ಕೊಲೆಗೂ ಮುನ್ನ ತನ್ನ ಕೈ ಕತ್ತರಿಸಿ ಹರಿದ ರಕ್ತವನ್ನು ಲವ್ವರ್ ಹಣೆಗೆ ಸಿಂಧೂರವಿಟ್ಟ

Public TV
2 Min Read
sindhuraa

ಮುಂಬೈ: 21 ವರ್ಷದ ಯುವಕನೊಬ್ಬ ಸಿನಿಮಾ ಸ್ಟೈಲಿನಲ್ಲಿ ತನ್ನ ಕೈ ಕತ್ತರಿಸಿಕೊಂಡು ಅದರಿಂದ ಹರಿದ ರಕ್ತವನ್ನು ಪ್ರಿಯತಮೆಯ ಹಣೆಗೆ ಸಿಂಧೂರವಾಗಿಟ್ಟ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರದ ಕಲ್ಯಾಣ್ ಎಂಬಲ್ಲಿ ನಡೆದಿದೆ.

ಯುವಕ ಅರುಣ್ ಗುಪ್ತ ತನ್ನ ಪ್ರಿಯತಮೆ ಪ್ರತಿಭಾ ಪ್ರಸಾದ್ ನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಲ್ಲದೆ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೂ ಮೊದಲು ತಾನು ಕತ್ತರಿಸಿಕೊಂಡ ಕೈಯಿಂದ ಹರಿಯುತ್ತಿದ್ದ ರಕ್ತವನ್ನು ಆಕೆಯ ಹಣೆಗಿಟ್ಟಿದ್ದಾನೆ.

default

ಅರುಣ್ ತನ್ನ ಮನೆಯಲ್ಲಿ ವಾರಣಾಸಿಗೆ ಹೋಗುವುದಾಗಿ ಸುಳ್ಳು ಹೇಳಿದ್ದಾನೆ. ಆದರೆ ಆತ ನೇರವಾಗಿ ತನ್ನ ಗೆಳತಿಯನ್ನು ನೋಡಲು ಕಲ್ಯಾಣ್ ಗೆ ತೆರಳಿದ್ದು, ಅಲ್ಲಿ ಪ್ರತಿಭಾಳನ್ನು ಕೊಲೆಗೈದು ಬಳಿಕ ತಾನೂ ಗೆಸ್ಟ್ ಹೌಸ್ ನಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗೆಳತಿಯ ಕತ್ತು ಹಿಸುಕುವ ಮೊದಲು ಅರುಣ್, ಬ್ಲೇಡ್ ನಿಂದ ತನ್ನ ಕೈಯನ್ನು ಕೊಯ್ದುಕೊಂಡಿದ್ದಾನೆ. ಬಳಿಕ ಮದುವೆಯಲ್ಲಿ ಭಾವಿ ಪತ್ನಿಯ ಹಣೆಗೆ ಕುಂಕುಮನ್ನು ಇಡುವಂತೆ ತನ್ನ ಕೈಯಿಂದ ಹರಿಯುತ್ತಿರುವ ರಕ್ತವನ್ನು ಆಕೆಯ ಹಣೆಗೆ ಸಿಂಧೂರವಾಗಿಸಿದ್ದಾನೆ. ಅಲ್ಲದೆ ಈ ವೇಳೆ ಗೆಳತಿಯ ಜೊತೆ ಸೆಲ್ಫಿಯನ್ನೂ ಕ್ಲಿಕ್ಕಿಸಿಕೊಂಡಿದ್ದಾನೆ ಎಂದು ಮಹಾತ್ಮಾ ಫುಲೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪಿಆರ್ ಲೊಂಧೆ ತಿಳಿಸಿದ್ದಾರೆ.

sindhura FINAL

ಇಬ್ಬರು ಶುಕ್ರವಾರ 1.30ಕ್ಕೆ ಗೆಸ್ಟ್ ಹೌಸ್ ಗೆ ಬಂದಿದ್ದಾರೆ. ಆ ಬಳಿಕ ಅವರು ಸಂಜೆ ಒಂದು ಬಾರಿ ನೀರು ಕೇಳಿದ್ದು ಬಿಟ್ಟರೆ ನಂತರ ರೂಮಿನಿಂದ ಹೊರಬಂದಿರಲಿಲ್ಲ. ರಾತ್ರಿ 9.30ರ ಸುಮಾರಿಗೆ ಹೋಟೆಲಿನ ಸಿಬ್ಬಂದಿ ಊಟಕ್ಕೆ ಕರೆಯಲೆಂದು ಜೋಡಿಯಿದ್ದ ಬಾಗಿಲು ತಟ್ಟಿದ್ದಾರೆ. ಆದರೆ ಕೋಣೆಯ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಸಿಬ್ಬಂದಿ ನೇರವಾಗಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ನೋಡಿದಾಗ ಪ್ರತಿಭಾ ಬೆಡ್ ನಲ್ಲಿ ಸಾವನ್ನಪ್ಪಿದಂತೆ, ಇತ್ತ ಅರುಣ್ ಫ್ಯಾನ್ ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಇದೇ ವೇಳೆ ಮೃತದೇಹದ ಪಕ್ಕ ಬ್ಲೇಡ್ ಸಿಕ್ಕಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

sindhur 3

ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಆದರೆ ಮದುವೆಯಾಗುವಂತೆ ಅರುಣ್ ಕೇಳಿಕೊಂಡಾಗ ಪ್ರತಿಭಾ ನಿರಾಕರಿಸಿದ್ದರಿಂದ ಆತ ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಅರುಣ್ ಹಾಗೂ ಪ್ರತಿಭಾ ಫೇಸ್ ಬುಕ್ ಮೂಲಕ ಕಳೆದ ವರ್ಷ ಪರಿಚಯವಾಗಿದ್ದರು. ಅರುಣ್ ಉತ್ತರ ಪ್ರದೇಶದ ನಿವಾಸಿ, ಯುವತಿ ಕೂಡ ಇದೇ ಮೂಲದವಳಾಗಿದ್ದು ಮುಂಬೈನಲ್ಲಿ ನೆಲೆಸಿದ್ದಳು ಎನ್ನಲಾಗಿದೆ.

love complaint 1

Share This Article
Leave a Comment

Leave a Reply

Your email address will not be published. Required fields are marked *