ಕಲಬುರಗಿ: ಹೈದರಾಬಾದ್ ಕರ್ನಾಟಕ ಹಿಂದುಳಿಯುವುದಕ್ಕೆ ಅಧಿಕಾರಿಗಳೇ ಕಾರಣ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಖರ್ಗೆ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಸಭೆಯಲ್ಲಿ ಬಹುತೇಕ ಅಧಿಕಾರಿಗಳು ಪೂರ್ವ ತಯಾರಿಯಿಲ್ಲದೇ ಭಾಗವಹಿಸಿದ್ದರು. ಇದೇ ವೇಳೆ ಸಭೆಯಲ್ಲಿ ನೀಡಿರುವ ದಾಖಲಾತಿಗಳಲ್ಲಿ ಕೆಲಸ ಪ್ರಾರಂಭವಾಗಿಲ್ಲ ಎಂದು ಉಲ್ಲೇಖಿಸಿದ ಬಗ್ಗೆ ಪ್ರಶ್ನಿಸಿದರು. ಈ ವೇಳೆ ಅಧಿಕಾರಿಗಳು ಕೆಲಸ ಪ್ರಾರಂಭವಾಗಿದೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.
Advertisement
Advertisement
ಇದರಿಂದ ಸಿಟ್ಟಿಗೆದ್ದ ಅವರು, ದಾಖಲಾತಿಗಳಲ್ಲಿ ಕೆಲಸ ಪ್ರಾರಂಭ ಆಗಿಲ್ಲ ಅಂತಾ ಉಲ್ಲೇಖಿಸಿದ್ದೀರಿ. ಈಗ ಪ್ರಶ್ನಿಸಿದರೆ ಪ್ರಾರಂಭ ಆಗಿದೆ ಅಂತಾ ಹೇಳೋದು ನೋಡಿದರೆ, ಮೀಟಿಂಗ್ ಇರುವುದರಿಂದ ಕೆಲಸ ಪ್ರಾರಂಭವಾಗಿದೆಯಾ ಎನ್ನುವ ಅನುಮಾನ ಮೂಡುತ್ತಿದೆ ಎಂದು ಪ್ರಶ್ನಿಸಿದರು.
Advertisement
ಅಲ್ಲದೆ ಆಳಂದದ ಒಂದೇ ಬಡಾವಣೆಗೆ ಬೀದಿ ದೀಪ ಅಳವಡಿಸೋದಕ್ಕೆ 25 ಲಕ್ಷ ರೂಪಾಯಿ ಇಟ್ಟಿರೋದನ್ನ ನೋಡಿ ಖರ್ಗೆ ಆಶ್ಚರ್ಯಪಟ್ಟರು. ಮೀಟಿಂಗ್ ಬರುವುದಕ್ಕೂ ಮುಂಚೆ, ಸರಿಯಾಗಿ ರೆಡಿಯಾಗಿ ಬನ್ನಿ ಅಂತಾ ಅಧಿಕಾರಿಗಳಿಗೆ ಖರ್ಗೆ ಕ್ಲಾಸ್ ತೆಗೆದುಕೊಂಡರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv