ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಬೀದಿಬದಿ ಆಹಾರದಲ್ಲಿ ಇದು ಒಂದು. ಇದನ್ನು ಚೂರುಚೂರು ಮಾಡಿದ ಪರೋಟಾ ಮತ್ತು ಚಿಕನ್‌ನಿಂದ ತಯಾರಿಸಲಾಗುತ್ತದೆ, ಚಿಕನ್‌ನಲ್ಲಿ ವೆರೈಟಿಯಾಗಿ ಮಾಡಲಾಗುವ ರುಚಿಕರವಾದ ಖಾದ್ಯವಿದು. ಸಕತ್ ಸ್ವಾದಿಷ್ಟವಾಗಿಯೂ ಹಾಗೂ ಬೇಗನೇ ಮಾಡಲು ಹೇಳಿ ಮಾಡಿಸಿದ ಅಡುಗೆಯಾಗಿದೆ.
ಬೇಕಾಗುವ ಪದಾರ್ಥಗಳು:
ಪರೋಟಾ: 2-3
ಚಿಕನ್: 1 ಕಪ್ (ಉಳಿದ ಚಿಕನ್ ಕರಿ ಅಥವಾ ಬೇಯಿಸಿದ ಚಿಕನ್)
ಈರುಳ್ಳಿ: 1
ಟೊಮೆಟೊ: 1
ಹಸಿರು ಮೆಣಸಿನಕಾಯಿ: 2-3
ಬೆಳ್ಳುಳ್ಳಿ: 2-3 ಎಸಳು
ಶುಂಠಿ: 1 ಇಂಚು (ಪುಡಿಮಾಡಿದ)
ಗರಂ ಮಸಾಲಾ: 1/2 ಚಮಚ
ಮೆಣಸಿನ ಪುಡಿ: 1/2 ಚಮಚ (ರುಚಿಗೆ ತಕ್ಕಂತೆ)
ಅರಿಶಿನ ಪುಡಿ: 1/4 ಚಮಚ
ಕೊತ್ತಂಬರಿ ಸೊಪ್ಪು: ಸ್ವಲ್ಪ
ಕರಿಬೇವಿನ ಎಲೆಗಳು: ಸ್ವಲ್ಪ
ಎಣ್ಣೆ: 2 ಚಮಚ
ಉಪ್ಪು: ರುಚಿಗೆ ತಕ್ಕಂತೆ
ನಿಂಬೆ ರಸ: 1 ಚಮಚ
ಮಾಡುವ ವಿಧಾನ:
ಉಳಿದ ಅಥವಾ ಮಾಡಿಟ್ಟ ಪರೋಟಾವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಸ್ವಲ್ಪ ನೀರು ಬಳಸಿ ಅದನ್ನು ಮತ್ತೆಗೆ ಮಾಡಿಕೊಳ್ಳಿ. ಬಳಿಕ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಈರುಳ್ಳಿ, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ ಹುರಿಯಿರಿ. ಈರುಳ್ಳಿ ಗೋಲ್ಡನ್ ಬ್ರೌನ್ ಆದ ನಂತರ, ಟೊಮೆಟೊ ಸೇರಿಸಿ ಮತ್ತು ಮೆತ್ತಗಾಗುವವರೆಗೆ ಬೇಯಿಸಿ. ನಂತರ ಗರಂ ಮಸಾಲಾ, ಮೆಣಸಿನ ಪುಡಿ, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಬೇಯಿಸಿದ ಚಿಕನ್ ಮತ್ತು ಕಟ್ ಮಾಡಿಟ್ಟ ಪರೋಟಾವನ್ನು ಬಾಣಲೆಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ, ಸುಮಾರು 5-7 ನಿಮಿಷಗಳ ಕಾಲ ಬೇಯಿಸಿ. ಕರಿಬೇವಿನ ಎಲೆಗಳನ್ನು ಸೇರಿಸಿ, ನಿಂಬೆ ರಸವನ್ನು ಹಿಂಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಬಿಸಿ ಬಿಸಿಯಾಗಿರುವಾಗ ಈ ರುಚಿಕರವಾದ ಚಿಕನ್ ಕೋತು ಪರೋಟಾವನ್ನು ತಿನ್ನಿರಿ. ಇದು ಸರಳವಾದ ಪಾಕವಿಧಾನವಾಗಿದ್ದು, ನಿಮಗೆ ಬೇಕಾದಂತೆ ಮಸಾಲೆಗಳನ್ನು ಸೇರಿಸಿಕೊಳ್ಳಬಹುದು. ಇದಕ್ಕೆ ಉಳಿದ ಚಿಕನ್ ಗ್ರೇವಿಯನ್ನು ಕೂಡ ಬಳಸಬಹುದು.