ಸಾರು ಅಥವಾ ರಸಂ ನಮ್ಮ ದಿನನಿತ್ಯದ ಊಟದ ಲಿಸ್ಟ್ನಲ್ಲಿ ಇರುವ ಪ್ರಮುಖ ಭಾಗ. ನಾವು ಹಲವು ಪದಾರ್ಥಗಳನ್ನು ಬಳಸಿ ವಿವಿಧ ರೀತಿಯಲ್ಲಿ ಸಾರು ಅಥವಾ ರಸಂ ಅನ್ನು ಮಾಡುತ್ತೇವೆ. ಆದರೆ ಪ್ರತಿ ಬಾರಿ ಏನಾದರೂ ಡಿಫರೆಂಟ್ ಮಾಡೋದು ಎಲ್ಲರಿಗೂ ಸುಸ್ತು. ನಾವಿಂದು ಡಿಫರೆಂಟ್ ರೆಸಿಪಿ ಅನನಾಸು ರಸಂ (Pineapple Rasam) ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ಹುಳಿ, ಸಿಹಿ, ಖಾರವಾದ ಈ ರಸಂ ಅನ್ನು ನೀವೂ ಒಮ್ಮೆ ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಮಧ್ಯಮ ಗಾತ್ರದಲ್ಲಿ ಹೆಚ್ಚಿದ ಅನನಾಸು – ಅರ್ಧ ಕಪ್
ಸಣ್ಣಗೆ ಹೆಚ್ಚಿದ ಅನನಾಸು – ಅರ್ಧ ಕಪ್
ಟೊಮೆಟೊ – 2 (1 ರುಬ್ಬಲು ಹಾಗೂ 1 ಬೇಯಿಸಲು)
ಸೀಳಿದ ಮೆಣಸಿನಕಾಯಿ – 2
ತೊಗರಿ ಬೇಳೆ – ಕಾಲು ಕಪ್
ರಸಂ ಪುಡಿ – 1 ಟೀಸ್ಪೂನ್
ಬೆಲ್ಲ – 1 ಸಣ್ಣ ತುಂಡು
ಹುಣಿಸೆಹಣ್ಣು – ನಿಂಬೆ ಗಾತ್ರದಷ್ಟು (ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ)
ಕರಿಬೇವಿನ ಸೊಪ್ಪು – ಕೆಲವು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಅರಿಶಿನ – 1 ಟೀಸ್ಪೂನ್
ಉಪ್ಪು -ರುಚಿಗೆ ತಕ್ಕಷ್ಟು
ಪುಡಿ ಮಾಡಲು:
ಜೀರಿಗೆ – ಒಂದೂವರೆ ಟೀಸ್ಪೂನ್
ಕಾಳು ಮೆಣಸು – 1 ಟೀಸ್ಪೂನ್
ಒಗ್ಗರಣೆಗೆ:
ತುಪ್ಪ – 2 ಟೀಸ್ಪೂನ್
ಸಾಸಿವೆ – 1 ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಹಿಂಗ್ – ಚಿಟಿಕೆ ಇದನ್ನೂ ಓದಿ: ಸಖತ್ ಟೇಸ್ಟಿ ಕರಿಬೇವು ಸೊಪ್ಪಿನ ಚಟ್ನಿ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಪ್ರೆಶರ್ ಕುಕ್ಕರ್ ತೆಗೆದುಕೊಂಡು, ಅದರಲ್ಲಿ ತೊಗರಿ ಬೇಳೆ, ಅರಿಶಿನ, 1 ಕಪ್ ನೀರು ಹಾಕಿ 5 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
* ಬಳಿಕ ಬೇಳೆಯನ್ನು ಮ್ಯಾಶ್ ಮಾಡಿ ಪಕ್ಕಕ್ಕಿಡಿ.
* ಒಂದು ಪ್ಯಾನ್ ತೆಗೆದುಕೊಂಡು, ಅದರಲ್ಲಿ ಜೀರಿಗೆ ಮತ್ತು ಕಾಳುಮೆಣಸನ್ನು ಪರಿಮಳ ಬರುವವರೆಗೆ ಹುರಿದುಕೊಳ್ಳಿ. ಬಳಿಕ ತಣ್ಣಗಾಗಿಸಿ, ಮಿಕ್ಸರ್ ಜಾರ್ಗೆ ಹಾಕಿ ಒರಟಾಗಿ ಪುಡಿ ಮಾಡಿ. ಬಳಿಕ ಪಕ್ಕಕ್ಕಿಡಿ.
* ಈಗ ಮಿಕ್ಸರ್ ಜಾರ್ಗೆ ಅನನಾಸು ಹಾಗೂ ಕತ್ತರಿಸಿದ 1 ಟೊಮೆಟೊ ಹಾಕಿ ನಯವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಬಳಿಕ ಅದನ್ನು ಪಕ್ಕಕ್ಕಿಡಿ.
* ಈಗ ಒಂದು ಪಾತ್ರೆಯಲ್ಲಿ ಉಳಿದ ಅನನಾಸು, ಕತ್ತರಿಸಿದ ಇನ್ನೊಂದು ಟೊಮೆಟೊ ಹಾಗೂ ಸೀಳಿದ ಹಸಿರು ಮೆಣಸಿನಕಾಯಿ ಹಾಕಿ 1 ಕಪ್ ನೀರು ಸೇರಿಸಿ, ಮುಚ್ಚಿ, 5 ನಿಮಿಷ ಬೇಯಿಸಿಕೊಳ್ಳಿ.
* ಅನನಾಸು ಹಾಗೂ ಟೊಮೆಟೊ ಸ್ವಲ್ಪ ಮೃದುವಾದ ಬಳಿಕ ರುಬ್ಬಿಟ್ಟುಕೊಂಡಿದ್ದ ಅನನಾಸು ಹಾಗೂ ಟೊಮೆಟೊ ಪ್ಯೂರಿಯನ್ನು ಸೇರಿಸಿ ಮಿಶ್ರಣ ಮಾಡಿ.
Advertisement
* ಉಪ್ಪು, ಅರಿಶಿನ, ಜೀರಿಗೆ ಹಾಗೂ ಕರಿಮೆಣಸಿನ ಪುಡಿ, ರಸಂ ಪುಡಿ, ಹುಣಿಸೆಹಣ್ಣಿನ ರಸ ಹಾಗೂ ಬೆಲ್ಲ ಸೇರಿಸಿ ಮಿಶ್ರಣ ಮಾಡಿ.
* ಈಗ ಬೇಯಿಸಿಟ್ಟುಕೊಂಡಿದ್ದ ತೊಗರಿಬೇಳೆ ಮಿಶ್ರಣವನ್ನು ಸೇರಿಸಿ, ಸ್ಥಿರತೆ ನೋಡಿಕೊಂಡು, ಅಗತ್ಯವಿರುವಷ್ಟು ನೀರು ಸೇರಿಸಿ, ಉರಿಯನ್ನು ಮಧ್ಯಮದಲ್ಲಿಟ್ಟುಕೊಂಡು, ಕುದಿಸಿಕೊಳ್ಳಿ.
* ಕರಿಬೇವಿನ ಸೊಪ್ಪು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ, ಒಮ್ಮೆ ಕುದಿ ಬರಿಸಿ, ಕೆಳಗಿಳಿಸಿ.
* ಈಗ ಒಗ್ಗರಣೆ ತಯಾರಿಸಲು ಸಣ್ಣ ಪ್ಯಾನ್ ತೆಗೆದುಕೊಂಡು, ಅದರಲ್ಲಿ ತುಪ್ಪ ಬಿಸಿ ಮಾಡಿ, ಸಾಸಿವೆ ಹಾಕಿ, ಹಿಂಗ್ ಸೇರಿಸಿ ಸಿಡಿಸಿಕೊಳ್ಳಿ. ಬಳಿಕ ರಸಂಗೆ ಈ ಮಿಶ್ರಣವನ್ನು ಸೇರಿಸಿ.
* ಇದೀಗ ಅನನಾಸು ರಸಂ ತಯಾರಾಗಿದ್ದು, ಬಿಸಿಬಿಸಿ ಅನ್ನದೊಂದಿಗೆ ಸವಿಯಿರಿ. ಇದನ್ನೂ ಓದಿ: ಸೂಪರ್ ಟೇಸ್ಟಿ ಈರುಳ್ಳಿ ಹೂವಿನ ಗೊಜ್ಜು
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k