ಮಡಿಕೇರಿ: ಪ್ರತೀದಿನ ಶಾಲೆ ಪಾಠಗಳಲ್ಲೇ ಮಗ್ನರಾಗಿರುತ್ತಿದ್ದ ಪುಟಾಣಿಗಳಿಂದು ವ್ಯಾಪಾರಿಗಳಾಗಿದ್ರು. ಗಾಂಧಿ, ನೆಹರು, ಸುಭಾಷ್ ಚಂದ್ರಬೋಸ್ ಕಿತ್ತೂರು ರಾಣಿ ಚೆನ್ನಮ್ಮ ಅಯ್ಯೋಧ್ಯೆ ರಾಮ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ರೂಪ ತಾಳಿದ್ರು. ಅಷ್ಟೇ ಏಕೆ ರೈತರ ವೇಷಭೂಷಣದಲ್ಲಿ ವ್ಯಾಪಾರ ವಹಿವಾಟು ಮಾಡಲು ಮುಂದಾಗಿದ್ರು. ಇದು ಐತಿಹಾಸಿಕ ಮಡಿಕೇರಿ ದಸರಾದ (Madikeri Dasara) ಅಂಗವಾಗಿ ನಡೆದ ಮಕ್ಕಳ ದಸರಾದ ಜಲಕ್…
ವಿವಿಧ ತರಕಾರಿಗಳ (Vegetables) ರಾಶಿಹಾಕಿ, ಬನ್ನಿ ಅಣ್ಣ, ಬನ್ನಿ ಅಕ್ಕ ತಕೊಳ್ಳಿ ತಾಜಾ ತಾಜಾ ತರಕಾರಿ ಸಾವಯವ ತರಕಾರಿ ಸರ್ ನೋ ಕೆಮಿಕಲ್ ನಮ್ಮ ಮನೆಯಲ್ಲಿ ಬೆಳೆದ ತರಕಾರಿ ಸರ್ ಎಂದು ಜನರನ್ನು ಕರೆಯುತ್ತಿರುವ ಪುಟಾಣಿಗಳು. ಬಿಸಿಬಿಸಿ ಪಾನೀಪೂರಿ ಇಟ್ಟು ತಗೊಳ್ಳಿ ಸಾರ್ ರುಚಿರುಚಿಯಾಗಿದೆ ಎನ್ನುತ್ತಿರುವ ವ್ಯಾಪಾರಿಗಳು. ಕೊಡಗಿನ ಸ್ಪೆಷಲ್ ತಂಪುಪಾನೀಯಗಳು, ಚಾಕಲೇಟ್ಗಳನ್ನು ಮಾರುತ್ತಿರುವ ಪುಟ್ಟಪುಟಾಣಿಗಳು. ಇದನ್ನೂ ಓದಿ: ಛತ್ತೀಸ್‌ಗಢ ಎನ್‌ಕೌಂಟರ್| 35 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ
ಹೌದು. ಇವೆಲ್ಲ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಎರಡನೇ ದಿನ ಮಡಿಕೇರಿಯ ಗಾಂಧಿಮೈದಾನದಲ್ಲಿ ನಡೆಯುತ್ತಿರುವ ಮಕ್ಕಳ ದಸರಾದಲ್ಲಿ ಕಣ್ಮನ ಸೆಳೆದ ದೃಶ್ಯಗಳು. ಮಕ್ಕಳ ದಸರಾದಲ್ಲಿ ಭಾಗವಹಿಸಿದ್ದ ನೂರಾರು ವಿದ್ಯಾರ್ಥಿಗಳು ಬಗೆಬಗೆಯ ಹಣ್ಣು ತರಕಾರಿ, ಸೊಪ್ಪುಗಳನ್ನು ಮಾರಿ ಖುಷಿಪಟ್ರು. ಇನ್ನು ಸ್ವಾತಂತ್ರ್ಯ ಹೋರಾಟಗಾರರು, ಸಾಧು ಸಂತರು ಅಷ್ಟೇ ಏಕೆ ಹಲವು ಅಯೋದ್ಯೆ ರಾಮನ ಗೆಟಪ್ನ ವೇಷಧರಿಸಿದ ಪುಠಾಣಿಗಳು ನೋಡುಗರ ಮನತಣಿಸಿದ್ರು. ಇದನ್ನೂ ಓದಿ: ಮಿಸ್ಟರ್ 360 ಮೇಲೆ ಆರ್‌ಸಿಬಿ ಕಣ್ಣು – ಈ ಸಲ ಕಪ್ ನಮ್ಮದಾಗುತ್ತಾ ಅಂತಿದ್ದಾರೆ ಫ್ಯಾನ್ಸ್?
ಇನ್ನು ಮಕ್ಕಳ ದಸರಾಕ್ಕೆ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ಚಾಲನೆ ನೀಡಿದ್ರು. ಮಡಿಕೇರಿಯ ಹತ್ತು ದೇವಾಲಯ ಸಮಿತಿಗಳು ಮಂಟಪಗಳನ್ನು ಸಿದ್ಧಪಡಿಸಿ ದಸರಾ ಶೋಭಾಯಾತ್ರೆ ನಡೆಸುವ ರೀತಿಯಲ್ಲೇ ವಿದ್ಯಾರ್ಥಿಗಳು ವಿವಿಧ ಮಂಟಪಗಳನ್ನು ಮಾಡಿ ನೋಡುಗರ ಹುಬ್ಬೇರುವಂತೆ ಮಾಡಿದ್ರು. ಬಳಿಕ ಮಕ್ಕಳ ಸಂತೆಯೊಳಕ್ಕೆ ಬಂದ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ಎಸ್.ರಾಮರಾಜನ್ ಸೇರಿದಂತೆ ವಿವಿಧ ಅಧಿಕಾರಿಗಳು ಪುಟಾಣಿಗಳಿಂದ ವಿವಿಧ ವಸ್ತುಗಳನ್ನು ಖರೀದಿಸಿದ್ರು. ಇನ್ನೂ ಮಡಿಕೇರಿ ನಗರದ ಜನರಂತು ಮಾಮೂಲಿ ಸಂತೆಯಲ್ಲಿ ಖರೀದಿಸುವುದಕ್ಕಿಂತ ಕೊಂಚ ಜಾಸ್ತೀನೇ ಖರೀದಿಸಿದ್ರು. ವಿದ್ಯಾರ್ಥಿಗಳು ದೊಡ್ಡವರಿಗಿಂತ ನಾವೇನು ಕಡಿಮೆ ಅಂತಾ ಸಖತ್ತಾಗೇ ವ್ಯಾಪಾರ ಮಾಡಿ ನೂರಾರು ರೂಪಾಯಿ ಲಾಭಗಳಿಸಿದ್ರು.
ಒಟ್ಟಿನಲ್ಲಿ ಮಂಜಿನನಗರಿ ಮಡಿಕೇರಿಯ ದಸರಾ ಜನೋತ್ಸವದ ಅಂಗವಾಗಿ ನಡೆದ ಮಕ್ಕಳ ದಸರಾ ಎಲ್ಲರನ್ನು ರಂಜಿಸಿತು. ಪುಟಾಣಿಗಳು ವ್ಯಾಪಾರಿಗಳಾಗಿ, ಸ್ವಾತಂತ್ರ ಹೋರಾಟಗಾರರಾಗಿ ಕೊಡಗಿನ ಸಂಸ್ಕೃತಿಯನ್ನು ಬಿಂಬಿಸುವ ಕಾವೇರಿ ಮಾತೆಯಾಗಿ ಸಖತ್ ಕಣ್ಮನ ಸೆಳೆಯುವ ಮೂಲಕ ಮಕ್ಕಳ ದಸರಾಕ್ಕೆ ಮೆರಗು ನೀಡಿದ್ರು. ಇದನ್ನೂ ಓದಿ: ಧಾರವಾಡ| ಖಾಸಗಿ ಬಸ್‌ನಲ್ಲಿ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 98 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಜಪ್ತಿ