BollywoodCinemaLatest

ಭವಿಷ್ಯದಲ್ಲಿ ಅರ್ಜುನ್ ಕಪೂರ್‌ ಕೊನೆ ಬಾಯ್‌ ಫ್ರೆಂಡ್‌: ಮಲೈಕಾ ಅರೋರಾ

ಬಿಟೌನ್ ಅಂಗಳದ ಅಚ್ಚು ಮೆಚ್ಚಿನ ಜೋಡಿಗಳಲ್ಲಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಕೂಡ ಒಬ್ಬರು. ಸಾಕಷ್ಟು ವರ್ಷಗಳಿಂದ ಲಿಪ್ ಇನ್ ರಿಲೇಷನ್ ಶಿಪ್‌ನಲ್ಲಿರೋ ಈ ಜೋಡಿ, ಭವಿಷ್ಯದಲ್ಲಿ ಒಟ್ಟಿಗೆ ಇರುವ ಆಲೋಚನೆ ಕುರಿತು ನಟಿ ಮಲೈಕಾ ಹೇಳಿಕೊಂಡಿದ್ದಾರೆ.

ನಟಿ ಮಲೈಕಾ ಅರ್ಜುನ್ ಕಪೂರ್‌ಗಿಂತ ವಯಸ್ಸಿನಲ್ಲಿ ದೊಡ್ಡವರು, ಇವರ ಲವ್ವಿ ಡವ್ವಿ ನೋಡಿರೋ ನೆಟ್ಟಿಗರು ಅದೆಷ್ಟೋ ಬಾರಿ ಇವರಿಬ್ಬರದ್ದು ಟೈಮ್ ಪಾಸ್ ಲವ್ ಎಂದು ಹೇಳಿದ್ದು ಇದೆ. ಆದರೆ ಈಗ ಮಲೈಕಾ ತಮ್ಮ ಪ್ರೀತಿಯ ಜೀವನದ ಕುರಿತು ಮನಬಿಚ್ಚಿ ಸಂದರ್ಶನವೊಂದರಲ್ಲಿ ಮಾತಾನಾಡಿದ್ದಾರೆ.

ಪ್ರತಿಯೊಂದು ರಿಲೇಶನ್‌ಶಿಷ್‌ನಲ್ಲಿಯೂ ತನ್ನದೇ ಆದ ರೀತಿ ನೀತಿಗಳಿರುತ್ತದೆ. ನಾವು ಒಟ್ಟಿಗೆ ಭವಿಷ್ಯವನ್ನು ಕಳೆಯುವ ವಿಚಾರ ನಮಗೆಷ್ಟೇ ತಿಳಿದಿರಬೇಕು ಎಂದು ಇನಿಯನ ಜತೆ ಭವಿಷ್ಯವನ್ನು ಒಟ್ಟಿಗೆ ಕಳೆಯುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಇವರಿಬ್ಬರ ಬ್ರೇಕ್ ಅಪ್ ವಿಚಾರ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಮಲೈಕಾರ ಈ ಮಾತು ಬ್ರೇಕ್ ಅಪ್ ಕಥೆಗೂ ಅಂತ್ಯ ಹಾಡಿದೆ.

ನಾವು ಬಹಳಷ್ಟು ವಿಷಯಗಳನ್ನು ಒಟ್ಟಿಗೆ ಚರ್ಚಿಸುತ್ತೇವೆ. ನಾವು ಒಂದೇ ರೀತಿಯ ಆಲೋಚನೆಯನ್ನು ಹೊಂದಿದ್ದೇವೆ ಮತ್ತು ಒಬ್ಬರನೊಬ್ಬರು ತುಂಬಾ ಇಷ್ಟಪಡುತ್ತೇವೆ. ನಾವು ಭವಿಷ್ಯದಲ್ಲಿ ಒಟ್ಟಿಗೆ ಇರಲು ಬಯಸುತ್ತೇವೆ. ಸಂಬಂಧದಲ್ಲಿ ಯಾವಾಗೂ ನಾವು ಸೇಫ್ ಮತ್ತು ಪಾಸಿಟಿವ್ ಎಂಬ ಭಾವನೆ ಇರಬೇಕು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

 

View this post on Instagram

 

A post shared by Malaika Arora (@malaikaaroraofficial)

ಕಾರ್ ಆಕ್ಸಿಡೆಂಟ್‌ನಿಂದ ಚೇತರಿಕೊಂಡಿರುವ ಮಲೈಕಾ, ಅರ್ಜುನ್ ಕಪೂರ್ ಜತೆಗಿನ ರಿಲೇಷನ್‌ಶಿಪ್ ಬಗ್ಗೆ ಮುಕ್ತವಾಗಿ ಮಾತಾನಾಡಿದ್ದಾರೆ. ಮಲೈಕಾ ಮತ್ತು ಅರ್ಜುನ್ ಕಪೂರ್ ಜತೆಗಿನ ರಿಲೇಷನ್‌ಶಿಷ್ ದೃಢಿಕರಿಸಿದ ನಂತರ ವಯಸ್ಸಿನ ಅಂತರದ ವಿಚಾರವಾಗಿ ಇವರಿಬ್ಬರು ಟ್ರೋಲ್ ಆಗಿದ್ದರು. ಇವು ಯಾವುದರ ಕುರಿತು ತಲೆಕೆಡೆಸಿಕೊಳ್ಳದೇ ಭವಿಷ್ಯದಲ್ಲಿ ಒಟ್ಟಿಗೆ ಇರುವ ಆಲೋಚನೆ ಕುರಿತು ನಟಿ ಮಲೈಕಾ ಮನಬಿಚ್ಚಿ ಮಾತಾನಾಡಿದ್ದಾರೆ.

Leave a Reply

Your email address will not be published.

Back to top button