ಕಪಿಲ್ ಸಿಬಲ್ ಉತ್ತಮ ವಕೀಲರಾಗಿರಬಹುದು, ಕಾಂಗ್ರೆಸ್ ಪಕ್ಷದ ಉತ್ತಮ ನಾಯಕರಲ್ಲ: ಮಲ್ಲಿಕಾರ್ಜುನ್ ಖರ್ಗೆ

Public TV
2 Min Read
Mallikarjun Kharge

ನವದೆಹಲಿ: ಕಪಿಲ್ ಸಿಬಲ್ (Kapil Sibal)  ಉತ್ತಮ ವಕೀಲರಾಗಿರಬಹುದು, ಕಾಂಗ್ರೆಸ್ ಪಕ್ಷದ ಉತ್ತಮ ನಾಯಕರಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಅವರು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ವಿರುದ್ಧವಾಗಿ ಕಿಡಿಕಾರಿದ್ದಾರೆ

ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ಅವರು, ಕಪಿಲ್ ಸಿಬಲ್ ಉತ್ತಮ ವಕೀಲರಾಗಿರಬಹುದು ಆದರೆ ಅವರು ಕಾಂಗ್ರೆಸ್ ಪಕ್ಷದ ಉತ್ತಮ ನಾಯಕರಲ್ಲ. ಕಾಂಗ್ರೆಸ್ ಪರ ಕೆಲಸ ಮಾಡಲು ಯಾವ ಗ್ರಾಮಕ್ಕೂ ಹೋಗಿಲ್ಲ. ಉದ್ದೇಶಪೂರ್ವಕವಾಗಿ ಪಕ್ಷವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಸೋನಿಯಾ ಗಾಂಧಿ ಅಥವಾ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್‍ಗೆ ಸಹಾಯ ಮಾಡಿದರೆ ನಿಮಗೆ ನೀವೇ ಸಹಾಯ ಮಾಡಿದ ಹಾಗೇ: ಝೆಲೆನ್ಸ್ಕಿ

3-4 ತಿಂಗಳು ಕಾಯಬಹುದು, ಚುನಾವಣೆಗಳು ಬರುತ್ತದೆ. ಚುನಾವಣೆಯಲ್ಲಿ ಭಾಗವಹಿಸಬೇಕು, ನಂತರ ಅವರು ತಮ್ಮ ಇಷ್ಟದ ವ್ಯಕ್ತಿಯನ್ನು ತರಬಹುದು ಎಂಬುದು ನನ್ನ ಅಭಿಪ್ರಾಯ. ಆದರೆ ಅವರು ಈಗ ಗಾಂಧಿ ಕುಟುಂಬದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ನಾನು ಅವರಿಗೆ ಹೇಳುತ್ತೇನೆ. ನಾವು ಒಟ್ಟಾಗಿ ಪಕ್ಷವನ್ನು ಬಲಪಡಿಸಬೇಕು ಮತ್ತು ಅಂತಹ ಹೇಳಿಕೆಗಳನ್ನು ನೀಡುವ ಮೂಲಕ ಅದನ್ನು ದುರ್ಬಲಗೊಳಿಸಬಾರದು ಎಂದಿದ್ದಾರೆ.

kapil sibal

ಕಪಿಲ್ ಸಿಬಲ್ ಹೇಳಿದ್ದೇನು?: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿರುವುದನ್ನು ಕಂಡು ಗಾಂಧಿಗಳು ನಾಯಕತ್ವದ ಸ್ಥಾನಗಳಿಂದ ದೂರ ಸರಿಯಲು ಮತ್ತು ಇತರರಿಗೆ ಅವಕಾಶ ನೀಡುವ ಸಮಯವಾಗಿದೆ. ಗಾಂಧಿಗಳು ಸ್ವಯಂಪ್ರೇರಣೆಯಿಂದ ದೂರ ಸರಿಯಬೇಕು ಏಕೆಂದರೆ ನಾಮನಿರ್ದೇಶನಗೊಂಡ ಸಂಸ್ಥೆಯು ಅವರು ಅಧಿಕಾರದ ಹಿಡಿತವನ್ನು ಮುಂದುವರಿಸಬಾರದು ಎಂದು ಅವರಿಗೆ ಎಂದಿಗೂ ಹೇಳುವುದಿಲ್ಲ. ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಲ್ಲ, ಆದರೆ ಅವರು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಈಗಾಗಲೇ ವಾಸ್ತವಿಕ ಅಧ್ಯಕ್ಷರಾಗಿದ್ದಾರೆ. ಹಾಗಿರುವಾಗ ಅವರು ಅಧಿಕಾರದ ಹಿಡಿತವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಏಕೆ ಕೇಳುತ್ತಿದ್ದಾರೆ? ಎಂದು ಕಪಿಲ್ ಸಿಬಲ್ ಪ್ರಶ್ನಿಸಿದ್ದರು.

kapil sibal pti 1598256004

ನಾಯಕತ್ವವು ಕೋಗಿಲೆ ನಾಡಿನಲ್ಲಿದೆ. ನನಗೆ ಸಬ್ ಕಿ ಕಾಂಗ್ರೆಸ್‍ಬೇಕು. ಆದರೆ ಕೆಲವರಿಗೆ ಕುಟುಂಬದ ಕಾಂಗ್ರೆಸ್ ಬೇಕು. ನನ್ನ ಕೊನೆಯ ಉಸಿರು ಇರುವವರೆಗೂ ‘ಸಬ್ ಕಿ ಕಾಂಗ್ರೆಸ್’ ಗಾಗಿ ಹೋರಾಡುತ್ತೇನೆ. ಈ ‘ಸಬ್ ಕಿ ಕಾಂಗ್ರೆಸ್’ ಎಂದರೆ ಭಾರತದಲ್ಲಿ ಬಿಜೆಪಿ ಬೇಡದ ಎಲ್ಲ ಜನರನ್ನು ಒಟ್ಟುಗೂಡಿಸುವುದಾಗಿ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *