LatestMain PostNational

RSS ಕೆಟ್ಟ ಸಂಘಟನೆ ಅಲ್ಲ: ಮೃದು ಧೋರಣೆ ತೋರಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕೆಟ್ಟ ಸಂಘಟನೆ ಎಂದು ನಾನು ಭಾವಿಸುವುದಿಲ್ಲವೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೃದು ಧೋರಣೆ ತೋರಿದ್ದಾರೆ.

ಸಾಂದರ್ಭಿಕ ಚಿತ್ರ

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಕೆಟ್ಟ ಸಂಘಟನೆ ಎಂದು ನಾನು ಭಾವಿಸುವುದಿಲ್ಲ. ಈಗ ಸಂಘಟನೆಯಲ್ಲಿರುವವರು ಬಿಜೆಪಿಯವರಂತೆ ಯೋಚಿಸದ ಕೆಲವರು ಇದ್ದಾರೆ. ಒಂದಲ್ಲ ಒಂದು ದಿನ ಅವರ ಈ ತಾಳ್ಮೆ ಕಳೆದುಕೊಳ್ಳುವುದು ಖಂಡಿತ. ಆರ್‌ಎಸ್‌ಎಸ್‌ನಲ್ಲಿರುವ ಎಲ್ಲರೂ ಕೆಟ್ಟವರಲ್ಲ. ಬಿಜೆಪಿಯನ್ನು ವಿರೋಧಿಸುವ ಕೆಲವರು, ಒಳ್ಳೆಯವರೂ ಆಗಿದ್ದಾರೆ. ಅವರು ಶೀಘ್ರದಲ್ಲೇ ಹೊರಬರುತ್ತಾರೆ. ಆರ್‌ಎಸ್‌ಎಸ್‌ನವರು ಕೂಡ ಶೀಘ್ರದಲ್ಲೇ ಬಿಜೆಪಿಯನ್ನು ವಿರೋಧಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಬಟ್ಟೆ ಮಳಿಗೆಯಲ್ಲಿ ಭೀಕರ ಗುಂಡಿನ ದಾಳಿ – ಬಿಜೆಪಿ ಮುಖಂಡನ ಬರ್ಬರ ಹತ್ಯೆ

ತೃಣಮೂಲ ಕಾಂಗ್ರೆಸ್‍ನ ಹೆಸರು ಕೆಡಿಸುವ ಪ್ರಯತ್ನವನ್ನು ಯಾರೂ ಮಾಡಬಾರದು, ಹಾಗೇನದರೂ ಮಾಡಿದರೆ, ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ನಾನು ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಬಂದೆ. ಆದರೆ, ಈಗ ನನಗೆ ಅನಿಸುತ್ತಿದೆ ನಾನು ಬಹಳ ಹಿಂದೆಯೇ ರಾಜಕೀಯವನ್ನು ತೊರೆಯಬೇಕಿತ್ತು. ರಾಜಕೀಯ ಇಷ್ಟು ಕೊಳಕು ಎನ್ನುವ ಸೂಚನೆ ಮೊದಲೇ ಏನಾದರೂ ಸಿಕ್ಕಿದ್ದರೆ ಖಂಡಿತಾ ರಾಜಕೀಯದಿಂದ ಹೊರಬರುತ್ತಿದ್ದೆ. ನಾನು ರಾಜಕೀಯದಲ್ಲಿರುವುದರಿಂದಾಗಿ ನನ್ನ ಕುಟುಂಬದವರ ಮೇಲೆ ಬಹಿರಂಗವಾಗಿಯೇ ಹಲವು ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಕೇಂದ್ರದ ತನಿಖಾ ತಂಡಗಳು ಸೇಡಿನ ರಾಜಕಾರಣದ ರೂಪವಾಗಿ ಸಮನ್ಸ್ ನೀಡುತ್ತಿವೆ. ರಾಜಕೀಯ ಇಷ್ಟೊಂದು ಕೊಳಕು ಆಗುತ್ತೆ ಅಂತ ಗೊತ್ತಿದ್ದಿದ್ದರೆ ನಾನೆಂದಿಗೂ ರಾಜಕೀಯಕ್ಕೆ ಬರುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮುಸ್ಲಿಂ ವ್ಯಕ್ತಿ ಆಹಾರ ತರೋದು ಬೇಡ- ಸ್ವಿಗ್ಗಿ ಗ್ರಾಹಕನ ಮೆಸೇಜ್ ವೈರಲ್

ದನ ಮತ್ತು ಕಲ್ಲಿದ್ದಲು ಕಳ್ಳಸಾಗಣೆ ಸಮಸ್ಯೆಗಳು ಕೇಂದ್ರ ಗೃಹ ಸಚಿವಾಲಯ ಮತ್ತು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಈ ಬಗ್ಗೆ ರಾಜ್ಯಗಳ ಮೇಲೆ ಕೇಂದ್ರ ಬಿಜೆಪಿಯವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ತಂಡ (ED) ಮಮತಾ ಬ್ಯಾನರ್ಜಿಯ ಸೋದರಳಿಯ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿಗೆ ಸಮನ್ಸ್ ನೀಡಿತ್ತು.

Live Tv

Leave a Reply

Your email address will not be published.

Back to top button