CrimeLatestMain PostNational

ಮುಸ್ಲಿಂ ವ್ಯಕ್ತಿ ಆಹಾರ ತರೋದು ಬೇಡ- ಸ್ವಿಗ್ಗಿ ಗ್ರಾಹಕನ ಮೆಸೇಜ್ ವೈರಲ್

ಹೈದಾರಾಬಾದ್: ವ್ಯಕ್ತಿಯೊಬ್ಬ ಸ್ವಿಗ್ಗಿಯಲ್ಲಿ ಆಹಾರ ಆರ್ಡರ್ ಮಾಡಿದಲ್ಲದೆ, ತನಗೆ ಮುಸ್ಲಿಂ ವ್ಯಕ್ತಿ ಆಹಾರ ತರುವುದು ಬೇಡ ಎಂದು ಹೇಳಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಸ್ವಿಗ್ಗಿ ಆರ್ಡರ್ ನ ಸ್ಕ್ರೀನ್‍ಶಾಟ್ ಅನ್ನು ಕಾರ್ಮಿಕರ ಸಂಘಟನೆಯ ಮುಖ್ಯಸ್ಥ ಶೇಕ್ ಸಲಾವುದ್ದೀನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ನೀವು ನಿಲುವು ತೆಗೆದುಕೊಳ್ಳಿ ಎಂದು ಸ್ವಿಗ್ಗಿಗೆ ಒತ್ತಾಯಿಸಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಂದು ಎಲ್ಲರಿಗೂ ಆಹಾರವನ್ನು ತಲುಪಿಸಲು ನಾವು ಇಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ. ಸದ್ಯ ಗ್ರಾಹಕನ ಮೆಸೇಜ್‌ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಟ್ವಿಟ್‍ನಲ್ಲೇನಿದೆ..?: ಡಿಯರ್ ಸ್ವಿಗ್ಗಿ, ದಯವಿಟ್ಟು ಇಂತಹ ಮತಾಂಧ ವಿನಂತಿಯ ವಿರುದ್ಧ ನಿಲುವು ತೆಗೆದುಕೊಳ್ಳಿ. ನಾವು (ವಿತರಣಾ ಕೆಲಸಗಾರರು) ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಲ್ಲರಿಗೂ ಆಹಾರವನ್ನು ತಲುಪಿಸಲು ಇಲ್ಲಿದ್ದೇವೆ. ಮಜಬ್ ನಹೀ ಸಿಖಾತಾ ಆಪಾಸ್ ಮೇ ಬೈರ್ ರಖ್ನಾ ಎಂದು ಸಲಾವುದ್ದೀನ್ ಎಂದು ತಿಳಿಸಿದ್ದಾರೆ. ಈ ವಿವಾದಕ್ಕೆ ಸ್ವಿಗ್ಗಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: 15 ನಿಮಿಷದಲ್ಲಿ ಸೈಕಲಿನಲ್ಲಿ ಟೀ ತಂದುಕೊಟ್ಟ ಡೆಲಿವರಿ ಬಾಯ್‍ಗೆ ಐಟಿ ಉದ್ಯೋಗಿಯಿಂದ ಬೈಕ್ ಗಿಫ್ಟ್..!

ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಈ ಟ್ವೀಟ್‌ಗೆ ಆಕ್ರೋಶ ಹೊರಹಾಕಿದ್ದು, ಕಾರ್ಮಿಕರು ಧರ್ಮದ ಹೆಸರಿನಲ್ಲಿ ಇಂತಹ ಕಟುವಾದ ಮತಾಂಧತೆಯನ್ನು ಎದುರಿಸುತ್ತಿರುವುದನ್ನು ಪ್ಲಾಟ್‍ಫಾರ್ಮ್ ಕಂಪನಿಗಳು ನೋಡಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಕಾರ್ಮಿಕರ ಹಕ್ಕುಗಳನ್ನು ಕಾಪಾಡಲು ಕಂಪನಿಗಳು ಯಾವ ಕ್ರಮ ತೆಗೆದುಕೊಳ್ಳುತ್ತವೆ ಎಂದು  ಸ್ವಿಗಿಗೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.

Live Tv

Leave a Reply

Your email address will not be published.

Back to top button