ಕೋಲ್ಕತಾ: ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ಬಹು ನಿರೀಕ್ಷಿತ ಮನೆ ಬಾಗಿಲಿಗೆ ರೇಷನ್ ನೀಡುವ ‘ದುವಾರ್ ಪಡಿತರ ಯೋಜನೆ’ ಕಾನೂನುಬಾಹಿರ ಎಂದು ಕೊಲ್ಕತ್ತಾ ಹೈಕೋರ್ಟ್ ಹೇಳಿದೆ.
Advertisement
ಪಡಿತರ ವಿತರಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ರಾಯ್ ಮತ್ತು ಚಿತ್ತ ರಂಜನ್ ದಾಸ್ ಅವರ ವಿಭಾಗೀಯ ಪೀಠ, ಜನರ ಮನೆಗಳಿಗೆ ಪಡಿತರವನ್ನು ತೆಗೆದುಕೊಂಡು ಹೋಗುವಂತೆ ವಿತರಕರನ್ನು ಕೇಳುವ ಮೂಲಕ ಸರ್ಕಾರವು ನಿಯೋಗದ ಮಿತಿಯನ್ನು ಉಲ್ಲಂಘಿಸಿದೆ. ನ್ಯಾಯಬೆಲೆ ಅಂಗಡಿಯ ವಿತರಕರು ಫಲಾನುಭವಿಗಳಿಗೆ ಪಡಿತರವನ್ನು ಅವರ ಮನೆ ಬಾಗಿಲಿಗೆ ವಿತರಿಸಲು ಯಾವುದೇ ಅಧಿಕಾರವಿಲ್ಲದ ಕಾರಣ ಜಾರಿಯಾಗದಂತೆ ತಡೆ ನೀಡಲಾಗಿದೆ.ಇದನ್ನೂ ಓದಿ: ಜಮ್ಮು-ಕಾಶ್ಮೀರ: 8 ಗಂಟೆ ಅಂತರದಲ್ಲಿ 2 ಬಸ್‌ಗಳಲ್ಲಿ ಸ್ಫೋಟ
Advertisement
Advertisement
ಆಹಾರ ಧಾನ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆಯು ಕಷ್ಟ. ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ಮನೆ ಬಾಗಿಲಿಗೆ ತಲುಪಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರನ್ನು ತಿದ್ದುಪಡಿ ಮಾಡಿದರೆ ಅಥವಾ ಅಂತಹ ಯಾವುದೇ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿದರೆ ಮಾತ್ರ ಈ ರೀತಿಯ ಯೋಜನೆಯನ್ನು ಜಾರಿ ಮಾಡಬಹುದು. ರಾಜ್ಯ ಸರ್ಕಾರವು ‘ದುವಾರ್ ಪಡಿತರ ಯೋಜನೆ’ ಮಾಡುವಲ್ಲಿ ಸಕ್ರಿಯಗೊಳಿಸುವ ಕಾಯ್ದೆಯ ಮೂಲಕ ನಿಯೋಗದ ಮಿತಿಯನ್ನು ಮೀರಿದೆ ಎಂದು ಕೋರ್ಟ್ ಹೇಳಿದೆ. ಇದನ್ನೂ ಓದಿ: PFI ಬ್ಯಾನ್: ಹಳೇ ಕೇಸ್, ಹೊಸ ಆಟ – ಇದು ಬಿಜೆಪಿ ಗೇಮ್!
Advertisement
ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭ ಚುನಾವಣಾ ಭರವಸೆಯಾಗಿ ದುವಾರ್ ಪಡಿತರ ಯೋಜನೆಯನ್ನು ಘೋಷಿಸಿದ್ದರು. 2021ರ ಸೆಪ್ಟೆಂಬರ್ 13 ರಂದು, ರಾಜ್ಯ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿತು ಮತ್ತು ನವೆಂಬರ್‌ನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿದ್ದರು. ಹತ್ತು ಕೋಟಿ ಜನರು ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಾರೆ. ಇದನ್ನು ಯಶಸ್ವಿಗೊಳಿಸುವಂತೆ ನಾನು ಎಲ್ಲಾ ಪಡಿತರ ವಿತರಕರನ್ನು ಕೋರುತ್ತೇನೆ ಎಂದು ಮಮತಾ ಹೇಳಿದ್ದರು.