ಮದುವೆಗೂ ಮುನ್ನ ಮಲೈಕಾ ಪ್ರೆಗ್ನೆಂಟ್: ಬೆಚ್ಚಿದ ಬಿಟೌನ್

Advertisements

ಬಾಲಿವುಡ್ ನಟಿ ಮಲೈಕಾ ಅರೋರಾ ಅಚ್ಚರಿಯ ಸುದ್ದಿಯೊಂದನ್ನು ನೀಡಿದ್ದಾರೆ. ಮದುವೆಯಾಗದೇ ಮಗು ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯ ಮೂಲಕ ಬಿಟೌನ್‍ ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ. ಇದು ನಿಜವಾಗಿದ್ದರೆ ಅರೋರಾಗೆ ಇದು ಎರಡನೇ ಮಗುವಾಗಿದೆ. ಮೊನ್ನೆ ಮೊನ್ನೆಯಷ್ಟೇ ಮಲೈಕಾ, ‘ನಾನು ಎಸ್ ಅಂದೆ’ ಎಂದು ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಅವರ ಮದುವೆಗೆ ಸಂಬಂಧಿಸಿದ್ದು ಎಂದು ಹೇಳಲಾಗಿತ್ತು.

Advertisements

ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಹಲವು ವರ್ಷಗಳಿಂದ ಡೇಟ್ ಮಾಡುತ್ತಿದ್ದಾರೆ. ಒಟ್ಟಿಗೆ ಹಲವಾರು ಪ್ರವಾಸಗಳನ್ನೂ ಮಾಡಿದ್ದಾರೆ. ಒಂದೇ ಮನೆಯಲ್ಲೇ ವಾಸವಿದ್ದಾರೆ ಎನ್ನುವ ಮಾತೂ ಇದೆ. ಇತ್ತೀಚೆಗಷ್ಟೇ ಈ ಜೋಡಿ ವಿದೇಶ ಪ್ರವಾಸದಲ್ಲಿತ್ತು. ಅಲ್ಲಿಂದಲೇ ‘ನಾನು ಎಸ್ ಅಂದೆ’ ಎನ್ನುವ ಪೋಸ್ಟ್ ಅನ್ನು ಮಲೈಕಾ ಮಾಡಿದ್ದರು. ಹಾಗಾಗಿ ಈ ಜೋಡಿ ಸದ್ಯದಲ್ಲೇ ಮದುವೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಪ್ರೆಗ್ನೆಂಟ್ ವಿಚಾರಕ್ಕೆ ಅವರು ಹಾಗೆ ಪೋಸ್ಟ್ ಮಾಡಿದರಾ ಅನ್ನುವ ಚರ್ಚೆ ನಡೆದಿದೆ. ಇದನ್ನೂ ಓದಿ: ಪ್ರತಿಷ್ಠಿತ ಆಭರಣ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾ ಔಟ್

Advertisements

ಅರ್ಜುನ್ ಕಪೂರ್ ಜೊತೆಗಿನ ಡೇಟಿಂಗ್ ಗೂ ಮುನ್ನ ಮಲೈಕಾ ಅವರು ಅರ್ಬಾಜ್ ಖಾನ್ ಜೊತೆ ವಿವಾಹ ಮಾಡಿಕೊಂಡಿದ್ದರು. ಈ ಜೋಡಿ ಈಗಾಗಲೇ ಇಪ್ಪತ್ತರ ವಯಸ್ಸಿನ ಒಂದು ಗಂಡು ಮಗ ಕೂಡ ಇದ್ದಾನೆ. ಅರ್ಬಾಜ್ ಖಾನ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡ ನಂತರ  ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಮಲೈಕಾ ಪ್ರೆಗ್ನೆಂಟ್ ಆಗಿರುವುದು ನಿಜವಾದರೆ, ಮಲೈಕಾ ಜೀವನಕ್ಕೆ ಬಂದ ಎರಡನೇ ಮಗು ಇದಾಗಲಿದೆ.

Advertisements

ಮದುವೆಯ ಸುದ್ದಿ ಕೊಟ್ಟಿದ್ದ ಮಲೈಕಾ ಮತ್ತು ಅರ್ಜುನ್, ಮದುವೆಗೂ ಮುನ್ನ ಇಂಥದ್ದೊಂದು ನಿರ್ಧಾರ ತಗೆದುಕೊಂಡಿದ್ದಾರಾ ಅಥವಾ ಇದು ಗಾಸಿಪ್ ಇರಬಹುದಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಸುದ್ದಿಯಂತೂ ಭಾರಿ ಸದ್ದು ಮಾಡುತ್ತಿರುವುದು ಸುಳ್ಳಲ್ಲ. ಈ ವಿಚಾರವಾಗಿ ಅವರೇ ಸ್ಪಷ್ಟನೆ ಕೊಡಬೇಕಿದೆ.

Live Tv

Advertisements
Exit mobile version