ಬಾಗಲಕೋಟೆ: ನಾನು ಈ ಹಿಂದೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ ಆದರೆ ಇದೀಗ ಸ್ಥಳೀಯ ಸಂಸ್ಥೆ ಸದಸ್ಯರ ಹಕ್ಕಿಗಾಗಿ ವಿಜಯಪುರ ಬಾಗಲಕೋಟೆ ದ್ವಿಸದಸ್ಯ ಸ್ಥಾನದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನನಗೆ ನಾಮಪತ್ರ ವಾಪಸ್ ಪಡೆಯುವಂತೆ ಸಿದ್ದರಾಮಯ್ಯ, ಡಿಕೆಶಿ, ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ ಒತ್ತಡ ಹಾಕಿದ್ದಾರೆ ಎಂದು ಮಲ್ಲಿಕಾರ್ಜುನ ಲೋಣಿ ಆರೋಪಿಸಿದ್ದಾರೆ.
ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಾಗ ಸಿದ್ದರಾಮಯ್ಯ, ಡಿಕೆಶಿ, ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ ನಾಮಪತ್ರ ವಾಪಸ್ ಪಡೆಯುವಂತೆ ಒತ್ತಡ ಹಾಕಿದರು. ಬಸವರಾಜ ಬೊಮ್ಮಾಯಿ ನಾಮಪತ್ರ ವಾಪಸ್ ಪಡೆದರೆ ಸಂಜೆಯೊಳಗೆ ನಿಗಮ ಮಂಡಳಿ ಅಧ್ಯಕ್ಷನಾಗಿ ನೇಮಕ ಮಾಡುವೆ ಎಂದರು. ಆದರೆ ಸದಸ್ಯರಿಗೆ ಮಾತು ಕೊಟ್ಟು ಸ್ಪರ್ಧಿಸಿದ್ದೇನೆ ಹಾಗಾಗಿ ಯಾವುದೇ ಒತ್ತಡ ಮಣಿಯದೆ ಕಣದಲ್ಲಿ ಉಳಿದಿರುವೆ. ಜೊತೆಗೆ ನಾಮಪತ್ರ ವಾಪಸ್ ಪಡೆಯುವಂತೆ ಬೆದರಿಕೆ ಕರೆಗಳು ಬಂದಿವೆ. ಗ್ರಾಮ ಪಂಚಾಯತ್ ಸದಸ್ಯರು ತಾವೇ ಸ್ವತಃ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರ ನಾವೇ ಮಾಡಿ ತಮ್ಮ ಖರ್ಚಿಗೆ ಹಣ ಕೊಡುತ್ತೇವೆ ಎಂದು ಪ್ರೀತಿ ತೋರಿದ್ದಾರೆ ಎಂದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಬಂಡುಕೋರ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ಎಂ.ಬಿ ಪಾಟೀಲ್ ಸಹೋದರನಿಗೆ ಟಿಕೆಟ್ ಘೋಷಣೆ ಮಾಡಿ ಎಸ್.ಆರ್ ಪಾಟೀಲ್‍ಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಸಿಟ್ಟು ಹೆಚ್ಚಾಯಿತು. ಕಳೆದ ವಿಧಾನಪರಿಷತ್ ಚುನಾವಣೆ ವೇಳೆ ನಾನು ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿದ್ದೆ. ಆ ಬಳಿಕ ನಡೆದ ಉಪ ಚುನಾವಣೆಯಲ್ಲಿ ಎಂಬಿ ಪಾಟೀಲ್ ಸಹೋದರ ಸುನೀಲ್ ಗೌಡ ಪಾಟೀಲ್ ಅವರಿಗೆ ಟಿಕೆಟ್ ಕೊಟ್ಟಿದ್ದಕ್ಕೆ ನಾನು ವಿರೋಧಿಸಿದ್ದೆ. ಒಂದೇ ಮನೆತನದವರಿಗೆ ಟಿಕೆಟ್ ಕೊಟ್ಟರೆ ಉಳಿದ ಸಮಾಜದ ಮುಖಂಡರಿಗೆ ಅನ್ಯಾಯ ಆಗುತ್ತೆ ಎಂದು ನನ್ನ ರಾಜಕೀಯ ಗುರುಗಳಾದ ಸಿದ್ದರಾಮಯ್ಯರಿಗೆ ಹೇಳಿದ್ದೆ. ಮುಂದೆ ನನಗೆ ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಾಡುವಾಗ ಎಂ.ಬಿ ಪಾಟೀಲ್ ವಿರೋಧಿಸಿದರು. ಸೂಕ್ತ ಸ್ಥಾನಮಾನ ಸಿಗಲಿಲ್ಲ.ಈ ಬಾರಿ ನಾನು ಆಕಾಂಕ್ಷಿಯಾಗಿರಲಿಲ್ಲ. ಆದರೆ ಹಿರಿಯ ಮುಖಂಡ ಎಸ್.ಆರ್ ಪಾಟೀಲ್‍ರಿಗೆ ಟಿಕೆಟ್ ಕೈತಪ್ಪಿತು. ಹೀಗಾಗಿ ನಾನು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದೇನೆ. ಇದನ್ನೂ ಓದಿ: 12% ಡಿಕೆಶಿ, 10% ಸೀದಾರೂಪಯ್ಯ ಪರ್ಸಂಟೇಜ್ ರಾಜಕಾರಣದ ಪಿತಾಮಹರು ಯಾರು? – ಬಿಜೆಪಿ ಪ್ರಶ್ನೆ
ನಾಮಪತ್ರ ಸಲ್ಲಿಸುವಾಗ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಅಭಿಪ್ರಾಯ ಪಡೆದು ಅವರ ಒತ್ತಾಯದಂತೆ ಸ್ಪರ್ಧಿಸಿರುವೆ. ಆದರೆ ಅವರ ಅಭಿಮಾನದಿಂದ ಗೆಲುವಿನ ವಿಶ್ವಾಸದಲ್ಲಿದ್ದೇನೆ. ಮುಂದೆ ಎರಡು ರಾಷ್ಟ್ರೀಯ ಪಕ್ಷಗಳು ದೊಡ್ಡ ಪಾಕೇಟ್ ಆಮಿಷಗೊಳಗಾಬೇಡಿ ಎಂದು ವಿನಂತಿಸಿದ್ದೇನೆ. ಕುಟುಂಬ ರಾಜಕಾರಣದ ವಿರುದ್ಧ ಹೋರಾಟವಿದೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಎಂ.ಬಿ ಪಾಟೀಲ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಹಿಂದೂಗಳಿಲ್ಲದೆ ಭಾರತವಿಲ್ಲ, ಭಾರತವಿಲ್ಲದೆ ಹಿಂದೂಗಳಿಲ್ಲ: ಮೋಹನ್ ಭಾಗವತ್