ಮಾಲೆ: ಮೇ 10 ರ ನಂತರ ಭಾರತದ ಯಾವೊಬ್ಬ ಮಿಲಿಟರಿ ಸದಸ್ಯ ದೇಶದಲ್ಲಿ ಇರಬಾರದು. ಅಷ್ಟೇ ಅಲ್ಲದೇ ನಾಗರಿಕ ಉಡುಪಿನಲ್ಲಿರುವ ಭಾರತೀಯ (India) ಅಧಿಕಾರಿಗಳೂ ನಮ್ಮ ದೇಶದಲ್ಲಿ ಇರುವಂತಿಲ್ಲ ಎಂದು ಮಾಲ್ಡೀವ್ಸ್ (Maldives) ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ಆದೇಶ ಪ್ರಕಟಿಸಿದ್ದಾರೆ.
ಚೀನಾ (China) ಸಹಕಾರದಿಂದಲೇ ಅಧಿಕಾರಕ್ಕೆ ಏರಿದ ಮುಯಿಝು ಈಗ ಚೀನಾಗೆ ಮತ್ತಷ್ಟು ಹತ್ತಿರವಾಗುತ್ತಿದ್ದು ಮತ್ತೆ ಭಾರತದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಐಎಎಸ್ ಅಧಿಕಾರಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಪಾಕ್ ಪ್ರೇಮಿ ಮುನಾವರ್!
Advertisement
Advertisement
ಚುನಾವಣಾ ಸಮಯದಲ್ಲಿ ಮಾಲ್ಡೀವ್ಸ್‌ನಲ್ಲಿ ಭಾರತೀಯ ಪಡೆಗಳನ್ನು ತೆಗೆದುಹಾಕುವುದು ಮುಯಿಝು ಪಕ್ಷದ ಪ್ರಮುಖ ಅಭಿಯಾನವಾಗಿತ್ತು. ಡಾರ್ನಿಯರ್ 228 ಕಡಲ ಗಸ್ತು ವಿಮಾನ ಮತ್ತು ಎರಡು HAL ಧ್ರುವ್ ಹೆಲಿಕಾಪ್ಟರ್‌ಗಳೊಂದಿಗೆ ಸುಮಾರು 88 ಭಾರತೀಯ ಸೈನಿಕರು ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿದ್ದರು. ಅಧಿಕಾರ ವಹಿಸಿಕೊಂಡಿದ್ದ ಎರಡನೇ ದಿನದಂದೇ ಮುಯಿಝು ತನ್ನ ಸೇನಾ ಸಿಬ್ಬಂದಿಯನ್ನು ಮಾಲ್ಡೀವ್ಸ್‌ನಿಂದ ಹಿಂತೆಗೆದುಕೊಳ್ಳುವಂತೆ ಭಾರತ ಸರ್ಕಾರಕ್ಕೆ ಸೂಚಿಸಿದ್ದರು.
Advertisement
ಮಾಲ್ಡೀವ್ಸ್ ನಿರ್ಧಾರಕ್ಕೆ ಭಾರತ ತನ್ನ ಸೇನಾ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿಗೆ ನೀಡಿತ್ತು. ಆದರೆ ಸೇನೆಯಲ್ಲಿನ ನಾಗರಿಕ ವಿಭಾಗದ ಅಧಿಕಾರಿಗಳನ್ನು 1 ವಾರದ ಹಿಂದೆ ಅಲ್ಲಿಗೆ ಕಳುಹಿಸಿತ್ತು.
Advertisement
ಈ ವಿಚಾರವನ್ನೇ ಭಾಷಣದಲ್ಲಿ ಪ್ರಸ್ತಾಪ ಮಾಡಿದ ಮುಯಿಝು, ನಮ್ಮ ಸೂಚನೆ ಹೊರತಾಗಿಯೂ ಭಾರತದ ಸೈನಿಕರು ಮಾಲ್ಡೀವ್ಸ್ ತೊರೆಯಲು ಸಿದ್ಧರಿಲ್ಲ. ತಮ್ಮ ಸೇನಾ ಸಮವಸ್ತ್ರ ಬಿಚ್ಚಿಟ್ಟು ನಾಗರಿಕ ಉಡುಪು ಹಾಕಿಕೊಂಡು ಮಾರು ವೇಷದಲ್ಲಿ ಬರುತ್ತಿದ್ದಾರೆ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಮೇ 10ರ ನಂತರ ದೇಶದಲ್ಲಿ ಭಾರತೀಯ ಸೈನಿಕರು ಇರಬಾರದು. ಅದು ಸಮವಸ್ತ್ರಧಾರಿ ಭಾರತೀಯ ಸೇನಾ ಸಿಬ್ಬಂದಿಯೇ ಇರಲಿ ಅಥವಾ ನಾಗರಿಕ ಉಡುಪಿನಲ್ಲಿನ ಭಾರತೀಯ ಸಿಬ್ಬಂದಿಯೇ ಇರಲಿ. ಯಾರೂ ಮಾಲ್ಡೀವ್ಸ್‌ನಲ್ಲಿ ಇರಕೂಡದು ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ನಿಯಮ – ಒಬ್ಬರಿಗೆ ಒಂದೇ ಕ್ಯಾನ್ ನೀರು!
ಚೀನಾದ ತಾಳಕ್ಕೆ ಮಾಲ್ಡೀವ್ಸ್ ನೃತ್ಯ:
ದ್ವೀಪ ದೇಶಕ್ಕೆ ಚೀನಾ ಉಚಿತ ಸೇನಾ ನೆರವಿನ ಘೋಷಣೆ ಮಾಡಿದೆ. ಈ ಕುರಿತು ಎರಡು ದೇಶಗಳು ಸೋಮವಾರ ಒಪ್ಪಂದಕ್ಕೆ ಸಹಿ ಹಾಕಿವೆ. ಸಹಿ ಹಾಕಿದ ಬೆನ್ನಲ್ಲೇ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಮತ್ತೆ ಭಾರತದ ವಿರುದ್ಧ ಕಿಡಿಕಾರಿದ್ದಾರೆ. ಚೀನಾದ ಸೇನಾ ನೆರವು ಯಾವ ರೀತಿ ಇರಲಿದೆ ಎಂಬುದನ್ನು ಉಭಯ ದೇಶಗಳು ಬಹಿರಂಗಪಡಿಸಿಲ್ಲ.