಿಸಿದ್ದಾರೆ.
ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಯುವಕ ಮತ್ತು ಯುವತಿಯನ್ನು ಎಸ್‍ಪಿ ಆಫೀಸ್‍ಗೆ ಕರೆ ತರುತ್ತಿದ್ದಾರೆ. ಈ ಘಟನೆಯಿಂದ ಯುವತಿಯ ತಂದೆ ಮನನೊಂದು ಅಸ್ವಸ್ಥರಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಅತ್ತೆ ಮಗಳನ್ನು ಕಿಡ್ನಾಪ್ ಮಾಡಿ ಕಾರಲ್ಲೇ ತಾಳಿ ಕಟ್ಟಿದ
ಏನಿದು ಪ್ರಕರಣ?
ಮನು ಎಂಬವನು ಬಸ್ಸಿಗಾಗಿ ಕಾಯುತ್ತಿದ್ದ ತನ್ನ ಅತ್ತೆ ಮಗಳನ್ನು ಕಿಡ್ನಾಪ್ ಮಾಡಿ ಕಾರಿನಲ್ಲೇ ತಾಳಿ ಕಟ್ಟಿದ್ದನು. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮನು ಅರಸೀಕೆರೆ ತಾಲೂಕಿನ ಕುಡುಕುಂದಿ ಗ್ರಾಮದವನಾಗಿದ್ದು, ತನ್ನ ಅತ್ತೆ ಮಗಳನ್ನು ಇಷ್ಟಪಡುತ್ತಿದ್ದನು. ಆದರೆ ಯುವತಿ ಮನುವನ್ನು ಮದುವೆಯಾಗಲು ನಿರಾಕರಿಸಿದ್ದಳು. ವಿರೋಧವಿದ್ದರೂ ಯುವಕ ಬಲವಂತವಾಗಿ ಕಿಡ್ನಾಪ್ ಮಾಡಿ ತಾಳಿ ಕಟ್ಟಿದ್ದಾನು.
ಯುವತಿ ಟೈಲರಿಂಗ್ ಕ್ಲಾಸಿಗೆ ಹೋಗುತ್ತಿದ್ದಳು. ಹೀಗಾಗಿ ಯುವತಿ ಬಸ್ ಸ್ಟ್ಯಾಂಡ್‍ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಳು. ಈ ವೇಳೆ ಯುವತಿಯ ಅತ್ತೆ ಮಗ ತನ್ನ ಸ್ನೇಹಿತರ ಜೊತೆ ಸೇರಿ ಆಕೆಯನ್ನು ಕಿಡ್ನಾಪ್ ಮಾಡಿ ತಾಳಿ ಕಟ್ಟಲು ಮುಂದಾಗಿದ್ದನು. ಈ ವೇಳೆ ಯುವತಿ ಮನುವಿನ ಕೈ ಕಚ್ಚಿ, ತನ್ನ ಕುತ್ತಿಗೆಗೆ ಕೈ ಅಡ್ಡ ಇಟ್ಟಿದ್ದಳು. ಕೈ ಕಚ್ಚಿದರೂ, ಕುತ್ತಿಗೆಗೆ ಕೈ ಅಡ್ಡ ಇಟ್ಟಿದ್ದರು ಸಹ ಮನು, ಯುವತಿಯನ್ನು ಬಿಡದೆ ತಾಳಿ ಕಟ್ಟಿ ಮದುವೆ ಆಗಿದ್ದನು.