– ಮಂಜಿನ ನಗರಿಯಲ್ಲಿ ಮಕ್ಕಳ ದಸರಾ ಮೆರುಗು
ಮಡಿಕೇರಿ: ಇಲ್ಲಿ ನಡೆದ ಮಕ್ಕಳ ದಸರಾವು (Makkala Dasara) ವಿಶೇಷ ಕಾರ್ಯಕ್ರಮಗಳ ಮೂಲಕ ಜನರ ಗಮನ ಸೆಳೆಯಿತು. ಸಾಮಾನ್ಯವಾಗಿ ಸಂತೆ ಮಾರುಕಟ್ಟೆಯಲ್ಲಿ ನಡೆಯುವ ವ್ಯಾಪಾರ ವಹಿವಾಟಿನ ಹಾಗೆ ಇಲ್ಲಿ ಮಕ್ಕಳು ತರಕಾರಿ ಹಾಗೂ ತಿನಿಸುಗಳನ್ನ ಮಾರಾಟ ಮಾಡಿ ತಮ್ಮ ವ್ಯಾಪಾರ ಕೌಶಲ್ಯ ಪ್ರದರ್ಶಿಸಿದರು.
Advertisement
ಒಂದೆಡೆ ಭರ್ಜರಿ ವ್ಯಾಪಾರ, ಮತ್ತೊಂದೆಡೆ ದೇವಾನುದೇವತೆಗಳ ಆರ್ಭಟ. ವೇದಿಕೆಯಲ್ಲಿ ಬಗೆ ಬಗೆಯ ವೇಷ ತೊಟ್ಟು ಗಮನ ಸೆಳೆದ ಪುಟಾಣಿಗಳು. ಚಿಣ್ಣರ ಕೈಯಿಂದ ಪಾನಿಪುರಿ, ಬೇಲ್ ಪುರಿ, ಜೋಳಪುರಿ ಸೇರಿದಂತೆ ಬಗೆಬಗೆಯ ತಿನಿಸುಗಳು. ಎಲ್ಲೆಲ್ಲೂ ಮಕ್ಕಳದ್ದೆ ಸಂಭ್ರಮ. ಸಾರ್ವಜನಿಕರು ಮಕ್ಕಳ ಸಂತೆ, ಅಂಗಡಿ ಮಳಿಗೆಗಳನ್ನು ಕುತೂಹಲದಿಂದ ವೀಕ್ಷಿಸಿದರು. ಮಡಿಕೇರಿ (Madikeri) ದಸರಾ ಸಮಿತಿ ಸಹಯೋಗದಲ್ಲಿ ನಗರದ ಗಾಂಧಿ ಮೈದಾನದಲ್ಲಿ ನಡೆದ 10ನೇ ವರ್ಷದ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳಿವು. ಇದನ್ನೂ ಓದಿ: ಕೆಲಸ ಮಾಡಿಸಿಕೊಳ್ಳೋಕೆ ಅಧಿಕಾರಿಗಳಿಗೆ ದುಡ್ಡು ಕೊಡ್ತೀನಿ- ಶಾಸಕ ರಾಜೇಗೌಡ ಹೇಳಿಕೆ ವೈರಲ್
Advertisement
Advertisement
ಮಕ್ಕಳ ದಸರಾ ಅಂಗವಾಗಿ ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳ ಮಂಟಪ, ಛದ್ಮವೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಕಳೆದ ನಾಲ್ಕು ಐದು ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರದ ವೀಕ್ಷಣೆಗೆ ಕಡಿಮೆ ಸಂಖ್ಯೆಯಲ್ಲಿ ಪ್ರೇಕ್ಷಕರು ಕಂಡು ಬಂದಿದ್ದರು. ಆದರೆ ಮಕ್ಕಳ ದಸರಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಪ್ರತ್ಯಕ್ಷವಾಗಿದ್ದರು.
Advertisement
ಮಕ್ಕಳ ಸಂತೆ ಹಾಗೂ ಅಂಗಡಿ ಸ್ಪರ್ಧೆಯಲ್ಲಿ ಸುಮಾರು 100 ಕ್ಕೂ ಅಧಿಕ ಸ್ಟಾಲ್‌ಗಳನ್ನು ಹಾಕಲಾಗಿತ್ತು. ಬಗೆ ಬಗೆಯ ತರಕಾರಿಗಳು, ಸೊಪ್ಪುಗಳು, ಕಾಡಿನಲ್ಲಿ ಸಿಗುವ ಕೆಸ, ತೆರ್ಮೆ ಸೊಪ್ಪು, ವಿವಿಧ ಜಾತಿಯ ಹಣ್ಣುಗಳನ್ನು ಮಕ್ಕಳು ಭರ್ಜರಿಯಾಗಿ ವ್ಯಾಪಾರ ಮಾಡಿದರು. ಸಾಂಪ್ರದಾಯಿಕ ಉಡುಪು ತೊಟ್ಟು ಅಣ್ಣ ಇಲ್ಲಿ ಬನ್ನಿ… ಅಕ್ಕ… ಆಂಟಿ… ಅಂಕಲ್… ಇಲ್ಲಿ ಬನ್ನಿ ಹತ್ತೇ ರೂಪಾಯಿ ಎಂದು ವ್ಯಾಪಾರ ಮಾಡಿ ಗಮನ ಸೆಳೆದರು. ಮಡಿಕೇರಿಯ ಬಾಲಕಿಯರ ಬಾಲಮಂದಿರದ ವಿದ್ಯಾರ್ಥಿನಿಯರು ತಾವೇ ಸ್ವತಃ ತಯಾರಿಸಿದ್ದ ಕರಕುಶಲ ವಸ್ತುಗಳನ್ನು ಪ್ರದರ್ಶಿಸಿದರು. ಇದನ್ನೂ ಓದಿ: ಡಿಕೆಶಿ ಬೆಳಗಾವಿ ಮಾತ್ರವಲ್ಲ ರಾಜ್ಯ, ರಾಷ್ಟ್ರ ರಾಜಕಾರಣವನ್ನೂ ಮಾಡ್ತಾರೆ: ಅಶೋಕ್ ಪಟ್ಟಣ
ಮತ್ತೊಂದೆಡೆ ಮಕ್ಕಳ ಸಂತೆ ನಡೆದರೆ, ಮತ್ತೊಂದೆಡೆ ಮಕ್ಕಳ ಮಂಟಪದಲ್ಲಿ ಈ ಬಾರಿ 30ಕ್ಕೂ ಅಧಿಕ ಮಕ್ಕಳ ಮಂಟಪ ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳಂತೆ ಮಕ್ಕಳು ಕೂಡ ವಿವಿಧ ಕಥಾ ಸಾರಾಂಶಗಳನ್ನು ಒಳಗೊಂಡ ಮಂಟಪಗಳನ್ನು ರಚಿಸಿದ್ದರು. ಮಂಟಪದಲ್ಲಿ ದೇವತೆಗಳು ದುಷ್ಟರನ್ನು ಸಂಹಾರ ಮಾಡುವ ದೃಶ್ಯಗಳನ್ನು ಪ್ರದರ್ಶಿಸಿದರು. ಅಲ್ಲದೇ ಛದ್ಮವೇಷ ಸ್ಪರ್ಧೆಯಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಮಕ್ಕಳು ವಿವಿಧ ವೇಷ ತೊಟ್ಟು ಪ್ರೇಕ್ಷಕರ ಗಮನ ಸೆಳೆದರು. ದೇವತೆಗಳಾದ ಕಾಳಿ, ವಿಷ್ಣು, ಶಿವ, ಕೃಷ್ಣ, ರಾಧೆ, ಮಹಾನ್ ನಾಯಕರಾದ ಗಾಂಧೀಜಿ, ಸ್ವಾಮಿ ವಿವೇಕಾನಂದ, ಸುಭಾಷ್‌ಚಂದ್ರ ಬೋಸ್, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಉಳಿದಂತೆ ದ್ರಾಕ್ಷಿ, ಕೊಕ್ಕರೆ, ಎಳನೀರು, ಹುಲಿ, ಶ್ವಾನ, ಬಾಳೆಗೊನೆ, ತೆಂಗಿನಕಾಯಿ ಮತ್ತಿತರ ವೇಷ ತೊಟ್ಟು ಪ್ರದರ್ಶನ ನೀಡಿದರು.
Web Stories