ಬಾಲಿವುಡ್‌ನ ಹಾಟ್ ಬ್ಯೂಟಿ ಮಲ್ಲಿಕಾ ಶೆರಾವತ್ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಆಗಿದ್ದಾರೆ. `RK/RKAY’ ಚಿತ್ರದ ಮೂಲಕ ಬಿಟೌನ್‌ನಲ್ಲಿ ಮಲ್ಲಿಕಾ ಸದ್ದು ಮಾಡ್ತಿದ್ದಾರೆ. ಈ ವೇಳೆ ತಮ್ಮ `ಮರ್ಡರ್’ ಚಿತ್ರವನ್ನು ದೀಪಿಕಾ ಪಡುಕೋಣೆ ನಟನೆಯ `ಗೆಹರಾಯಿಯಾ’ ಚಿತ್ರಕ್ಕೆ ಹೋಲಿಸಿ ಮಾತನಾಡಿದ್ದಾರೆ.
ಬೋಲ್ಡ್ ಪಾತ್ರಗಳ ಮೂಲಕ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ ನಟಿ ಮಲೈಕಾ ಶೆರಾವತ್ ಕೆಲ ಸಮಯ ಚಿತ್ರರಂಗದಿಂದ ದೂರ ಸರಿದಿದ್ದರು. ಈಗ ಮತ್ತೆ ಬಿಟೌನ್‌ನಲ್ಲಿ ನಟಿ ಸದ್ದು ಮಾಡುತ್ತಿದ್ದಾರೆ. ತಮ್ಮ ಹೊಸ ಚಿತ್ರದ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಈ ವೇಳೆ ತಾವು ನಟಿಸಿರುವ ಮರ್ಡರ್ ಚಿತ್ರವನ್ನು ಈಗಿನ ದೀಪಿಕಾ ನಟನೆಯ `ಗೆಹರಾಯಿಯಾ’ ಚಿತ್ರಕ್ಕೆ ಕಂಪೇರ್ ಮಾಡಿ, ಮಾತನಾಡಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಮಾಡಿದ್ದನ್ನು 15 ವರ್ಷಗಳ ಹಿಂದೆಯೇ ನಾನು ಮಾಡಿದ್ದೆ ಎಂದು ಬೋಲ್ಡ್ ಉತ್ತರ ಕೊಟ್ಟಿದ್ದಾರೆ.
ನಟಿ ಮಲೈಕಾ ಹಾಟ್ ಮತ್ತು ಬೋಲ್ಡ್ ಸೀನ್‌ಗಳ ಮೂಲಕ ಗುರುತಿಸಿಕೊಂಡಿರುವ ನಟಿ, ಆಗ ಬೋಲ್ಡ್ ಸೀನ್‌ಗಳಲ್ಲಿ ಕಾಣಿಸಿಕೊಂಡ್ರೆ ಸಂಕೋಚ ಸ್ವಭಾವದಿಂದ ನೋಡುತ್ತಿದ್ದರು. ಜತೆಗೆ ನಮ್ಮ ನಟನೆಗೆ ಬೆಲೆ ಕೊಡುತ್ತಿರಲಿಲ್ಲ. ನಾನು `ಮರ್ಡರ್’ ಚಿತ್ರದಲ್ಲಿ ಕಿಸ್ ಮತ್ತು ಬಿಕಿನಿ ದೃಶ್ಯದಲ್ಲಿ ಕಾಣಿಸಿಕೊಂಡಾಗ ಜನರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಜನ ಬೋಲ್ಡ್ ಸಿನಿಮಾಗಳತ್ತ ವಾಲುತ್ತಿದ್ದಾರೆ. `ಗೆಹರಾಯಿಯಾ’ ಚಿತ್ರದಲ್ಲಿ ದೀಪಿಕಾ ಕಾಣಿಸಿಕೊಂಡಂತೆ ನಾನು 15 ವರ್ಷಗಳ ಹಿಂದೆಯೇ ಕಾಣಿಸಿಕೊಂಡಿದ್ದೆ, ಆಗ ನನ್ನ ನಟನೆಯ ಬಗ್ಗೆ ಯಾರು ಮಾತನಾಡಲಿಲ್ಲ ಎಂದು ಮಲೈಕಾ ಮನಬಿಚ್ಚಿ ಮಾತನಾಡಿದ್ದಾರೆ.
ಮಲೈಕಾ ಅವರು ಸದ್ಯ ತಮ್ಮ ಹೊಸ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಜುಲೈ 22ರಂದು ಮಲೈಕಾ ನಟನೆಯ RK/RKAY ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಮಲೈಕಾ ಜತೆ ಕುಬ್ರಾ ಸೇಠ್ ಕೂಡ ಕಾಣಿಸಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]