ಕೋಲ್ಕತ್ತಾ: ಕೋಲ್ಕತ್ತಾದ (Kolkatta) ಆರ್‌ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ (RG Kar Medical College) ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಸಂತ್ರಸ್ತೆ ತಂದೆ ಮಾತನಾಡಿ, ಈ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ (Mamata Banerjee) ಹಾಗೂ ಕೋಲ್ಕತ್ತಾ ಪೊಲೀಸರ ಪಾತ್ರದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಮಗಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ದೇಶವ್ಯಾಪಿಯಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಆದ್ರೆ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರತಿಭಟನೆ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ಸಾಧ್ಯವಾದಷ್ಟು ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆಯ ಪೋಷಕರು ಆರೋಪಿಸಿದ್ದಾರೆ.ಇದನ್ನೂ ಓದಿ : ಯುಎಸ್ ಕಾರು ಅಪಘಾತ; ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಸಾವು
- Advertisement -
ಸಿಎಂ ಮಾಡುತ್ತಿರುವುದರ ಕುರಿತು ತೃಪ್ತಿಯಿಲ್ಲ ಹಾಗೂ ನಮಗೆ ಇದು ಅಸಂತೋಷವನ್ನುಂಟು ಮಾಡಿದೆ. ಆದ ಕಾರಣ ನಾವು ಯಾವುದೇ ಪರಿಹಾರ ಸ್ವೀಕರಿಸುವುದನ್ನು ನಿರಾಕರಿಸಿದ್ದೇವೆ ಎಂದು ಸಂತ್ರಸ್ತೆಯ ತಂದೆ ಮಾಧ್ಯಮದ ಬಳಿ ಹೇಳಿಕೊಂಡಿದ್ದಾರೆ.
- Advertisement -
- Advertisement -
ಪ್ರಕರಣದ ತನಿಖೆ ನಡೆಯುತ್ತಿದೆ. ಆದಷ್ಟು ಬೇಗ ಪ್ರಕರಣದ ಹಿಂದಿರುವ ಆರೋಪಿಗಳನ್ನು ಬಂಧಿಸುತ್ತಾರೆ ಎಂದು ನಾವು ನಂಬಿದ್ದೆವು. ಆದ್ರೆ ಈವರೆಗೆ ಏನೂ ನಡೆದಿಲ್ಲ. ಈ ಅಪರಾಧದಲ್ಲಿ ಆಸ್ಪತ್ರೆಯ ಎದೆ ಔಷಧ ವಿಭಾಗವು ಇದರಲ್ಲಿ ಭಾಗಿಯಾಗಿರುವ ಅನುಮಾನವಿದೆ. ಈ ಪ್ರಕರಣದಲ್ಲಿ ಇಲಾಖೆಯಾಗಲಿ, ಕಾಲೇಜಾಗಲಿ ನಮಗೆ ಸಹಕರಿಸಿಲ್ಲ. ಒಬ್ಬ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಇದರಲ್ಲಿ ಇನ್ನೂ ಕೆಲವರ ಪಾತ್ರವಿದೆ. ಈ ಪ್ರಕರಣಕ್ಕೆ ಸಂಪೂರ್ಣ ತನಿಖೆಯ ಜವಾಬ್ದಾರಿಯನ್ನು ಇಲಾಖೆಯೆ ನಿರ್ವಹಿಸಬೇಕು ಎಂದು ಸಂತ್ರಸ್ತೆಯ ಪೋಷಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ : ಸಾರಿಗೆ ಬಸ್‍ನಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್‍ರೇಪ್ – ಐವರು ಕಾಮುಕರು ಅರೆಸ್ಟ್
- Advertisement -
ಸದ್ಯ ಟ್ರೈನಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐನ (CBI) ತನಿಖಾಧಿಕಾರಿಗಳು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಿಬ್ಬಂದಿಗಳನ್ನ ವಿಚಾರಣೆ ನಡೆಸುತ್ತಿದ್ದಾರೆ.