ಕಾರವಾರ: ಮಹಾರಾಷ್ಟ್ರ ರಾಜ್ಯದ ಕಡಲ ತೀರದಲ್ಲಿ ಮೀನುಗಾರಿಕಾ ದೋಣಿಯೊಂದು ಪತ್ತೆಯಾಗಿದೆ.
ಕಡಲ ತೀರದಲ್ಲಿ ಮುಳುಗಿದ್ದ ದೋಣಿಯ ಬಿಡಿ ಭಾಗವು ಮಹಾರಾಷ್ಟ್ರದ ರತ್ನಗಿರಿ ಬಳಿ ಪತ್ತೆಯಾಗಿದ್ದು, ನಾಪತ್ತೆಯಾದ ಮಲ್ಪೆ ಮೂಲದ ಬೋಟಿನ ಅವಶೇಷ ಎನ್ನುವ ಶಂಕೆ ವ್ಯಕ್ತವಾಗಿದೆ.
ರತ್ನಗಿರಿ ಬಳಿ ಮೀನುಗಾರಿಕೆಗೆ ತೆರಳಿದ್ದ ಅಂಕೋಲಾ ತಾಲೂಕಿನ ಬೇಲೆಕೇರಿ ಮೂಲದ ಮೀನುಗಾರರ ಕಣ್ಣಿಗೆ ಈ ಅವಶೇಷಗಳು ಕಾಣಿಸಿದೆ. ಹೀಗಾಗಿ ಅವರು ಈ ಅವಶೇಷ ಮಲ್ಪೆ ಮೂಲದ ಬೋಟಿನದ್ದಾಗಿರಬಹುದೆಂದು ಶಂಕಿಸಿದ್ದಾರೆ. ಅಲ್ಲದೆ ಈ ಬಗ್ಗೆ ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಏಳು ಮೀನುಗಾರರ ನಾಪತ್ತೆ- 1 ಹಡಗಿನ ಮೆಸೇಜ್ ಬಗ್ಗೆ ತನಿಖೆಗಿಳಿದ ಪೊಲೀಸರು
ಡಿಸೆಂಬರ್ 15 ರಂದು ಮಲ್ಪೆಯಿಂದ ಮಹರಾಷ್ಟ್ರದ ರತ್ನಗಿರಿಗೆ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಎನ್ನುವ ಬೋಟ್ ಸಮೇತ ಅದರಲ್ಲಿದ್ದ ರಾಜ್ಯದ 7 ಮೀನುಗಾರರು ನಾಪತ್ತೆಯಾಗಿದ್ದರು. ಈವರೆಗೂ ಮೀನುಗಾರರ ಅಥವಾ ಬೋಟಿನ ಕುರಿತು ಯಾವುದೇ ಮಾಹಿತಿ ದೊರೆತಿರಲಿಲ್ಲ. ಇದನ್ನೂ ಓದಿ: ಮೀನುಗಾರರ ನಾಪತ್ತೆ ಪ್ರಕರಣ – ಪ್ರಧಾನಿಗೆ ಪೇಜಾವರ ಶ್ರೀ ಪತ್ರ, ಇತ್ತ 3 ರಾಜ್ಯಕ್ಕೆ 6 ಪೊಲೀಸ್ ಟೀಂ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv