ಕನ್ನಡ ಚಿತ್ರರಂಗ ಕನಸಿನ ರಾಣಿಯಾಗಿ ರಾರಾಜಿಸಿದ ನಟಿ ಮಾಲಾಶ್ರೀ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಆಗಿದ್ದಾರೆ. ಈ ಬಾರಿ `ನೈಟ್ ಕರ್ಫ್ಯೂ’ ಕಥೆ ಹೇಳುವ ಮೂಲಕ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ನಟನೆಗೆ ಮರಳಿದ್ದಾರೆ.
Advertisement
ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಛಾಪೂ ಮೂಡಿಸಿದ ನಟಿ ಮಾಲಾಶ್ರೀ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಕೊರೋನಾ ವೇಳೆಯಲ್ಲಿ ಪತಿ ಕೋಟಿ ರಾಮು ಅಗಲಿದ್ದರು. ಚಿತ್ರರಂಗದಿಂದ ದೂರ ಸರಿದಿದ್ದರು ಈಗ ಬಿಗ್ ಬ್ರೇಕ್ನ ನಂತ್ರ ಮತ್ತೆ ವಾಪಾಸ್ ಆಗಿದ್ದಾರೆ.
Advertisement
Advertisement
ರವೀಂದ್ರ ವಂಶಿ ನಿರ್ದೇಶನದ `ನೈಟ್ ಕರ್ಫ್ಯೂ’ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಕೊರೋನಾ ವೇಳೆಯಲ್ಲಿ ನಡೆದ ಅಂಶಗಳನ್ನೇ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಇದೊಂದು ಆ್ಯಕ್ಷನ್ ಥ್ರಿಲರ್ ಕತೆಯಾಗಿದ್ದು, ಮೆಡಿಕಲ್ ಮಾಫಿಯಾ ಕಥೆಯಲ್ಲಿ ಮಾಲಾಶ್ರೀ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಜತೆ ಕಿರುತೆರೆ ನಟಿ ರಂಜನಿ ರಾಘವನ್ ಡಾಕ್ಟರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ:‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ನೋಡಿ ಪತ್ನಿಗೆ ‘ಚಲಿಯೇ ಹುಕುಂ’ ಎಂದ ಅಮಿತಾ ಶಾ
Advertisement
View this post on Instagram
ಇನ್ನು ಚಿತ್ರದಲ್ಲಿ ಮಾಲಾಶ್ರೀ ಜತೆ ಪ್ರಮೋದ್ ಶೆಟ್ಟಿ, ವರ್ಧನ್, ಸಾದುಕೋಕಿಲ, ರಂಗಾಯಣ ರಘು ಅಶ್ವಿನಿ ನಟಿಸಿದ್ದಾರೆ. ಸ್ವರ್ಣಗಂಗಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ನೈಟ್ ಕರ್ಫ್ಯೂ ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ.