ಬಾಂಬೆ ಆಲೂಗಡ್ಡೆ ಯುಕೆ ರೆಸ್ಟೋರೆಂಟ್‌ಗಳಲ್ಲಿ ಬಡಿಸುವ ಸಾಮಾನ್ಯ ಭಾರತೀಯ ಖಾದ್ಯ ಎಂದರೆ ನೀವು ನಂಬಲೇಬೇಕು. ಮಸಾಲೆಯುಕ್ತ ಬಾಂಬೆ ಆಲೂಗಡ್ಡೆಯನ್ನು ಸರಳವಾಗಿ ನೀವು ಮನೆಯಲ್ಲೇ ತಯಾರಿಸಬಹುದು. ಇದಕ್ಕೆ ಹೆಚ್ಚಾಗಿ ಎಳೆಯ ಆಲೂಗಡ್ಡೆಯನ್ನು ಬಳಸಲಾಗುತ್ತದೆ. ಇದರಿಂದ ಖಾದ್ಯ ಸ್ವಲ್ಪ ಸಿಹಿ ಮತ್ತು ತುಂಬಾ ರಸವತ್ತಾಗಿ ತಯಾರಾಗುತ್ತದೆ. ಊಟದೊಂದಿಗೆ ಸೈಡ್ ಡಿಶ್ ಇಲ್ಲವೇ ಸ್ನ್ಯಾಕ್ಸ್ ಟೈಮ್‌ನಲ್ಲೂ ಆನಂದಿಸಬಹುದಾದ ಮಸಾಲೆಯುಕ್ತ ಬಾಂಬೆ ಆಲೂಗಡ್ಡೆ ನೀವೂ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಶುಚಿಗೊಳಿಸಿದ ಎಳೆಯ ಆಲೂಗಡ್ಡೆಗಳು – ಅರ್ಧ ಕೆಜಿ
ತುಪ್ಪ – 1 ಟೀಸ್ಪೂನ್
ಕ್ಯಾನೋಲಾ ಎಣ್ಣೆ – 2 ಟೀಸ್ಪೂನ್
ಕರಿಬೇವಿನ ಸೊಪ್ಪು – ಕೆಲವು ಚಿಗುರು
ಜೀರಿಗೆ – 1 ಟೀಸ್ಪೂನ್
ಸಾಸಿವೆ – 1 ಟೀಸ್ಪೂನ್
ತುರಿದ ಶುಂಠಿ – 1 ಇಂಚು
ಹೆಚ್ಚಿದ ಕೆಂಪು ಮೆಣಸಿನಕಾಯಿ – 1
ಮೆಣಸಿನ ಪುಡಿ – 1 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಅರಿಶಿನ – ಕಾಲು ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಹೆಚ್ಚಿದ ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ ಇದನ್ನೂ ಓದಿ: ಇಮ್ಯೂನಿಟಿ ಬೂಸ್ಟಿಂಗ್ ಹೆಸರು ಬೇಳೆಯ ಸೂಪ್ ಮಾಡಿ ಸವಿಯಿರಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಆಲೂಗಡ್ಡೆಯನ್ನು ಬಹುತೇಕ ಮೃದುವಾಗುವವರೆಗೆ ನೀರಿನಲ್ಲಿ ಕುದಿಸಿ. ಬಳಿಕ ನೀರನ್ನು ಬಸಿದು ಆಲೂಗಡ್ಡೆಗಳನ್ನು ಪಕ್ಕಕ್ಕೆ ಇರಿಸಿ.
* ಬಾಣಲೆಯಲ್ಲಿ ತುಪ್ಪ ಮತ್ತು ಕ್ಯಾನೋಲಾ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
* ಅದಕ್ಕೆ ಕರಿಬೇವಿನ ಎಲೆ, ಕತ್ತರಿಸಿದ ಮೆಣಸಿನಕಾಯಿ, ಸಾಸಿವೆ, ಶುಂಠಿ ಮತ್ತು ಜೀರಿಗೆ ಹಾಕಿ ಪರಿಮಳ ಬರುವವರೆಗೆ ಹುರಿಯಿರಿ.
* ಕೊತ್ತಂಬರಿ ಪುಡಿ, ಮೆಣಸಿನ ಪುಡಿ ಮತ್ತು ಅರಿಶಿನ ಪುಡಿ ಸೇರಿಸಿ ಮಿಶ್ರಣ ಮಾಡಿ.
* ಅದಕ್ಕೆ ಆಲೂಗಡ್ಡೆಯನ್ನು ಹಾಕಿ ಮತ್ತು ಅದು ಮಸಾಲೆಯೊಂದಿಗೆ ಚೆನ್ನಾಗಿ ಲೇಪಿಸುವವರೆಗೆ ಮಿಶ್ರಣ ಮಾಡುತ್ತಾ ಫ್ರೈ ಮಾಡಿ.
* ಈಗ ಉಪ್ಪು ಹಾಕಿ ಮಿಶ್ರಣ ಮಾಡಿ. ಬಳಿಕ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
* ಇದೀಗ ಮಸಾಲೆಯುಕ್ತ ಬಾಂಬೆ ಆಲೂಗಡ್ಡೆ ತಯಾರಾಗಿದ್ದು, ಬೆಚ್ಚಗೆ ಬಡಿಸಿ. ಇದನ್ನೂ ಓದಿ: ಟ್ರೈ ಮಾಡಿ ಹಲಸಿನಕಾಯಿ ಮಂಚೂರಿ