ಮುಂಬೈ: ಬೇರೋಬ್ಬನ ಜೊತೆಗೆ ವಿವಾಹವಾಗಿದ್ದ ಮಾಜಿ ಪ್ರೇಯಸಿಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆರೋಪಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ಅಂದೇರಿನ ನಗರದ ನಿವಾಸಿ 30 ವರ್ಷದ ಯುವಕ ಬಂಧಿತ ಆರೋಪಿ. ಆರೋಪಿ ಯುವಕನನ್ನು ತಿಲಕ್‍ನಗರ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.
ಏನಿದು ಪ್ರಕರಣ?:
ಸಂತ್ರಸ್ತ ಯುವತಿ ವೈದ್ಯಕೀಯ ವ್ಯಾಸಂಗಕ್ಕೆಂದು ಮಧ್ಯಪ್ರದೇಶದ ಇಂದೋರ್ ನಿಂದ ಮುಂಬೈಗೆ ಬಂದಿದ್ದಳು. ಸ್ಥಳೀಯ ಆಸ್ಪತ್ರೆಯೊ0ದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಚಿಕಿತ್ಸೆ ಪಡೆಯಲು ಬಂದಿದ್ದ ಸಂಬಂಧಿ ಯುವಕನೊಬ್ಬ ಪರಿಚಯವಾಗಿದ್ದಾನೆ. ಈ ವೇಳೆ ಮೊಬೈಲ್ ನಂಬರ್ ಪಡೆದು ಇಬ್ಬರು ಸಂಪರ್ಕ ಹೊಂದಿದ್ದಾರೆ.
ಕೆಲವು ದಿನಗಳ ನಂತರ ಇಬ್ಬರೂ ಆತ್ಮೀಯವಾಗಿ ಬೆರೆತು, ವಾಟ್ಸಪ್ ಹಾಗೂ ಫೋನ್ ಚಾಟಿಂಗ್ ಮಾಡಿದ್ದಾರೆ. ಇದನ್ನೇ ಉಪಯೋಗ ಪಡೆದುಕೊಂಡ ಯುವಕ 2016ರಲ್ಲಿ ಪ್ರೀತಿಯ ಪ್ರಸ್ತಾಪ ಮಾಡಿದ್ದು ಯುವತಿ ನಿರಾಕರಿಸಿದ್ದಾಳೆ. ಆದರೂ ಯುವತಿ ಯುವಕನ ಸಂಪರ್ಕದಲ್ಲಿದ್ದಳು. ಇದಾದ ಬಳಿಕ ಇಬ್ಬರ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿದ್ದು, ಆಗ ಆಕೆಗೆ ತಿಳಿಯದಂತೆ ಯುವಕ ಕೆಲವು ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ.
ಕ್ಲಿಕ್ಕಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ ಆತನ ನಡವಳಿಯಿಂದ ಬೇಸತ್ತ ಯುವತಿ ದೂರ ಉಳಿದಿದ್ದಾಳೆ. ಕಳೆದ ವರ್ಷ ಫೆಬ್ರುವರಿಯಲ್ಲಿ ಬೇರೋಬ್ಬರ ಜೊತೆಗೆ ಯುವತಿ ವಿವಾಹವಾಗಿದ್ದಾಳೆ. ಈ ಕುರಿತು ಮಾಹಿತಿ ಗೊತ್ತಾಗುತ್ತಿದ್ದಂತೆ ಯುವತಿಯ ಮಾಜಿ ಲವ್ವರ್ ಕೋಪಗೊಂಡಿದ್ದಾನೆ. ಯುವತಿಯು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಸಹೋದ್ಯೋಗಿಗಳಿಗೆ ಆಕೆಯ ಜೊತೆಗಿದ್ದ ಖಾಸಗಿ ಚಿತ್ರಗಳನ್ನು ಕಳುಹಿಸಿದ್ದಾನೆ. ಈ ಕುರಿತು ಯುವತಿ ತಿಲಕ್‍ನಗರ ಠಾಣೆಯಲ್ಲಿ ದೂರು ನೀಡಿದ್ದಳು. ಪ್ರಕರಣದ ಕುರಿತು ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv